ಅಪ್ಪ :-

Spread the love

ಅಪ್ಪ :-

 

ಅಪ್ಪ ಎಂಬ ಪದವು ಎಷ್ಟು ಸುಂದರ

ಮುಗಿಲಿಗಿಂತಲೂ ಮಿಗಿಲಾದ ಎತ್ತರ.

ತಾಯಿಯಂತೆ ತೋರುವೆ ಪ್ರೀತಿಯನು

ತೀರಿಸಲಾಗದು ನಿನ್ನಯ ಋಣವನು.

ವರ್ಣಿಸಲಾಗದು ಅಪ್ಪನ ಪ್ರೀತಿ

ಅದೊಂದೇ ನಮಗೆಂದಿಗೂ ಆಸ್ತಿ.

ಸಿಟ್ಟು ಬಂದಾಗ ಬೈಯುವೆ

ಆದರದು ಎಂದಿಗದು ಕ್ಷಣಿಕ.

ನನ್ನೆಲ್ಲ ಇಷ್ಟ ಕಷ್ಟಗಳನು ಅರಿತಿರುವೆ

ನನ್ನೆಲ್ಲ ಹಠಗಳ ಮಿತ್ರನಾಗಿ ಬಿಡಿಸಿರುವೆ.

 

ಇನ್ನೇನು ಬೇಕಿಲ್ಲ ಬಾಳಲ್ಲಿ ನನಗೆ

ಸಾರ್ಥಕವಾಗಿದೆ ನನ್ನೀ ಜೀವನ.

ಗ್ರೀಷ್ಮಿತ ಆರ್ ಎಸ್. ವಿದ್ಯಾರ್ಥಿನಿ

8ನೇ ತರಗತಿ ಜಿ ವಿಭಾಗ

ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್

ಅನುಭವಮಂಟಪ, ದಾವಣಗೆರೆ.

Leave a Reply

Your email address will not be published. Required fields are marked *