*ಕೊಪ್ಪಳ ಜಿಲ್ಲಾ ಉತ್ಸವದಲ್ಲಿ 3 ನೆಯ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನ*
ಸಮ್ಮೇಳನಾಧ್ಯಕ್ಷರಾಗಿ ಕಿನ್ನಾಳದದ ಕಲಾವಿದ ಮತ್ತು ಶಿಕ್ಷಕ ಶ್ರೀ ಶ್ರೀನಿವಾಸ ಚಿತ್ರಗಾರ ಆಯ್ಕೆ
ಕೊಪ್ಪಳ : ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ 17ನೇ ಬಾರಿಗೆ ಕೊಪ್ಪಳ ಜಿಲ್ಲಾ ಉತ್ಸವವನ್ನು ಅಗಸ್ಟ್ 24 . 25 ಮತ್ತು 26 ರಂದು ಮೂರು ದಿನಗಳ ಕಾಲ
ಕೊಪ್ಪಳ ಸಾಹಿತ್ಯ ಭವನದಲ್ಲಿ
ನಡೆಸಲಿದೆ. ಕೊಪ್ಪಳ ಜಿಲ್ಲೆಯ ಐತಿಹಾಸಿಕ
ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಗ್ರಾಮೀಣ ಜಾನಪದ ಕಲೆಗಳ ಅನಾವರಣ. ಜಿಲ್ಲೆಯ ಪ್ರತಿಭಾವಂತ ಪ್ರತಿಭೆಗಳ ಪ್ರತಿಭಾ ಶೋಧ
ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಿದೆ
ನಿನ್ನೆ ಕೊಪ್ಪಳದಲ್ಲಿ ನಡೆದ
ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ
ಜಿಲ್ಲೆಯ ಯುವ ಸಾಹಿತಿ ಕಲಾವಿದರಿಗೆ ವೇದಿಕೆಯ ಒದಗಿಸಿಕೊಡುವ ಬಗ್ಗೆ ಚರ್ಚಿಸಿ ಹೆಚ್ಚಿನ ಅವಕಾಶವನ್ನು ಸ್ಥಳೀಯ ಕಲಾವಿದರಿಗೆ
ಸಾಹಿತಿಗಳಿಗೆ ನೀಡಲು ನಿರ್ಣಯಿಸಲಾಯಿತು
3 ನೆಯ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲಾಯಿತು. ಕೊನೆಗೆ
ಕೊಪ್ಪಳ ಕಿನ್ನಾಳದದ ಕಲಾವಿದ ಮತ್ತು ಶಿಕ್ಷಕ ಶ್ರೀ ಶ್ರೀನಿವಾಸ ಚಿತ್ರಗಾರ
ಅವರನ್ನ
3 ನೆಯ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ
ಸಮ್ಮೇಳನದ
ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಮೂಲತಹ ಸಾಹಿತಿಗಳಾದ ಇವರು ಸುಮಾರು 25 ಪುಸ್ತಕಗಳನ್ನ ತಮ್ಮ ಪ್ರಕಾಶನ ಮೂಲಕ ಸಾಹಿತ್ಯ ಲೋಕಕ್ಕೆ ಜಿಲ್ಲಾ ಹಂತದಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಜಿಎಸ್ ಗೋನಾಳ ಅವರ ಜೊತೆ ಸೇರಿ ಅನೇಕ ಸಾಹಿತ್ಯ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಮತ್ತು ಕರಕುಶಕಲೆಯಲ್ಲಿ. ಚಿತ್ರಕಲೆ ಹಾಗೂ ಮರಗೆತ್ತನೆಯಲ್ಲಿ ವಿಶೇಷ ನೈಪುಣ್ಯತೆ ಪಡೆದಿರುವ ಶ್ರೀನಿವಾಸ್ ಚಿತ್ರದಾರವರು ಕಿನ್ನಾಳದವರು. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮಕ್ಕಳ ಸಾಹಿತ್ಯದ ಕುರಿತು ಉತ್ತಮ ಕೃತಿಗಳನ್ನ ನೀಡಿದ್ದಾರೆ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದಾರೆ
ಮಕ್ಕಳ ಸಾಹಿತಿಯಂದೆ ಖ್ಯಾತರಾದವರು
ಇವರ ಸಾಹಿತ್ಯ ಹಾಗೂ ಕಲಾ ಕ್ಷೇತ್ರದ ಸೇವೆಗಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ .
ಅವರ ಪುಸ್ತಕದ
ಕ್ಷೇತ್ರದ
ಸೇವೆಯನ್ನ ಪರಿಗಣಿಸಿ 24 ರಂದು ನಡೆಯುವ
ಪುಸ್ತಕ ಪ್ರಕಾಶಕರ ಸಮ್ಮೇಳನದ ಸರ್ವಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಹಿರಿಯ ಸಾಹಿತಿ
ಜಿ ಎಸ್ ಗೋನಾಳ್ ಸಭೆಗೆ ಆಗಮಿಸಿದ ಆಸಕ್ತರನ್ನ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ಜಿಲ್ಲೆಯ ಪ್ರತಿಭಾವಂತ ಹಾಗೂ ಯುವ ಸಾಹಿತಿ ಮತ್ತು ಕಲಾವಿದರಿಗೆ ಜಿಲ್ಲಾ ಉತ್ಸವದ ವೇದಿಕೆಯಲ್ಲಿ ಅವಕಾಶ ನೀಡುವ ಮೂಲಕ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು
ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿನಂತಿಸಿದರು.
ಹಿರಿಯ ಪತ್ರಕರ್ತ ಎಂ ಸಾಧಿಕ ಅಲಿ ಮಾತನಾಡುತ್ತಾ
J H ಪಟೇಲರು ಏಳು ಜಿಲ್ಲೆಗಳನ್ನ ತಮ್ಮ ಅವಧಿಯಲ್ಲಿ ರಚಿಸಿದರು ನಮ್ಮ ಕೊಪ್ಪಳ ಜಿಲ್ಲೆ ಮಾತ್ರ ನಿರಂತರವಾಗಿ ಜಿಲ್ಲಾ ಉತ್ಸವವನ್ನು ಮಾಡುತ್ತಾ ಬಂದಿದೆ . ಜಿಲ್ಲೆಯ ಜನಪ್ರತಿನಿಧಿಗಳು ರಾಜಕಾರಣಿಗಳು ಅಧಿಕಾರಿಗಳು ಜಿಲ್ಲಾ ಉತ್ಸವಕ್ಕೆ ಬೆಂಬಲಿಸಿ ಅದ್ದೂರಿಯಾಗಿ ಮಾಡಲು ಸಹಕಾರ ನೀಡಬೇಕೆಂದು ವಿನಂತಿಸಿದರು
ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಹಿರಿಯ ಸಾಹಿತಿ ಮಹಾಂತೇಶ್ ಮಲ್ಲನ್ ಗೌಡ, ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ್
ಹಿರಿಯ ಪತ್ರಕರ್ತ
ವೈ ಬಿ ಜೂಡಿ, ಗೌರವಾಧ್ಯಕ್ಷ
ಎಂ ಬಿ ಅಳವಂಡಿ, ಪತ್ರಕರ್ತರಾದ
ಶಿವಕುಮಾರ್ ಹಿರೇಮಠ,
ಉಮೇಶ್ ಪೂಜಾರ್, ಉದಯ್ ತೋಟದ, ಪ್ರಕಾಶ್ ಮಂಗಳೂರು,
ಮೇಘರಾಜ್ ಗೋನಾಳ್,
ಅತಿಕ ಅಹಮದ್, ಮಹೀಬೂಬ ಖಾನ್ ಸೇರಿದಂತೆ ಇತರ ಉಪಸ್ಥಿತರಿದ್ದರು ಹೆಚ್ಚಿನ ಮಾಹಿತಿಗಾಗಿ ಮಹೇಶ ಬಾಬು ಸುರ್ವೆ ಮೊ : 9845338160
ಸಂಪರ್ಕಿಸಲು ಕೋರಿದೆ
ಎಂದು ಉತ್ಸವದ ಸಂಚಾಲಕ ಮತ್ತು ನಾಗರಿಕರು ವೇದಿಕೆ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ತಿಳಿಸಿದರು.
ವರದಿ ಸಂಪಾದಕೀಯ