🌹🌹ಕೊಪ್ಪಳ ಜಿಲ್ಲೆಯೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ 🌹🌹ನೂತನ ಅಧ್ಯಕ್ಷರಿಗೂ ಮತ್ತು ಉಪಾಧ್ಯಕ್ಷರಿಗೂ ಶುಭಾಶಯಗಳು🌹🌹🌹🌹
ತಾವರಗೇರಾ ಪಟ್ಟಣವು ಕುಷ್ಟಗಿ ತಾಲೂಕಿನಲ್ಲಿಯೆ ಬಹು ದೊಡ್ಡ ಪಟ್ಟಣವಾಗಿದ್ದು. ಈ ಪಟ್ಟಣದ ಅಭಿವೃದ್ಧಿಯ ಜೊತೆಗೆ ದಿನಗೂಲಿ ನೌಕರರ, ಕೂಲಿ ಕಾರ್ಮಿಕರ, ಬಡ, ಬಗ್ಗರ, ದೀನ ದಲಿತರ ಅಭಿವೃದ್ಧಿಗೆ ಹಾಗೂ ಅವರ ಏಳಿಗೆಗೆ ಅಗಲಿರುಳು ಎನ್ನದೆ ತಮ್ಮ ಅಮೂಲ್ಯವಾದ ಸಮಯವನ್ನು ಬಳಸಿಕೊಂಡು ಅವರ ಅಭಿವೃದ್ಧಿಗೆ ಶ್ರಮಿಸಿ. ಹಾಗೂ ತಾವರಗೇರಾ ಪಟ್ಟಣದ ಪ್ರತಿಯೊಂದು ವಾರ್ಡಿನಲ್ಲಿರುವ ಮೂಲಭೂತ ಸಮಸ್ಯೆಗಳನ್ನ ಕೂಡಲೆ ಪರಿಹರಿಸಿ ಜೊತೆಗೆ ವಸತಿ ಮತ್ತು ನಿವೇಶನ ಯೋಜನಾಡಿಯಲ್ಲಿ (ಪಟ್ಟಣದ 18ನೆ ವಾರ್ಡಿನ ವಿಠಲಪುರ ಗ್ರಾಮದ ಪಕ್ಕದಲ್ಲಿ) ಇನ್ನೂ 55 ಪಲಾನುಭವಿಗಳಿಗೆ ಹಕ್ಕುಪತ್ರ ನೀಡಿರುವುದಿಲ್ಲ ಕೂಡಲೆ ಆ ಪಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಸಹಕರಿಸಬೇಕು, ಮತ್ತು ಇತರೆ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಲು ಈ ನಮ್ಮ ಕೀರು ಮನವಿಯನ್ನು ಸ್ವೀಕರಿಸಿಕೊಂಡು ತಮ್ಮ ಶುಭದಿನದಿಂದ ಪ್ರತಿಯೊಂದು ದಿನವೂ ಶುಭವಾಗಿ ಆಗಮಿಸಲೆಂದು ಹೃದಯ ತುಂಬಿ ಹಾರೈಸುವೆವು 🌹🌹ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಮತ್ತೊಮ್ಮೆ ಶುಭಾಶಯಗಳು 🌹🌹🌹🌹 ವರದಿ :- ಸಂಪಾದಕೀಯ