ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಪ್ರಾರಂಭ.
ಯಲಬುರ್ಗಾ : ತಾಲೂಕಿನ ಮುಧೋಳ ಗ್ರಾಮ ದಿಂದ ಯಲಬುರ್ಗಾ, ಕುಕನೂರು, ಇಟಗಿ ಆದರ್ಶ ಶಾಲೆಗೆ ಹೋಗುವ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದ ಕಾರಣ ಬಹುವರ್ಷಗಳ ಬೇಡಿಕೆ ಇಂದು ಈಡೇರಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ರಾದ ಮಮತಾಜಬಿ ಹಿರೇಮನಿ ಅವರು ಇಂದು ಬಸ್ ಪೂಜೆ ಮಾಡುವದರೊಂದಿಗೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಹಿರಿಯ ಸದಸ್ಯರಾದ ಬಸಪ್ಪ ಅಕ್ಕಿ ಅವರು ಮಾತನಾಡಿ, ಗ್ರಾಮೀಣ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮುಧೋಳ ಗ್ರಾಮ ದಿಂದ ಯಲಬುರ್ಗಾ, ಕುಕನೂರು, ಇಟಗಿ ಆದರ್ಶ ಶಾಲೆಗೆ ಹೋಗುವ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದ ಕಾರಣ ಮುಧೋಳ ಮಾರ್ಗವಾಗಿ ಸಾರಿಗೆ ಸಂಪರ್ಕ ಕಲ್ಪಿಸಲು ಬಹುವರ್ಷಗಳ ಬೇಡಿಕೆಯಾಗಿತ್ತು. ಈಗ ಬಹಳ ಅನುಕೂಲವಾಗಿದೆ.
ಯಲಬುರ್ಗಾದ ಮಾನ್ಯಶಾಸಕರಿಗೆ
ಘಟಕ ವ್ಯವಸ್ಥಾಪಕರಿಗೆ ಹಾಗೂ ಸಿಬ್ಬಂದಿಯವರಿಗೆ ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಸಂಭ್ರಮದಿಂದ ಪ್ರಯಾಣಿಸಿದರು. ಈ ವೇಳೆಯಲ್ಲಿ ಗ್ರಾಮದ ಮುಖಂಡರಾದ ಹೇಮರೆಡ್ಡಿ ರೆಡ್ಡರ, ಕಳಕಪ್ಪ ಕುರಿ, ಚನಸಂಗಪ್ಪ ಸಿಳ್ಳಿನ, ನಿವೃತ್ತ ಸಾರಿಗೆ ಇಲಾಖೆ ಬಸವರಾಜ್ ಬಳಿಗಾರ, ಈರಣ್ಣ ತಮಿನಾಳ, ಶರಣಪ್ಪ ಬಳಿಗಾರ್, ಮತ್ತು ಗ್ರಾಪಂ.ಸರ್ವ ಸದಸ್ಯರು, ಗ್ರಾಮದ ಪ್ರಮುಖರು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು, ವರದಿ :- ಹುಸೇನ್ ಭಾಷ ಮೋತೆಖಾನ್