*ಯಲಬುರ್ಗಾ ಪಪಂ ಅಧ್ಯಕ್ಷರಾಗಿ ಅಂದಯ್ಯ ಕಳ್ಳಿಮಠ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಬೇಲೇರಿ ಆಯ್ಕೆ*
ಯಲಬುರ್ಗಾ; ಸ್ಥಳಿಯ ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಅಂದಯ್ಯ ಕಳ್ಳಿಮಠ,ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಬೇಲೆರಿ ಅವಿರೋಧವಾಗಿ ಆಯ್ಕೆಯೊಳ್ಳುವ ಮೂಲಕ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಿತು.
ಪಪಂಗೆ ಒಟ್ಟು 15 ಜನ ಸದಸ್ಯರ ಸಂಖ್ಯೆ ಹೊಂದಿದೆ.ಬಿಜೆಪಿ 11 ಹಾಗೂ 4 ಜನ ಕಾಂಗ್ರೆಸ್ ಸದಸ್ಯರ ಬಲ ಹೊಂದಿದೆ.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಂದಯ್ಯ ಕಳ್ಳಿಮಠ,ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿಜಯಲಕ್ಷ್ಮಿ ಬೇಲೆರಿ,ಕಾಂಗ್ರೆಸ್ ನಿಂದಾ ಡಾ.ನಂದಿತಾ ದಾನರೆಡ್ಡಿ,ಉಪಾಧ್ಯಕ್ಷ ಸ್ಥಾನಕ್ಕೆ ರೇವಣಪ್ಪ ಹಿರೇಕುರಬರ ತಮ್ಮ ನಾಮಪತ್ರ ಸಲ್ಲಿಸಿದರು. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸು ಪಡೆದರು.ನಂತರ ಚುನಾವಣಾ ಧಿಕಾರಿ ಬಸವರಾಜ ತೆನ್ನಳ್ಳಿ ಬಿಜೆಪಿಯ ಅಂದಯ್ಯ ಕಳ್ಳಿಮಠ ಅಧ್ಯಕ್ಷರಾಗಿ, ವಿಜಯಲಕ್ಷ್ಮಿ ಬೇಲೆರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು.
ಬಿಜೆಪಿಯಿಂದ ವಿಜಯೋತ್ಸವ;ಬಿಜೆಪಿ ಪಕ್ಷ ಎರಡನೇಯ ಭಾರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬಿಜೆಪಿ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸಿ,ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಬಸವರಾಜ ಗೌರ,ಬಸವಲಿಂಗಪ್ಪ ಭೂತೆ,ಸಿ.ಎಚ್.ಪಾಟೀಲ, ವೀರಣ್ಣ ಹುಬ್ಬಳ್ಳಿ,ಸೇರಿದಂತೆ ಬಿಜೆಪಿಯ ಸರ್ವ ಸದಸ್ಯರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ : ಹುಸೇನ್ ಮೊತೇಖಾನ್