ಮುಧೋಳ ಗ್ರಾಮದಲ್ಲಿ ಸ್ಟ್ರೀಟ್‌ಲೈಟ್ ಪೋಲ್ ಶಿಥಿಲ: ವಿದ್ಯುತ್ ಕಂಬ ಬದಲಾವಣೆಗೆ ಕಣ್ಮುಚ್ಛಿ ಕುಳಿತ ಜೆಸ್ಕಾಂ ಅಧಿಕಾರಿಗಳು ?
ವಿದ್ಯುತ್ ಕಂಬದ ಶಿಥಿಲ ಉರುಳಿ ಬಿದ್ದರೆ ಪ್ರಾಣಕ್ಕೆ ಸಂಚಕಾರ
• ತಾಲೂಕಿನ ಮುಧೋಳ ಗ್ರಾಮದ 2ನೇ ವಾರ್ಡಿನ ದುರ್ಗಾ ದೇವಿ ದೇವಸ್ಥಾನದ ಹಿಂದುಗಡೆ ಬೀದಿ- ದೀಪ (ಸ್ಟ್ರೀಟ್ ಲೈಟ್ ಪೋಲ್) ವಿದ್ಯುತ್ ಕಂಬದ ಕೆಳಭಾಗದಲ್ಲಿ ಕಾಂಕ್ರೀಟ್ ಬಿರುಕು ಬಿಟ್ಟಿದ್ದು ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ. ಹೀಗೋ- ಹಾಗೋ ಬೀಳುವ ಹಂತಕ್ಕೆ ತಲುಪಿದ್ದು, ಯಾವಾಗ ಮುರಿದು ಬೀಳುತ್ತದೆಯೋ ಎಂಬ ಆತಂಕದಲ್ಲಿಯೇ ಈ 2ನೇ ವಾರ್ಡಿನ ನಿವಾಸಿಗಳು ವಾಸಿಸುವಂತಾಗಿದೆ. ಸಕಾಲಕ್ಕೆ ಕಂಬ ಬದಲಾವಣೆ ಮಾಡಬೇಕಾದ ಜೆಸ್ಕಾಂ ಶಾಖಾಧಿಕಾರಿಗಳು, ಕಣ್ಮುಚ್ಚಿ ಕುಳಿತಿದ್ದಾರೆ. ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಕಂಬ ನೆಲಕ್ಕುರುಳಿದರೆ ಅಪಾಯ ಫಿಕ್ಸ್:* ಈ ವಿದ್ಯುತ್ ಕಂಬ ಬಿರುಕು ಬಿಟ್ಟು ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ ಸುತ್ತಲೂ ಭೋವಿ (ವಡ್ಡರ ) ಸಮಾಜದ ನಿವಾಸಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಕಸ್ಮಾತ್ ಜೋರಾದ ಗಾಳಿ ಮಳೆಗೆ ಕಂಬ ಉರುಳಿ ಬಿದ್ದು ವಿದ್ಯುತ್ ಅವಘಡ ಸಂಭವಿಸಿದರೆ, ಅಲ್ಲಿರುವ ನಿವಾಸಿಗಳಿಗೆ ಭಾರಿ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
*ಕಣ್ಮುಚ್ಚಿ ಕುಳಿತ ಜೆಸ್ಕಾಂ ಶಾಖಾಧಿಕಾರಿಗಳು-ಗ್ರಾಂ ಪಂ,ಸದಸ್ಯರು:* ಮುಧೋಳ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದ ಹಿಂದುಗಡೆ ಎರಡು ವಿದ್ಯುತ್ ಕಂಬಗಳು ಕೂಡ ಶಿಥಿಲ ಗೊಂಡಿವೆ ಒಂದು ಕಂಬ ಎರಡು ವರ್ಷಗಳ ಹಿಂದೆಯೇ ಈ ಶಿಥಿಲ ಗೊಂಡದ್ದು ಈ ವಿದ್ಯುತ್ ಕಂಬವನ್ನು ಸಕಾಲದಲ್ಲಿ ಸರಿಪಡಿಸುವಂತೆ ಮತ್ತು ಕಂಬ ಬದಲಾವಣೆ ಮಾಡುವಂತೆ, ವಾರ್ಡಿನ ನಿವಾಸಿಗಳು ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಸಹ ತಮಗೂ-ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ, ಸುಮ್ಮನಿದ್ದಾರೆ. ಮತ್ತು ಯಲಬುರ್ಗಾ ತಾಲೂಕಿನ ಜೆಸ್ಕಾಂ ಶಾಖಾಧಿಕಾರಿಗಳು ಕೂಡ ನೋಡುತ್ತಿಲ್ಲ ಅವರು ಕೂಡ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಕೆಂಡ-ಕಾರಿದ್ದಾರೆ.
ಅಪಾಯ ಸಂಭವಿಸಿದರೆ ಯಾರು ಹೊಣೆಗಾರರು ? ಜೆಸ್ಕಾಂ ಅಧಿಕಾರಿಗಳು ವಾರ್ಡಿನ ನಿವಾಸಿಗಳ ಜೀವನದಲ್ಲಿ ಆಟವಾಡುತ್ತಿರುವುದು ವಿಪರ್ಯಾಸವಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಕ್ರಮ ಕೈಗೊಂಡು ಈ ಅನಾಹುತವನ್ನು ತಪ್ಪಿಸಲು ಮುಂದಾಗುವರಾ.? ಎಂಬುದನ್ನು ಕಾದು ನೋಡಬೇಕಿದೆ.
( ಕೋಟ )
ಈ ವಿದ್ಯುತ್ ಕಂಬಕ್ಕೆ ಯಾವ ಆಸರೆಯು ಇಲ್ಲಾ ವಿದ್ಯುತ್ ಕಂಬದ ಕೆಳಭಾಗದಲ್ಲಿ ಸಿಮೆಂಟ್ ಪದರು ಉದುರಿದ ಪರಿಣಾಮ, ಕಬ್ಬಿಣದ ಸರಳುಗಳು ತೇಲಿ ಸ್ಟ್ರೀಟ್ ಲೈಟ್ ಪೋಲ್ ಮುರಿದು ಬೀಳುವ ಅಂತಕ್ಕೆ ತಲುಪಿದೆ. ಸ್ಥಳೀಯ ಗ್ರಾಮ ಪಂಚಾಯತಿಗೆ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಹಲವುಬಾರಿ ಗಮನಕ್ಕೆ ತಂದರೂ ಸಹ ಕಂಬ ಬದಲಾವಣೆಗೆ ಮುಂದಾಗುತ್ತಿಲ್ಲ. ಅಕಸ್ಮಾತ್ ಕಂಬ ಮುರಿದು ಅಪಾಯ ಸಂಭವಿಸಿದರೆ ಅದಕ್ಕೆ ಜೆಸ್ಕಾಂ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಯಮನೂರಪ್ಪ ವಡ್ಡರ ಮುಧೋಳ ಗ್ರಾಮ 2ನೇ ವಾರ್ಡಿನ ನಿವಾಸಿ.
ವರದಿ :- ಹುಸೇನ್ ಭಾಷ ಮೋತೆಖಾನ್