ಕೊಪ್ಪಳ: ಸಂಗನಾಳದ ದಲಿತ ಯುವಕ ಈರಪ್ಪ ಬಂಡಿ ಹಾಳ ರನ್ನು ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಮನವಿ.
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಈರಪ್ಪ ಬಂಡಿಹಾಳ ಇವರ ಕ್ಷೌರ ನಿರಾಕರಿಸಿ ಕೊಲೆ ವಿರೋಧಿಸಿ ಮತ್ತು ಬಿಹಾರದ 14ವರ್ಷದ ದಲಿತ ಬಾಲಕಿ ಅಪಹರಣಮಾಡಿ ಅತ್ಯಾಚಾರ ಮಾಡಿ.ಬರ್ಬರ ಹತ್ಯೆಮಾಡಿದ. ಹಾಗೂ ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಹತ್ಯೆ ಮಾಡಿದವರಿಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಈರಪ್ಪ ಬಂಡಿಹಾಳ ಇವರನ್ನು ಮುದುಕಪ್ಪ ಹಡಪದ ಎಂಬ ವ್ಯಕ್ತಿಯ ಸಲೋನಗೆ ಹೋಗಿ ಕ್ಷೌರಮಾಡಿಸಲು ಹೋದಾಗ ಇಬ್ಬರ ಮಧ್ಯೆ ಸಂಘರ್ಷ ನಡೆದು ಕ್ಷೌರ ಮಾಡುವ ಕತ್ತರಿಯಿಂದ ಚುಚ್ಚಿ ಚುಚ್ಚಿ ಚುಚ್ಚಿ ಕೊಲೆ ಮಾಡಿರುವ ಘಟನೆ ಅತ್ಯಂತ ನೋವಿನ ವಿಷಯವಾಗಿದೆ. ಈ ಘಟನೆಯನ್ನು ಸೂಕ್ತವಾಗಿ ತನಿಖೆ ನಡೆಸಬೇಕು. ಆದ್ದರಿಂದ ಕೊಲೆ ಮಾಡಿದ ಮುದುಕಪ್ಪ ಹಡಪದ ಇತನಿಗೆ ಕಠಿಣವಾಗಿ ಕಾನೂನು ಕ್ರಮ ಜರುಗಿಸಬೇಕು.
ಇನ್ನೊಂದೆಡೆ ಈ ಕೊಲೆ ಕೇಸಿನಲ್ಲಿ ಜಾತಿ ಬಣ್ಣ ಬಳಿಯದೆ ನಿಷ್ಪಕ್ಷಪಾತ ತನಿಖೆ ಮಾಡಬೇಕು. ಹಾಗೂ ಊರಿನ ಜನರ ಜಾತಿ ಸಂಘರ್ಷಕ್ಕೆ ಎಡೆ ಮಾಡದೆ ಜನಗಳ ಸಾಮರಸ್ಯ ಹಾಳಾಗದಂತೆ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸಬೇಕು. ಇಬ್ಬರ ನಡುವೆ ನಡೆದ ಜಗಳ ಕೊಲೆ ಮಾಡುವಷ್ಟು ಹೀನಾಯ ಸ್ಥಿತಿಗೆ ತಲುಪಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಹಾಗಾಗಿ ಜಾತಿ ಹೆಸರಲ್ಲಿ ಕೊಲೆಯಾಗಿರುವ ವಿಷಯ ರಾಜಕೀಯವಾಗಿ ಬೆಳೆಸುವುದು ಸರಿಯಾದ ಕ್ರಮವಲ್ಲ.ಹಾಗಾಗಿ ಈ ಕೊಲೆ ಕೇಸನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕು.ಅದೇ ರೀತಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ದಿನವೆ ಬಿಹಾರದಲ್ಲಿ 14ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ವೇಸಗಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭಾರತದ ದಲಿತರ ಬದುಕಿನ ಪರಿಸ್ಥಿತಿ ದುಸ್ಥಿತಿಯಾಗಿದೆ. ಹಾಗೂ ಕೋಲ್ಕತ್ತದ ವೈದ್ಯೆ ವಿದ್ಯಾರ್ಥಿನಿ ಹತ್ಯೆ ಕೂಡಾ ಮೊನ್ನೆ ಮೊನ್ನೆ ನಡೆದಿದೆ.ಇಂತಹ ಅತ್ಯಾಚಾರ ಕೊಲೆ. ಜಾತಿ ನಿಂದನೆ. ಜಾತಿ ಕೊಲೆ ಯಂತಹ ಘಟನೆಗಳು ದೇಶದ ಅನೇಕ ರಾಜ್ಯಗಳಲ್ಲಿ ನಡೆಯುತ್ತಲೇ ಇವೆ.ದೇಶದಲ್ಲಿ ದುಡಿಯುವ ವರ್ಗದ.ಮಹಿಳೆಯರಿಗೆ.ದಲಿತರಿಗೆ ವಿದ್ಯಾರ್ಥಿ ಯುವ ಜನ ಮಹಿಳೆಯರಿಗೆ ಭದ್ರತೆ ಇಲ್ಲಾದಂತಾಗಿದೆ.ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 78ವರ್ಷಗಳು ಕಳೆದರೂ ಇನ್ನೂ ದೇಶದಲ್ಲಿ ಬ್ರಿಟಿಷ್ ಆಡಳಿತನೆ ನಡೆಯುತ್ತಿದೆ ಏನೋ.,.. ಅನಿಸುತ್ತಿದೆ. ಇನ್ನೂ ಯಾವಾಗ ಮಹಿಳೆಯರಿಗೆ ದಲಿತರಿಗೆ ಸ್ವಾತಂತ್ರ್ಯ ಸಿಗೋದು ? ಆದ್ದರಿಂದ ದೇಶ ಮತ್ತು ರಾಜ್ಯವಾಳುತ್ತಿರುವ ಜನ ಪ್ರತಿನಿಧಿಗಳು.ಸರ್ಕಾರ ಕೊಲೆ.ರೇಪು ಮಾಡುತ್ತಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ. ಕಟ್ಟುನಿಟ್ಟಿನ ಕಾನೂನು ಕ್ರಮ ಕೂಡಲೇ ಕೈಗೊಳ್ಳಬೇಕು.
ಕೊಲೆಯಾದ ಈರಪ್ಪ ಬಂಡಿಹಾಳ ಕುಟುಂಬಕ್ಕೆ
ಐದು ಎಕರೆ ಭೂಮಿ ಮತ್ತು ಹೆಂಡತಿಗೆ ಸರ್ಕಾರಿ ನೌಕರಿ ಮಂಜೂರು ಮಾಡಲು ಒತ್ತಾಯಿಸುತ್ತೇವೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಸಂಚಾಲಕ ಅಲ್ಲಮ ಪ್ರಭು ಬೆಟ್ಟದೂರು.ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ. (ಎಐಟಿಯುಸಿ) ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಶೀಲವಂತರ್.ಕರ್ನಾಟಕ ರೈತ ಸಂಘ (AIKKS) ಜಿಲ್ಲಾ ಅಧ್ಯಕ್ಷ
ಬಸವರಾಜ್ ಪೂಜಾರ ನರೇಗಲ್. ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಮ್ ಬಿ.ಪಾತ್ರೋಟಿ.ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್.ಸಿಐಟಿಯು ಜಿಲ್ಲಾಧ್ಯಕ್ಷ ಖಾಸೀಮ ಸರ್ದಾರ್.ಎಐಯುಟಿಯುಸಿ.
ಜಿಲ್ಲಾ ಮುಖಂಡ ಶರಣು ಗಡ್ಡಿ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಾಫರ್ ಕುರಿ. ನಾಗರಾಜ್ ಯಾದವ್. ಪಾಮಣ್ಣ ಕೆ. ಮಲ್ಲಾಪುರ. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ ಮುಂತಾದವರು ಕೋರಿದರು.
ವಿಶೇಷ ವರದಿಗಾರರು :- ಎಸ್. ಎ.ಗಪೂರ್