*ಬಾವಿಗೆ ಕಾಲು ಜಾರಿ ಬಿದ್ದ ಆಕಳು ಕಾಪಾಡಿದ ಅಥಣಿ ಅಗ್ನಿಶಾಮಕ ಸಿಬ್ಬಂದಿ* 

Spread the love

*ಬಾವಿಗೆ ಕಾಲು ಜಾರಿ ಬಿದ್ದ ಆಕಳು ಕಾಪಾಡಿದ ಅಥಣಿ ಅಗ್ನಿಶಾಮಕ ಸಿಬ್ಬಂದಿ*

 

ಕಾಗವಾಡ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ವಿನಾಯಕ ಬಾಳಪ್ಪನವರ ಎಂಬುವವರ ಬಾವಿಯೊಂದರಲ್ಲಿ ಅದೆ ಗ್ರಾಮದ ಸಿದ್ದಪ್ಪ ತೇಲಿ ಎಂಬುವವರ ಆಕಳು ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ನಡೆದಿದೆ ತಕ್ಷಣ ಕೌಲಗುಡ್ಡ ಗ್ರಾಮದ ಸ್ಥಳೀಯರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿ ಯವರು ಘಟನಾ ಸ್ಥಳಕ್ಕೆ ರಕ್ಷಣಾ ಸಾಮಗ್ರಿಗಳೊಂದಿಗೆ ಆಗಮಿಸಿ 50 ಅಡಿ ಅಳತೆಯ 30×30 ವಿಸ್ತೀಣ೯ದ ನೀರಿರುವ ಬಾವಿಯಲ್ಲಿ ಆಕಳನ್ನು ಪ್ರಾಣ ಪಣಕ್ಕೆ ಇಟ್ಟು ಕಷ್ಟ ಪಟ್ಟು ಸುಮಾರು 01:40 ಒಂದೂ ಗಂಟೆ ನಲವತ ನಿಮಿಷಗಳ ಕಾಲ ಕಾರ್ಯಚರಣೆಯನ್ನು ಮಾಡಿ ಆಕಳನ್ನು ಜೀವಂತವಾಗಿ ಬಾವಿಯಿಂದ ಹೊರ ತೆಗೆದು ರಕ್ಷಣೆ ಮಾಡಲಾಯಿತು.

ಆಕಳ ಪ್ರಾಣ ಕಾಪಾಡಿದ ಅಥಣಿ ಅಗ್ನಿಶಾಮಕ ಇಲಾಖೆಗೆ ಸಿಬ್ಬಂದಿಯವರುಗಳಿಗೆ ಸೇರಿದ ಜನ ಚಪ್ಪಾಳೆ ಮೂಲಕ ಧನ್ಯವಾದಗಳು ತಿಳಿಸಿದರು.ತಮ್ಮ ಪ್ರಾಣ ಪಣಕ್ಕೆ ಇಟ್ಟು ಜೀವ ಉಳಿಸಿವ ಕೆಲಸ ಅಗ್ನಿಶಾಮಕ ದಳದವರು ಮಾಡುತ್ತಾರೆ ಅವರ ಸೇವೆ ಅಮೋಘ ಎಂದು ಬಣಿಸಿದರು.

ಈ ರಕ್ಷಣಾ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯಾದ ಪ ಸಾದೇವ.ಶಿಂಧೆ ಪ್ರಶಾಂತ ಚವ್ಹಾಣ,ಆನಂದ.ಟಿ.ಆರ್, ಸಚಿನ ಹಲ್ಯಾಳ, ಅಕ್ಷಯ ಕೋಲಾಪುರೆ , ಸ್ಥಳೀಯರು ಕಾರ್ಯಾಚರಣೆ ಹಾಜರಿದ್ದರು. ವಿಶೇಷ ವರದಿಗಾರರು :- ಮಹೇಶ್ ಶರ್ಮ

Leave a Reply

Your email address will not be published. Required fields are marked *