ರಾಜ್ಯದಲ್ಲಿ ಖಾಲಿಯಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡುವಂತೆ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆರವರಿಗೆ ಮನವಿ.

Spread the love

ರಾಜ್ಯದಲ್ಲಿ ಖಾಲಿಯಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡುವಂತೆ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆರವರಿಗೆ ಮನವಿ.

 

ರಾಜ್ಯದಲ್ಲಿ ಎಲ್ಲಾ ಇಲಾಖೆಗಳಲ್ಲಿನ ಬ್ಯಾಕ್ ಲಾಗ್ ಹುದ್ದೆಗಳನ್ನು ಸಂವಿಧಾನ ಬದ್ಧವಾಗಿ ಪ್ರತಿ 10 ವರ್ಷಗಳಿಗೊಮ್ಮೆ ತುಂಬಬೇಕಾಗಿದ್ದು 20 ವರ್ಷಗಳು ಕಳೆದರೂ ಭರ್ತಿ ಮಾಡದೆ ಅನ್ಯಾಯವಾಗಿದ್ದು. ಕರ್ನಾಟಕ ರಾಜ್ಯದಲ್ಲಿ ಖಾಲಿಯಿರುವ 21 ಇಲಾಖೆಗಳಲ್ಲಿನ ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹಾಗೂ ಈಗಾಗಲೇ ಆರ್ಥಿಕ ಇಲಾಖೆಯಲ್ಲಿ ಅನುಮೋದನೆ ನೀಡಿರುವ ಹುದ್ದೆಗಳನ್ನು ತ್ವರಿತವಾಗಿ ತುಂಬಬೇಕು ಮತ್ತು 2001ರ ನಂತರ ಉಳಿದ ಎಲ್ಲಾ ಬ್ಯಾಕ್‌ ಲಾಗ್ ಹುದ್ದೆಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಭರ್ತಿಗೊಳಿಸಬೇಕು ಹಾಗೂ 2001 ರಿಂದ 2024ರವರೆಗೂ ಆಕಾಲಿಕ ಮರಣ, ನಿವೃತ್ತಿ ಹೊಸ ಹುದ್ದೆಗಳ ಸೃಜನೆ ಸೇರಿ ರಾಜ್ಯದಲ್ಲಿ 10 ರಿಂದ 15 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿಯಿದ್ದು ರಾಜ್ಯದ ಎಲ್ಲಾ ಇಲಾಖೆಗಳಲ್ಲಿನ ಎಸ್ ಸಿ ಎಸ್ ಟಿ ಬ್ಯಾಕ್‌ಲಾಗ್ ಹುದ್ದೆ ಭರ್ತಿಗಾಗಿ ಏಕಕಾಲಕ್ಕೆ ಅಧಿಸೂಚನೆ ಹೊರಡಿಸಿ 45 ವರ್ಷಗಳ ವಯೋಮಿತಿ ನಿಗದಿಗೊಳಿಸಬೇಕು, ಸದರಿ ಹುದ್ದೆ ನೇಮಕಾತಿಗಳಲ್ಲಿ ವಯೋಮಿತಿ ಮೀರುತ್ತಿರುವ ನಿರುದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಿನಾಂಕ: 21-07-2024 ರಂದು ಬಳ್ಳಾರಿ ಜಿಲ್ಲೆಯ ಎಸ್ ಸಿ ಎಸ್ ಟಿ ನಿರುದ್ಯೋಗಿಗಳ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿರುತ್ತಾರೆ (ಮೂಲ ಮನವಿ ಪತ್ರ & ಲಗತ್ತುಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದೆ)

 

ಆದ್ದರಿಂದ ಸದರಿಯವರ ಮನವಿಯ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮವಹಿಸುವಂತೆ ಸಂಬಂದಿಸಿದವರಿಗೆ ಸೂಕ್ತ ನಿರ್ದೇಶನ/ಆದೇಶ ನೀಡುವಂತೆ ಮನವಿ ಸಲ್ಲಿಸಲಾಯಿತು.

ಮೋಹನ್ ಕುಮಾರ್ ದಾನಪ್ಪ ಸದಸ್ಯರು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ.

ವರದಿ :-


ಸಂಪಾದಕೀಯ

Leave a Reply

Your email address will not be published. Required fields are marked *