ಕುಷ್ಟಗಿ ಪಟ್ಟಣದಲ್ಲಿ ಸತತವಾಗಿ ನಾಲ್ಕನೇ ಬಾರಿಗೆ ರಕ್ತದಾನ ಶಿಬಿರ.
ಪ್ರತಿ ವರ್ಷದಂತ ಈ ವರ್ಷವೂ ಕುಷ್ಟಗಿ ನಗರದ ಮೂಲತಃ ಹೈದರ್ ಅಲಿ ಕಮೀಟಿಯವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಯ ಅಡಿಯಲ್ಲಿ ಇಲ್ಲಿನ ಕಲ್ಮಠ ಶಾಲೆಯಲ್ಲಿ ಈ ಬಾರಿಯೂ ಕೂಡಾ ಪ್ರವಾದಿ ಮಹಮದ್ ಪೈಗಂಬರ್ ರವರ ಜಯಂತಿಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು
ನೂರಾರು ಜನರು ರಕ್ತದಾನ ಮಾಡಲು ಮುಂದೆ ಬಂದರು ಹಲವಾರು ಆರೋಗ್ಯ ಸಮಸ್ಯೆಯಿಂದಾಗಿ ಇದರಲ್ಲಿ 65 ಜನರು ಮಾತ್ರ ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ಶಕ್ತಿ ತುಂಬಿದರು.
ಶ್ರೀ ಷ.ಬ್ರ.108 ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಷ.ಬ್ರ. 108 ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಪಶ್ಚಕಂಥಿ ಹಿರೇಮಠ ಕುಷ್ಟಗಿ, ನಿಡಶೇಸಿ, ಗೆಜ್ಜೆಭಾವಿ ಇವರು ಈ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಶ್ರೀ ಷ.ಬ್ರ.108 ಚನ್ನಬಸ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ ಇವರು ದಿವ್ಯ ಸಾನಿಧ್ಯ ವಹಿಸಿದರು.
ಇದೆ ಸಂದರ್ಭದಲ್ಲಿ ಕುಷ್ಟಗಿ ನಗರದ ಸದಾ ಸ್ವಚ್ಚತೆಯನ್ನು ಕಾಪಾಡುವ ಪುರಸಭೆಯ ಮಹಿಳಾ ಪೌರಕಾರ್ಮಿಕರಿಗೆ ಹಾಗೂ ವಿವಿಧ ಕ್ಷೆತ್ರಗಳಲ್ಲಿ ಸಾದನೆಗೈದ ಹಲವಾರು ಸಾಧಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ದೊಡ್ದನಗೌಡ ಪಾಟೀಲ್ ಕುಷ್ಟಗಿ. ಹಸನಸಾಬ ದೋಟಿಹಾಳ ಕಾಡ ಅಧ್ಯಕ್ಷರು, ದೊಡ್ಡಬಸವನಗೌಡ ಪಾಟೀಲ್ ಬೈಯಾಪುರ್, ದುರುಗಪ್ಪ ವಡ್ಡಿಗೆರಿ,ಪುರಸಭೆ ಸದಸ್ಯರಾದ ಕಲ್ಲೇಶ ತಾಳದ, ಮಹಿಬೂಬ ಕಮ್ಮಾರ ಹಾಗೂ ಮಹಾಂತೇಶ್ ಕಲಭಾವಿ, ಪ್ರಮುಖರಾದ ಭಾಷಾ ಬೆಂಗಳೂರು, ಆರ್.ಟಿ ಸುಬಾನಿ, ಬಸವರಾಜ ನಾಯಕ, ನಾಗರಾಜ ಹಜಾಳ,ಹಸನಸಾಬ್ ಕಾಯಿಗಡ್ಡಿ, ಸೈಯದ್ ಆಟೋ,ಹಸ್ಸಿ ನದಾಫ್, ಮೂರ್ತಜಾ ಬಂಗಾಳಿ ಹುಸೇನ್ ಕಲಾಲಬಂಡಿ, ಶೌಕತ್ ಕೂದರಿಮೋತಿ ಹಾಗೂ ರಾಜು ಕಾಯಗಡ್ಡಿ. ಯಮನೂರ ಡಿ ಗುಮಗೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರು ಹಾಗೂ ಮೂಲತಃ ಹೈದರಲಿ ಕಮಿಟಿಯ ಮುಖ್ಯಸ್ಥರಾದ ಖಾಜಾ ಕಮ್ಮಾರ, ಸದ್ದಾಂ ಡಿ ಗುಮಗೇರಿ, ಮೌಲಾ ಗುಮಗೇರಿ, ಮಹಿಬೂಬ ಎಲೆಗಾರ, ಅಶ್ಫಾಕ್ ಇಟಗಿ,.ಭಾಷಾ ಸವಡಿ, ಖಾಸೀಮ್ ಗುಮಗೇರಿ, ಅಲ್ತಾಫ್ ಗುಡುರು, ಸಾದಿಕ್ ಮುಲ್ಲಾ, ಸದ್ದಾಂ ಜವಾಳಗೇರಿ. ಮುಸ್ತಾಫ್ ಮಾಳಗದ್ದಿ, ಅಬ್ಬು ಜವಳಗೇರಿ. ಇರ್ಫಾನ್ ಬಂಗಾಳಿ. ಮಹ್ಮದ್ ದಾದಿಬಾಯಿ ಹಾಗೂ ತೆಗ್ಗಿನಓಣಿಯ ಯುವಕರು ಉಪಸ್ಥಿತರಿದ್ದರು.
ವರದಿ :- ಸಂಪಾದಕೀಯ