ಈ ಕುರಾನ್ ಕೇವಲ ಒಂದು ದಿನದಲ್ಲಿ ಅವತೀರ್ಣಗೊಂಡಿಲ್ಲ, ಬದಲಿಗೆ ಪೂರ್ಣ ಇಪ್ಪತ್ತಮೂರು ವರ್ಷಗಳು ಬೇಕಾಯಿತು ಅಂಜುಮನ್ ನೌಜವಾನ್ ಕಮಿಟಿ ಅಧ್ಯಕ್ಷ ಫಯಾಜ್ ಬನ್ನು.

Spread the love

ಈ ಕುರಾನ್ ಕೇವಲ ಒಂದು ದಿನದಲ್ಲಿ ಅವತೀರ್ಣಗೊಂಡಿಲ್ಲ, ಬದಲಿಗೆ ಪೂರ್ಣ ಇಪ್ಪತ್ತಮೂರು ವರ್ಷಗಳು ಬೇಕಾಯಿತು ಅಂಜುಮನ್ ನೌಜವಾನ್ ಕಮಿಟಿ ಅಧ್ಯಕ್ಷ ಫಯಾಜ್ ಬನ್ನು

 

ಮೊಹಮ್ಮದಿರಿಗಿಂತಲೂ ಮುನ್ನ ಹಲವಾರು ಪ್ರವಾದಿಗಳು ಈ ಜಗತ್ತಿನಲ್ಲಿ ಆಗಮಿಸಿ ಹೋಗಿದ್ದರೂ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಪ್ರವಾದಿ ಮೊಹಮ್ಮದ(sws)ರ ಮೂಲಕ ಈ ಜಗತ್ತಿಗೆ ಅವತೀರ್ಣಗೊಂಡಿರುವ ಕಾರಣ ಮೊಹಮ್ಮದ(sws)ರಿಗೆ ವಿಶಿಷ್ಟ ಸ್ಥಾನವಿದೆ. ಈ ಕುರಾನ್ ಬರೆಯ ಒಂದು ದಿನದಲ್ಲಿ ಅವತೀರ್ಣಗೊಂಡಿಲ್ಲ, ಬದಲಿಗೆ ಪೂರ್ಣ ಇಪ್ಪತ್ತಮೂರು ವರ್ಷಗಳು ಬೇಕಾಯಿತು ಎಂದು ಅಂಜುಮನ್ ನೌಜವಾನ್ ಕಮಿಟಿ ಅಧ್ಯಕ್ಷ ಫಯಾಜ್ ಬನ್ನು ಅವರು ಹಬ್ಬದ ವಿಶೇಷತೆಯನ್ನು ತಿಳಿಸಿದರು, ಶಾಮಿದಲಿ ದರ್ಗಾ ಇಂದ ಧ್ವಜಾರೋಹಣ ಮುಗಿಸಿ ಮೆರವಣಿಗೆಗೇ ಚಾಲನೆ ನೀಡಲಾಯಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪವಿತ್ರ ಸ್ಥಳವಾದ ಮಕ್ಕ ಹಾಗೂ ಮದೀನಾದ ಸ್ತಬ್ದ ಚಿತ್ರಗಳನ್ನು ಅಲಂಕಾರವನ್ನು ಮಾಡಿದ್ದು ವಿಶೇಷವಾಗಿತ್ತು ತದನಂತರ ಮಜಿದ್ ನಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖ್ಯ ಅತಿಥಿಗಳು ತಾವರಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅದ್ದೂರಿಯಾಗಿ ನಡೆಸಿದರು ಹಾಗೂ ಪ್ರತಿಯೊಂದು ವೃತ್ತಕ್ಕೂ ಮಾಲಾರ್ಪಣೆ ಮಾಡಲಾಯಿತು. ವರದಿ :- ಉಪಳೇಶ್ ವಿ. ನಾರಿನಾಳ್

Leave a Reply

Your email address will not be published. Required fields are marked *