ಇಂದು ಪ್ರವಾದಿ ಮಹಮದ್ ಪೈಗಂಬರ್ ರವರ ಜಯಂತಿಯ ಅಂಗವಾಗಿ ಅಬ್ದುಲ್ ಕಲಾಂ ಕಮೀಟಿ ವತಿಯಿಂದ ಹಾಲು ವಿತರಣೆ ಕಾರ್ಯಕ್ರಮ ಯಶಸ್ವಿ.
ಮಾನವ ಕುಲ ತಾನೊಂದೆವಲ0 ಅಥವಾ ವಸುದೈವ ಕುಟುಂಬಕ೦ ಎಂಬ ತತ್ತವು ಪೈಗಂಬರರ ಮಾತು ಮತ್ತು ಕೃತಿಯಲ್ಲಿ ಧಾರಾಳವಾಗಿ ಬೆರೆತಿದೆ. ಅರಬ್ಬಿ-ಅರಬಿಯೇತರ, ಬಿಳಿಯ-ಕರಿಯ ಇವರಲ್ಲಿ ಯಾರು ಶ್ರೇಷ್ಠರೂ ಅಲ್ಲ, ಯಾರು ಕನಿಷ್ಠರೂ ಅಲ್ಲ. ಭೂಮಿಯಲ್ಲಿರುವ ಎಲ್ಲ ಮಾನವರು ಒಂದೇ ತಾಯ್ತಂದೆಯರ ಮಕ್ಕಳೆಂದು ಅವರು ಹೇಳುತ್ತಿದ್ದರು. ಅವರ ನುಡಿ ಮತ್ತು ನಡೆ ಎರಡೂ ಒಂದೇ ಆಗಿದ್ದವು. ಪವಿತ್ರ ನಮಾಜಿಗಾಗಿ ದಿನಕ್ಕೆ ಐದು ಬಾರಿ ಕೂಗಿ ಕರೆಯಲು ಅವರು ಕರಿಯನೂ ಗುಲಾಮನೂ ಆಗಿದ್ದ ಬಿಲಾಲ್ ಎಂಬ ವ್ಯಕ್ತಿಯನ್ನು ನೆಮಿಸಿದ್ದರು. ಯಹೂದಿಯೊಬ್ಬನ ಶವವನ್ನು ಸಂಸ್ಕಾರಕ್ಕೆ ತೆಗೆದು ಕೊಂಡು ಹೋಗುವುದನ್ನು ಕಂಡಾಗ ಪ್ರವಾದಿ ಎದ್ದುನಿಂತು ಗೌರವ ಸೂಚಿಸಿದ್ದರು. ಅವರು ಆ ವ್ಯಕ್ತಿಯಲ್ಲಿ ಮನುಷ್ಯನನ್ನು ಕಾಣುತ್ತಿದ್ದರೇ ಹೊರತು ಜಾತಿ ಮತ ಪಂಥವನ್ನಲ್ಲ. ಅವರು ಬೇಸಾಯಕ್ಕಾಗಿ ಜಮೀನನ್ನು ಯಹೂದಿಯರಿಗೆ ನೀಡುತ್ತಿದ್ದರು. ಶ್ರೇಷ್ಠ ಸಮಾಜ ಸುಧಾರಕರೂ ಆದ ಮುಹಮ್ಮದರ ವಿಚಾರಗಳು ಮತ್ತು ಅವರು ಅನುಷ್ಠಾನಗೊಳಿಸಿದ ಅನೇಕ ಕಾರ್ಯಗಳು ಇಂದಿಗೂ ಪ್ರಸ್ತುತ. ಇವರು ಮಾದಕವಸ್ತುಗಳು, ಮದ್ಯಪಾನ, ವೇ ಶ್ಯಾವಾಟಿಕೆಗಳನ್ನು ನಿಷೇಧಿಸುವುದರೊಂದಿಗೆ ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸಿದರು. ಎಲ್ಲರಿಗೂ ಜ್ಞಾನ ವನ್ನು, ಅದರಲ್ಲೂ ಪ್ರಯೋಜನಕಾರಿಯಾದ ಜ್ಞಾನವನ್ನು ಪಡೆಯು ವಂತೆ ತಿಳಿಸುತ್ತಿದ್ದರು. ಕಾರ್ಮಿಕರ ಶೋಷಣೆಯನ್ನು ಖಂಡಿಸಿದರು. ಮಹಿಳೆಯರಿಗೆ ತಮ್ಮ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಪ್ರೋತ್ಸಾಹಿಸಿದರು. ಮುಕ್ತ ವ್ಯಾಪಾರ ಮತ್ತು ನೈತಿಕ ಬಂಡವಾಳ ಹೂಡಿಕೆಯನ್ನು ಬೆಂಬ ಲಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಪರಿಸರ ಪ್ರೇಮಿಯಾಗಿದ್ದರು. ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಪ್ರವಾದಿ ಮಹಮದ್ ಪೈಗಂಬರ್ ರವರ ಜಯಂತಿಯ ಅಂಗವಾಗಿ ಅಬ್ದುಲ್ ಕಲಾಂ ಕಮೀಟಿ ವತಿಯಿಂದ ಹಾಲು ವಿತರಣೆ ಕಾರ್ಯಕ್ರಮವು ನಾಯಕರ ಓಣಿಯಲ್ಲಿಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ ತಾವರಗೇರಾ ಪಟ್ಟಣದ ಮುಸ್ಲಿಂ ಸಮಾಜದ ಗುರು/ಹಿರಿಯರು ಹಾಗೂ ಯುವಕರು, ಮುಖ್ಯ ಅತಿಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಾಲು ವಿತರಣೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಸಿದರು.
ವರದಿ :- ಉಪಳೇಶ ವಿ.ನಾರಿನಾಳ.