ಬಡವರ ಮನ ಗೆದ್ದ ವೈದ್ಯ : ದುಡ್ಡು ಇಲ್ಲದಿದ್ರು ಇಲ್ಲಿ ಸಿಗುತ್ತದೆ ಚಿಕಿತ್ಸೆ…
ಸಿದ್ದಾರೂಢ ಬಣ್ಣದ
Siddaroodhbann37@gmail.com
ರಡ್ಡೇರಹಟ್ಟಿ – ಮನುಷ್ಯ ತಾನು ಎಷ್ಟೇ ಐಶ್ವರ್ಯವಂತನಾದ ಆರೋಗ್ಯ ಬಹುಮುಖ್ಯ, ಅದರಲ್ಲೂ ಅನಾರೋಗ್ಯದಿಂದ ಆಸ್ಪತ್ರೆಗೆ ಹೋದ್ರೆ ಅಲ್ಲಿ ಮೂಟೆಗಟ್ಟಲೆ ದುಡ್ಡು ಕೊಡಬೇಕಾಗುತ್ತದೆ. ಆದ್ರೆ ಇಲ್ಲೊಬ್ಬ ವೈದ್ಯ ಬಡವರ ಪಾಲಿಗೆ ದೇವರಾಗಿದ್ದಾನೆ. ಟ್ರೇಟೆಂಟ್ ಸಿಗುತ್ತೆ ಆದ್ರೆ ದುಡ್ಡು ಕೇಳಲ್ಲ ವಿಚಿತ್ರ ಎನಿಸಿದರೂ ಸತ್ಯ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಸಮೀಪದ ಅವರಕೋಡ ಎನ್ನುವ ಗ್ರಾಮದ ಡಾ ಶಿವಬಸವ ನಾಯಿಕ ಎಂಬ ವೈದ್ಯನ ಕಥೆ ಇದು ಬಡವರ ಆರೈಕೆಯಲ್ಲಿ ತನ್ನ ವೃತ್ತಿ ಧರ್ಮ ತೋರುತ್ತಿದ್ದಾನೆ. ಆಸ್ಪತ್ರೆಗೆ ರೋಗಿಗಳು ಬಂದ್ರೆ ಉತ್ತಮ ಆರೈಕೆ ಜೊತೆಗೆ ಗುಣಮಟ್ಟದ ಔಷಧಿಗಳನ್ನ ನೀಡುತ್ತಾರೆ. ಬಿಲ್ ಮಾತ್ರ ಕೇಳಲ್ಲ, ಕೊಟ್ರು ಕೇವಲ 40-50 ರೂ ಮಾತ್ರ ಈ ಸೇವೆಯಿಂದ ವೈದ್ಯ ಬಡವರ ಮನ ಗೆದ್ದಿದ್ದಾರೆ.
ರಾಷ್ಟೋತ್ಥಾನ ಹೆಸರಿನ ಶಾಲೆ ಪ್ರಾರಂಭಿಸಿ ಸುಮಾರು 28 ಬಡ ವಿದ್ಯಾರ್ಥಿಳಿಗೆ ಉಚಿತ ಶಿಕ್ಷಣದ ಜೊತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಉಚಿತ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.
ಬೈಟ ಡಾ. ಶಿವಬಸು ನಾಯಿಕ ನಾನು ಸುಮಾರು 13 ವರ್ಷಗಳಿಂದ ಈ ಸೇವೆಯಲ್ಲಿ ಇದ್ದೇನೆ. ನಾನು ಕೇವಲ ಬಡವರ ಹಿತಕ್ಕಾಕಿ ಈ ಒಳ್ಳೆಯ ಕೆಲಸವ ಮಾಡುತ್ತಿದ್ದೇನೆ ಹೊರತು ಯಾವುದೇ ಕಾರಣಕ್ಕೂ ಅಲ್ಲ..