*ಟೀಕೆ ಮಾಡುವವರೇ ನಮ್ಮ ಮಿತ್ರರರು………ಗಣೇಶ್ ಕೆ (ರಾಯಣ್ಣ ನಾ ಅಭಿಮಾನಿ ದಾವಣಗೆರೆ )*
ಹೊರನೋಟಕ್ಕೆ ಮರವೊಂದು ಚೆನ್ನಾಗಿಯೇ ಕಾಣುತ್ತಿರುತ್ತದೆ, ಒಳಗಿಂದೊಳಗೆ ಗೆದ್ದಲು ಹುಳು ಕೊರೆದು ತೂತು ಮಾಡಿ ಮರವನ್ನು ಟೊಳ್ಳು ಮಾಡಿರುತ್ತದೆ, ಅದು ಗೊತ್ತೇ ಆಗುವುದಿಲ್ಲ. ದೊಡ್ಡ ಗಾಳಿಮಳೆಯ ಹೊಡೆತಕ್ಕೆ ಸಿಕ್ಕು ಮರ ಉರುಳಿ ಬಿದ್ದಾಗಲೇ ವಾಸ್ತವ ಗೊತ್ತಾಗುವುದು. ಆದರೆ ಟೀಕೆ ನಿರಂತರವಾಗಿ ನಮ್ಮನ್ನು ಕಾಡುತ್ತಿರುವಾಗ ನಮ್ಮ ಮನಸ್ಸಿಗೆ ಗೆದ್ದಲು ಹಿಡಿಯುವುದಿಲ್ಲ. ನಾವು ಸದಾ ಎಚ್ಚರದಲ್ಲೇ ಇರುತ್ತೇವೆ. ಯಾರು ಏನನ್ನುತ್ತಾರೋ ಎಂಬ ಸುಪ್ತ ಅಂಜಿಕೆಯೊಂದು ನಮ್ಮ ಮನಸ್ಸಿನ ಮೂಲೆಯಲ್ಲಿ ಕಾಡುತ್ತಲೇ ಇರುತ್ತದೆ. ಅದು ನಮ್ಮನ್ನು ನಿಮ್ಮನ್ನು ಮತ್ತು ಎಲ್ಲರನ್ನೂ ಚಿಂತನೆಗೆ ಹಚ್ಚುತ್ತಲೇ ಇರುತ್ತದೆ. ಮನಸ್ಸು ವಿರಾಮ ಬಯಸುವುದಿಲ್ಲ. ಅದು ದುಡಿಮೆಯನ್ನು ಕೇಳುತ್ತದೆ, ಹೊಂಗಳಿಕೆಗಳಿಗೆ ಹಾಕುವುದನ್ನು ಕಲಿಸುತ್ತದೆ.
ಮರವಾಗಿ ಬೆಳೆಯಲು ಪೂರಕವಾಗಿ ಇರುವ ಸಾವಯವ ಗೊಬ್ಬರದಂತೆ. ಹೊಗಳಿಕೆ ಎಂಬುದು ಗೆದ್ದಲು ಹುಳದಂತೆ ಎಂಬುದನ್ನು ನಾವೆಲ್ಲರೂ ಮೊದಲಾಗಿ ಅರಿತುಕೊಳ್ಳಬೇಕು. ಆಗ ಖಂಡಿತವಾಗಿ ಎಲ್ಲರೂ ಬದುಕಿನ ಹಾದಿಯಲ್ಲಿ ದಾರಿ ತಪ್ಪದೇ ಸಮಯವನ್ನು ಸದ್ವಿನಿಯೋಗ ಮಾಡಿಕೊಂಡು, ಒಂದೊಂದು ಮೆಟ್ಟಿಲು ಏರುತ್ತಾ ನಮ್ಮ ಗುರಿಯತ್ತ ಸಾಗುವುದು ಸಾಧ್ಯ ಎಂಬುದಷ್ಟೇ ನನ್ನ ನಂಬಿಕೆ. .. …