ಉನ್ನತ ಶಿಕ್ಷಣ ಸಚಿವರಿಂದ ಮುಧೋಳ ಗ್ರಾಮದ ಹುಸೇನಸಾಬ ವಣಗೇರಿ ಚಿನ್ನದ ಪದಕ ಸ್ವೀಕರಿಸಿದ
ಯಲಬುರ್ಗಾ : ಕರ್ನಾಟಕ ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವ ಧಾರವಾಡದಲ್ಲಿ ನಡೆದ 2022-23 ಸಾಲಿನ ಉತ್ತಮ ಸಂಶೋಧನಾ ವಿದ್ಯಾರ್ಥಿ ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ಹುಸೇನಸಾಬ ವಣಗೇರಿ ಅವರಿಗೆ ಸುವರ್ಣ ಚಿನ್ನದ ಪದಕ ಲಭಿಸಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರಿಂದ ಪ್ರದಾನ ಮಾಡಿದರು.
ಸಾಹಿತ್ಯ ಸಂಶೋಧನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ತಾಲೂಕಿನ ಮುಧೋಳ ಗ್ರಾಮದ ಹುಸೇನಸಾಬ ವಣಗೇರಿ ಯವರು. ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದಿಂದ ಎಮ್. ಎಸ್. ಡಬ್ಲೂ ಸ್ನಾತಕೋತ್ತರ ಪದವಿ, ಯುಜಿಸಿ ನೆಟ್ ಮತ್ತು ಕೆಸೆಟ್ ಅರ್ಹತೆ ಪಡೆದುಕೊಂಡಿದ್ದು,
ಹುಸೇನ ಸಾಬ ವಣಗೇರಿ ಇವರು ಬರೆದಂತಹ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 30 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗಿದ್ದು, ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೊಡುಮಾಡುವ 2020 ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನಕ್ಕೆ ಇವರ ಮೊದಲ ಕೃತಿ ಎದೆಗಂಟಿದ ವಿರಹ ಕವನ ಸಂಕಲನವು ಆಯ್ಕೆಯಾಗಿ 2021 ರಲ್ಲಿ ಪ್ರಕಟನೆಯಾಗಿದೆ. 2022 ರಲ್ಲಿ ಕಾರ್ಮಿಕ ಕಾನೂನುಗಳ ಅರಿವು. 2023 ರಲ್ಲಿ ಅಂತರಂಗದ ಬೆಳಕು ಎಂಬ ಕೃತಿಗಳು ಪ್ರಕಟವಾಗಿದೆ.
ಚಿನ್ನದ ಪದಕ ಪಡೆದ ವಿದ್ಯಾರ್ಥಿಯನ್ನು ಸಮಾಜ ಕಾರ್ಯ ವಿಭಾಗದ ಅಧ್ಯಕ್ಷರಾದ ಡಾ. ಸಂಗೀತಾ ಮಾನೆ. ಸಹಾಯಕ ಪ್ರಾಧ್ಯಪಕರಾದ ಡಾ. ರವೀಂದ್ರ ಎಮ್. ಡಾ. ರೇಣುಕಾ ಈ ಅಸಗಿ, ಡಾ ಪ್ರಶಾಂತ ಹೆಚ್. ವಾಯ್ ಅವರು ಮತ್ತು ಇನ್ನು ಹಲವಾರು ಗಣ್ಯ ವ್ಯಕ್ತಿಗಳು ಅಭಿನಂದಿಸಿದ್ದಾರೆ.
ವರದಿ : ಹುಸೇನ್ ಮೊತೇಖಾನ್