ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಅಕ್ಟೋಬರ್ 5 2024″ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಪ್ರಾತಿನಿಧ್ಯ ಸಮಾವೇಶ ಯಸ್ವಿಗೊಂಡಿತು.
ಸರ್ಕಾರದ ಕಂದಾಯ ಮಂತ್ರಿ ಕೃಷ್ಣ ಬೈರೆಗೌಡ ಮತ್ತು ಕಂದಾಯ ಕಾರ್ಯದರ್ಶಿ ಸುನಿಲ್ ಕಮಾರ ಸಮಾವೇಶದಲ್ಲಿ ಭಾಗವಹಿಸಿ, ಭೂ ಸಮಸ್ಯಗಳನ್ನು ಪರಿಹರಿಸುವ ತೊಡಕುಗಳ ಕುರಿತು ನಮ್ಮ ಸಲಹೆಗಳನ್ನು ಆಲಿಸಿದರು. ನಂತರ ಮಾತನಾಡಿದ ಕೃಷ್ಣ ಬೈರೆಗೌಡ, 14 ಲಕ್ಷ 57 ಅರ್ಜಿಗಳು ಬಂದಿವೆ 6 ತಿಂಗಳುಗಳಲ್ಲಿ ಪರಿಶೀಲಿಸಿ ಸಂಪೂರ್ಣ ನ್ಯಾಯ ಒದಗಿಸುವ ಭರವಶೆ ಕೊಟ್ಟರು. 2016-17 ಅವಧಿಯಲ್ಲಿ ಎಚ್.ಎಸ್.ದೊರೆ ಸ್ವಾಮಿ ನಾಯಕತ್ವದಲ್ಲಿ 40 ಸಂಘಟನೆಗಳನೊಳಗೊಂಡ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಅಸ್ತಿತ್ವಕ್ಕೆ ಬಂದಾಗಿನಿಂದ ನಡೆದ ಹೋರಾಟದ ಕುರಿತು ಮಂತ್ರಿಯ ಗಮನ ಶಳೆಯಲಾಯಿತು.
ಭೂಮಿತಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ 2 ಎಕರೆ ಭೂಮಿ ಹಂಚ ಬಹುದೆಂದು ದೊರೆ ಸ್ವಾಮಿಯರು ಕನಸು ಕಂಡಿದ್ದರು ಎಂದು ಬಹಿರಂಗವಾಗಿ ತಿಳಿಸಲಾಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ವಿಷಯಯನ್ನು ಮನವರಿಕೆ ಮಾಡಿ ಒತ್ತಾಯಿಸಿದ್ದರು. ಈ ಕಾರ್ಯ ಮಾಡಿದರೆ ಎರಡನೆಯ ದೇವರಾಜ ಅರಸು ಆಗುತ್ತಿರೆಂದು ಮಾನ್ಯ ಸಿದ್ದರಾಮಯ್ಯವರಿಗೆ ಕಿವಿ ಮಾತು ಹೇಳಿದ್ದರ ಕುರಿತು ಪುನ ನೆನಪು ಮಾಡಲಾಯಿತು. 2019 ರಲ್ಲಿ ಅಧಿಕಾರಕ್ಕೇರಿದ ಬಿಜೆಪಿಯ ಯಡಿಯೂರಪ್ಪ ನೇತ್ರತ್ವದ ಸರ್ಕಾರ, ಅಸ್ತಿತ್ವದಲ್ಲಿದ್ದ ಭೂ ಮಿತಿ ಕಾಯ್ದೆಯನ್ನೆ ಬದಲಾಯಿಸಿ ಕಾರ್ಪೋರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿದ್ದರು ಬಂದು ಬಹಿರಂಗವಾಗಿ ಘೋಷಿಸಲಾಯಿತು. ರಾಜ್ಯದಾದ್ಯಂತ 2018 ರಿಂದ 2023 ರ ವರಿಗೆ ಫಾರಂ-57 ಅಡಿಯಲ್ಲಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಬಡ ರೈತರಿಗೆ ಇಲ್ಲಿಯವರಿಗೆ ಭೂ ಮಂಜೂರಾತಿ ಕೊಟ್ಟಿಲ್ಲದಕ್ಕೆ ಕಾರಣ ಕೇಳಲಾಯಿತು.ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯಲ್ಲಿ (2018 ರಲ್ಲಿ) ತಾವು ಜಾರಿ ಮಾಡಿದ ಅಕ್ರಮ ಸಕ್ರಮ (ಬಗರ್ ಹುಕುಂ) ಕಾಯ್ದೆಯನ್ನು ಈಗಲೂ ಗಂಭೀರವಾಗಿ ಪರಿಗಣಿಸದಿರುವುದರ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದರು.2019 ರಿಂದ 2023 ರವರೆಗೆ ಅಧಿಕಾರ ನಡೆಸಿದ ಬಿಜೆಪಿಯ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇವರ ನೇತೃತ್ವದ ಸರ್ಕಾರ ಕೂಡ ಬಡ ರೈತರಿಗೆ ಭೂ ಮಂಜೂರಾತಿ ಕೊಡುವ ಕಾರ್ಯ ಮಾಡಲೆ ಇಲ್ಲ, ನಿಮ್ಮ ಸರ್ಕಾರ ಇದೆ ಮಾಡಿದರೆ ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ಎಚ್ಚರಿಸಲಾಯಿತು. ಬಿಜೆಪಿಯ ಕಂದಾಯ ಮಂತ್ರಿಯಾಗಿದ್ದ ಆರ್. ಅಶೋಕವರು, ಸರ್ಕಾರಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ, ಭೂ ಮಾಫೀಯಾಗಳಿಗೆ ಗುತ್ತಿಗೆ ಕೊಡಲು ತೀರ್ಮಾನಿಸಿದ್ದರು, ಈ ಸರ್ಕಾರ ಈ ಕೈ ಬಿಡಬೆಕೆಂದು ತಿಳಿಸಲಾಯಿತು.ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಂತ ಬಲಿಷ್ಠರು ಅತಿಕ್ರಮಿಸಿ ಕಾಫಿ, ಅಡಿಕೆ, ಮೆಣಸು ಏಲಕ್ಕಿ ಇತರೆ ವಾಣಿಜ್ಯ ಬೆಳೆ ಬೆಳೆದಿರುವ ಭೂಮಿಯನ್ನು ಒಂದು ಕುಟುಂಬಕ್ಕೆ 25 ಎಕರೆಗಿಂತ ಹೆಚ್ಚು ಭೂಮಿ ಗುತ್ತಿಗೆ ಕೊಡುವ ಕಾರ್ಯ ನಡೆದಿತ್ತೆಂದು,
ಇನ್ನು ಹಲವಾರು ವಿಷಯದ ಕುರಿತು ಚರ್ಚಿಸಲಾಯಿತು.ಆ ಭಾಗದಲ್ಲಿ ಹಲವು ಸಂಘಟನೆಗಳು ಮತ್ತು ಆದಿವಾಸಿಗಳು ನಿರಂತರ ಹೋರಾಟ ನಡೆಸಿದ ನಂತರ ಗುತ್ತಿಗೆ ಕೊಡುವ ಕಾರ್ಯಕ್ಕೆ ತಾತ್ಕಾಲಿಕವಾಗಿ (ಕೆಲವು ಕಡೆ) ತಡೆ ಬಿದ್ದಿದೆ ಮತ್ತು ಈಗಲೂ ಬಲಿಷ್ಠರಿಗೆ ಭೂ ಗುತ್ತಿಗೆ ಕೊಡುವ ಕಾರ್ಯ ಮುಂದುವರೆದಿದೆ. ರಾಜ್ಯದ ಬಹುತೇಕ ತಹಶೀಲ್ದಾರರು ಬಡ ರೈತರ ಸಾಗುವಳಿ ಅರ್ಜಿಗಳನ್ನು ಭೂ ಮಂಜೂರಾತಿ ಸಮಿತಿ ಮುಂದೆ ತರದೆ ತಿರಸ್ಕರಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಸರ್ಕಾರಿ ಭೂಮಿಯನ್ನು ಆಡಿಟಿಂಗ್ ಮತ್ತು ಲ್ಯಾಂಡ್ ಬೀಟ್ ಮಾಡಲಾಗುತ್ತಿದೆ.ಈ ಕಾರ್ಯದಲ್ಲಿ ತೊಡಗಿರುವ ಸ್ಥಳೀಯ ಕಂದಾಯ ಅಧಿಕಾರಿಗಳು ಹೇಳುವ ಪ್ರಕಾರ,ಬಡ ರೈತರು ಸಾಗುವಳಿ ಮಾಡುವ ಸರ್ಕಾರಿ ಭೂಮಿಯನ್ನು ಭೂ ಬ್ಯಾಂಕಿಗೆ ಮೀಸಲಿಡಲಾಗುತ್ತಿದೆಯಂತೆ.ಇದು ನಿಜವೋ ಸುಳ್ಳೋ ಗೊತ್ತಿರದ ಜನರನ್ನು ಎದುರಿಸಿ ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ. 20 ವರ್ಷ ನಿರಂತರ ಸಾಗುವಳಿ ಮಾಡಿದ ಭೂಮಿಯನ್ನು ಮಾತ್ರ ಮೊಬೈಲ್ hap ತಂತ್ರಾಂಶ ಸೇರ್ಪಡೆ ಮಾಡಿಕೊಳ್ಳುತ್ತದೆ.ಅನೇಕ ಬಡ ರೈತರು ಬರಗಾಲದ ಸಂದರ್ಭದಲ್ಲಿ ಕೂಲಿ ಮಾಡಲು ಮಹಾನಗರಗಳಿಗೆ ಗುಳೆ ಹೋಗಿ ಬದುಕು ಸಾಗಿಸುವ ಅನಿವಾರ್ಯತೆಯಿಂದ ಭೂಮಿ ಕೃಷಿ ಮಾಡಲು ಸಾದ್ಯವಾಗಿರುವುದಿಲ್ಲ.ಇಂತಹ ವಾಸ್ತವತೆಯನ್ನು ಪರಿಗಣಿಸದೆ, (ಒಂದು ವರ್ಷ ಬೀಳು ಬಿದ್ದರು ಕೂಡ) ಭೂಮಿಯ ಅರ್ಜಿಗಳನ್ನು ಮೊಬೈಲ್ hap ತಿರಸ್ಕರಿಸಿದರೆ ಬಹುಸಂಖ್ಯಾತ ಬಡವರಿಗೆ ಭೂಮಿಯ ಹಕ್ಕು ಮತ್ತು ಮಂಜೂರಾತಿ ದೊರೆಯುವುದಿಲ್ಲ. ಕಂದಾಯ ಮಂತ್ರಿ ಕೃಷ್ಣ ಬೈರೇಗೌಡರು, 20 ವರ್ಷಗಳ ಸಾಗುವಳಿ ಕಂಡಿಷನ್ ಗಳನ್ನು ಪುನರ್ ಪರಿಶೀಲಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು .ವರಮಾನ ಸಂಗ್ರಹಿಸುವ ಉದ್ದೇದಿಂದ,ಬಿಡದಿ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ 25 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಲೀಜ್ ಕೊಡುವ ತೀರ್ಮಾನ ಕೈ ಬಿಡಬೇಕು. ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳಲು ಕಾರ್ಪೋರೇಟ್ ಕಂಪನಿಗಳಿಗೆ ಹಾಗೂ ನೂರಾರು ಎಕರೆ ಭೂಮಿ ಹೊಂದಿದವರಿಗೆ, ದೊಡ್ಡ ಉದ್ದಿಮೆದಾರರಿಗೆ ತೆರಿಗೆ ಹೆಚ್ಚಳ ಮಾಡಬೇಕು..ಈ ಎಲ್ಲಾ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡಬೇಕು.ಸಾಗುವಳಿಗಾಗಿ ಮಂಜೂರಾತಿ ಕೊಡಲು ನಿರ್ಬಂಧವಿದ್ದರೆ, ನಿವೇಶನ ಮಾಡಿ ವಸತಿ ರಹಿತರಿಗೆ ಹಂಚಿಕೆ ಮಾಡಬೇಕು.ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅಧಿಕಾರ ವಹಿಸಿಕೊಂಡ ಮೊದಲನೇ ದಿನವೆ ಸಂಡೂರ ದೇವನಾಗರಿ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸುವ ಆದೇಶಕ್ಕೆ ರುಜು ಹಾಕಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ತಡೆ ಹೊಡಬೇಕು. ಜಿಂದಾಲ್ ಕಂಪನಿಗೆ ಬಿಡಿಕಾಸಿಗೆ ಮಾರಾಟ ಮಾಡಿರುವ 5 ಸಾವಿರ ಎಕರೆ ಭೂಮಿನ್ನು ವಾಪಾಸ್ ಪಡೆದು, ರೈತರಿಗೆ ಲೀಜ್ ಕೊಡಬೇಕು.
.
****
1.ಡಿ.ಹೆಚ್. ಪೂಜಾರ