ಗ್ರಾಪಂಗಳಲ್ಲಿ ಇಲ್ಲಾ ಅಧಿಕಾರಿ – ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸುವಲ್ಲಿ ಸರಕಾರ ವಿಫಲ.
ಯಲಬುರ್ಗಾ : ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಗ್ರಾಪಂಗಳಲ್ಲಿ ಅಧಿಕಾರಿ ಸಿಬ್ಬಂದಿ ಗೈರಾಗಿರುವ ಕಾರಣ ಗ್ರಾಪಂ ಕಚೇರಿಗಳು ಅನಾಥವಾಗಿದ್ದು, ಸಾರ್ವಜನಿಕರ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ.ಕಾರಣ ? ರಾಜ್ಯದ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಬಿ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸ ಬೇಕು, ವೇತನ ಶ್ರೇಣಿ ನಿಗದಿ ಮಾಡಬೇಕು, ಮುಂಬಡ್ತಿ ವಂಚಿತರಿಗೆ ಕಾಲಮಿತಿಯೊಳಗೆ ಮುಂಬಡ್ತಿ ನೀಡ ಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇವರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒಗಳು ಸೇರಿದಂತೆ ಎಲ್ಲಾ ವೃಂದ ನೌಕರರ ಸಂಘಗಳ ಒಕ್ಕೂಟದಿಂದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಒಂದು ವಾರಗಳಿಂದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತ್ತಿದ್ದು ಸಾರ್ವಜನಿಕವಾಗಿ ಸಮಸ್ಯೆ ಸೃಷ್ಟಿಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇದೆ ಅಕ್ಟೋಬರ್ 4 ರಿಂದ ಬೆಂಗಳೂರಿನ ಸ್ವಾತ್ರಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಇದುವರೆಗೂ ಗ್ರಾಮೀಣ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲಾ ಆದ್ದರಿಂದ ಈ ಪ್ರತಿಭಟನೆಯನ್ನು ರಾಜ್ಯದ್ಯಾಂತ ಏಕಕಾಲದಲ್ಲಿ ಆಯಾ ಜಿಲ್ಲಾವಾರು ಜಿಲ್ಲಾ ಪಂಚಾಯಿತಿಯ ಮುಂದೆ ಇದೆ ಅಕ್ಟೋಬರ್ 7ರಿಂದ ಬೆಳ್ಳಿಗೆ 11:00 ಘಂಟೆಯಿಂದ ಜಿಲ್ಲಾ ಪಂಚಾಯಿತಿಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡರು. ಪ್ರತಿಭಟನೆ ಮುಂದುವರೆಸಲು ಆರ್.ಡಿ.ಪಿ.ಆರ್. ಕುಂಟುಂಬ ನಿರ್ದರಿಸಿದೆ. ಸ್ಥಗಿತಗೊಂಡ ಗ್ರಾಪಂ ಆಡಳಿತ ಯಂತ್ರ:ತಾಲೂಕಿನಲ್ಲಿ ಒಟ್ಟು 22 ಗ್ರಾಪಂಗಳಿದ್ದು, ಇವುಗಳು ಕಾರ್ಯನಿರ್ವಹಿಸುವ ಬಾಪೂಜಿ ಸೇವಾ ಕೇಂದ್ರದಲ್ಲಿ ಗ್ರಾಮೀಣ ಭಾಗದ ಜನರಿಗೆ ಆಧಾರ್ ತಿದ್ದುಪಡಿ, ಪಹಣಿ, ಜಾತಿ ಪ್ರಮಾಣಪತ್ರ, ಬೆಳೆ ದೃಢೀಕರಣ, ಮಾಸಾಶನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಜನನ ಹಾಗೂ ಮರಣ ಪ್ರಮಾಣಪತ್ರ ಸೇರಿದಂತೆ ವಿವಿಧ ಇಲಾಖೆಗಳ 100 ಸೇವೆಗಳು ನೌಕರರ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿವೆ, ಈಗ ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು. ಕಾರ್ಯದರ್ಶಿಗಳು. ಕರ ವಸೂಲಿಗಾರರು. ಗುಮಾಸ್ತರು. ಡಾಟಾ ಎಂಟ್ರಿ ಆಪರೇಟರ್ ಗಳು. ಜವಾನರು. ವಾಟರ್ ಮ್ಯಾನ್ ಗಳು ಸ್ವಚ್ಛತಾ ಕೆಲಸಗಾರರು ದ್ವಿತೀಯ ದರ್ಜೆ ಸಹಾಯಕರು ಮುಷ್ಕರದಲ್ಲಿ ಭಾಗವಹಿಸುವುದರಿಂದ ಗ್ರಾಪಂಗಳ ಸೇವೆಗಳು ಸ್ತಬ್ಧವಾಗಿದೆ, ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳು ಬಿಕೋ ಎನ್ನುತ್ತೇವೆ ಗ್ರಾಪಂ ಸಿಬ್ಬಂದಿ ಪ್ರತಿಭಟನೆಗೆ ಹೋಗಿರುವುದರಿಂದ ಕೆಲವು ಗ್ರಾಪಂ ಗಳಿಗೆ ಬೀಗ ಹಾಕಿರುವುದು, ಇನ್ನೂ ಹಲವಾರು ಗ್ರಾಪಂ ಗಳು ಬೀಗ ತೆರೆದಿದೆಯಾದರೂ ಯಾವುದೇ ಸೇವಾ ಸೌಲಭ್ಯ ಗ್ರಾಮಸ್ಥರಿಗೆ ದೊರಕುತ್ತಿಲ್ಲ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಗ್ರಾಮ ಪಂಚಾಯಿತಿಗಳಿಗೆ ಬಂದು ಬರೀ ಕೈಯಲ್ಲಿ ವಾಪಸ್ ಆಗುತ್ತಿದ್ದಾರೆ,
ವರದಿ : ಹುಸೇನ್ ಮೊತೇಖಾನ್