“ನಾವೂ ಬದುಕಬೇಕು” ರಾಜ್ಯವ್ಯಾಪಿ ಜನಾಂದೋಲನ: ವೆಲ್ಪೇರ್ ಪಾರ್ಟಿ ಬೆಂಬಲ.
2019ರ ವರ್ಷದ ಕೊನೆಯ ಭಾಗದಲ್ಲಿ ಚೀನಾ ದೇಶದಲ್ಲಿ ಕೊರೋಣ ಸಾಂಕ್ರಾಮಿಕ ರೋಗ ಕಾಣಿಸಿಕೊಂಡು, ಜಗತ್ತಿನಾದ್ಯಂತ ವ್ಯಾಪಿಸಿತು, 2020 ವರ್ಷದ ಆರಂಭದಲ್ಲಿ ಭಾರತ ದೇಶದಲ್ಲಿ ಕಾಣಿಸಿಕೊಂಡಿತು. ರೋಗದ ಬಗ್ಗೆ ವೈದ್ಯಕೀಯ ಮತ್ತು ವೈಜ್ಞಾನಿಕ ತಜ್ಞರು ಎರಡು ವರ್ಷಗಳ ಅವಧಿಯದ್ದಾಗಿರಬಹುದೆಂದು, . ಜನರು ರೋಗದೊಂದಿಗೆ ಬದುಕಬೇಕಾದ ಪರಿಸ್ಥಿತಿ ಎದುರಾಗುತ್ತದೆಂದು ಎಚ್ಚರಿಕೆ ನೀಡಿದರು. ಕಳೆದ ಒಂದು ವರ್ಷದಲ್ಲಿ ಸುಮಾರು 2.5 ಲಕ್ಷ ನಾಗರಿಕರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆಂದು ಪತ್ರಿಕಾ ವರದಿ ತಿಳಿಸಿದೆ. ಕೊರೋಣ ರೋಗ ತಡೆಗಟ್ಟುವ ಕಾರ್ಯದಲ್ಲಿ ಬಹಳಷ್ಟು ವೈದ್ಯರು ಪ್ರಾಣ ಕಳೆದುಕೊಂಡರು ಅವರಲ್ಲಿ ಬಹಳಷ್ಟು ಮಂದಿಗೆ ಪರಿಹಾರವನ್ನು ಸರಕಾರ ನೀಡಿಲ್ಲ, ಕಳೆದ ವರ್ಷ ಕೇಂದ್ರ ಸರಕಾರ ಕೋವಿಡ್ ದುಷ್ಪರಿಣಾಮ ತಡೆಯಲು “ಲಾಕ್ಡೌನ್” ಜಾರಿ ಮಾಡಿತು. ಈ ಅವಧಿಯಲ್ಲಿ ಸರಕಾರಿ ಅಂದಾಜು ಪ್ರಕಾರ 2.5 ಲಕ್ಷ ಜೀವಹಾನಿಯಾಯಿತು. ವಲಸೆ ಕಾರ್ಮಿಕರ ದಾರುಣ್ಯತೆ (ಮಣ್ಣು ತಿಂದು ದಿನ ಕಳೆದ ಪರಿಸ್ಥಿತಿ) ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯ ಚಿತ್ರಣ, ಕೈಗಾರಿಕೆಗಳು ಮುಚ್ಚಲ್ಪಟ್ಟು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡ ಚಿತ್ರಣ ನಮ್ಮ ಮುಂದಿದೆ. ಕೊವೀಡ್ ವೈರಸ್ ಎರಡನೆಯ ಅಲೆಯು ದೇಶದಲ್ಲಿ ಕಾಣಿಸಿಕೊಂಡಿತು. ಕೇಂದ್ರ ಸರ್ಕಾರ ಹಾಗೂ ಕೆಲ ರಾಜ್ಯ ಸರಕಾರಗಳು ಚುನಾವಣೆಯ ಕಾರ್ಯದಲ್ಲಿ ಮಗ್ನರಾಗಿದ್ದವು. ಇದೇ ಅವಧಿಯಲ್ಲಿ ಕೋರಾಣದ ಅಟ್ಟಹಾಸದಿಂದ ಸಾವಿನ ಸಂಖ್ಯೆ ಯು ಏರಿತು. ಕರ್ನಾಟಕ ಸೇರಿದಂತರ ಇತರ ರಾಜ್ಯ ಸರಕಾರಗಳು ಬೇಜವಾಬ್ದಾರಿಯಿಂದ ಎಚ್ಚೆದ್ದು ಮತ್ತೆ ಅವೈಜ್ಞಾನಿಕ “ಲಾಕ್ಡೌನ್” ಜಾರಿ ಮಾಡಿತು. ಮತ್ತೆ ಬಸ್ಸ್ ಸಂಚಾರ ಸ್ದಗಿತವಾಯಿತು. ರೈಲು ಸಂಚಾರ ಬಹುತೇಕ ಕೊನೆಗೊಂಡಿತು. ವಿಚಿತ್ರ ಕೊವಿಡ್ ಮಾರ್ಗಸೂಚಿಯಿಂದ ಜನಸಾಮಾನ್ಯರ ದುಡಿಮೆ ಇಲ್ಲವಾಯಿತು. ಸರಕಾರವು ಲಾಕ್ ಡೌನ್ ವ್ಯವಸ್ಥೆ ಜಾರಿ ಮಾಡುವ ಮೊದಲು, ನಾಗರಿಕರ ಆಹಾರ ಪರಿಸ್ಥಿತಿ, ಉದ್ಯೋಗದ ಸ್ಥಿತಿಗತಿ, ವಲಸೆ ಕಾರ್ಮಿಕರ – ರೋಗಿಗಳ ರೋಧನೆ, ಜನಸಾಮಾನ್ಯರ ಜೀವನ ಅರ್ಥಮಾಡಿಕೊಳ್ಳಬೇಕಿತ್ತು, ಇದು ಯಾವುದನ್ನು ಸರಕಾರ ಮಾಡಲಿಲ್ಲ. ಈಗಿನ ವಿಷಮ ಪರಿಸ್ಥಿತಿಯಲ್ಲಿ ದುಡಿಮೆ ನಷ್ಟವಾಗಿರುವುದರಿಂದ ಕುಟುಂಬ ಜೀವನ ನಿರ್ವಹಣೆಯು ಹಳಿ ತಪ್ಪಿದವು. ಆಹಾರ ನಿರ್ವಹಣೆ, ವೈದ್ಯಕೀಯ ಖರ್ಚುವೆಚ್ಚ, ಮನೆ ನಿರ್ವಹಣೆ ಸಾಧ್ಯವಿಲ್ಲದಂತಾಗಿದೆ. ಆದರೂ ಕೋವಿಡ್ ಸಾಂಕ್ರಮಿಕ ರೋಗ ತಡೆ ಕಾರ್ಯದಲ್ಲಿ ಸರಕಾರವು ನಾಗರಿಕರಿಗೆ ಕೋವಿಡ್ ರೋಗ ಅದರ ಪರಿಣಾಮ, ಅದನ್ನು ತಡೆಯುವ ಬಗ್ಗೆ ಅರಿವು ನೀಡಿ ಜಾಗೃತಿ ಮೂಡಿಸಬೇಕಿತ್ತು, ಇದಕ್ಕೆ ಬೇಕಾದಂತಹ ಆರೋಗ್ಯ ಮಾಹಿತಿ ಚಟುವಟಿಕೆಗಳನ್ನು ನಡೆಸಬೇಕಿತ್ತು. ಕೋವಿಡ್ ರೋಗ ಪರೀಕ್ಷೆ ವಿಧಾನ ಸಮರ್ಪಕವಾಗಿ, ಸಾರ್ವತ್ರಿಕವಾಗಬೇಕಿತ್ತು. ಕೋವಿಡ್ ಪರೀಕ್ಷೆ ಮಾಡಿಸುವಂತಹ ಕಾರ್ಯವಿಧಾನದಿಂದ ರೋಗಿಗಳು ಭಯಭೀತರಾಗಿ, ಜನರು ಪರೀಕ್ಷೆ ನಡೆಸುವುದನ್ನು ಬಹಳಷ್ಟು ಕಡಿಮೆ ಮಾಡಿದ್ದಾರೆ. ಕೋವಿಡ್ ರೋಗ ತಡೆಗಟ್ಟುವ ಕ್ರಿಯೆಯಲ್ಲಿ ಲಸಿಕೆ ಕೊಡುವ ಕಾರ್ಯಕ್ರಮ ರೂಪಿಸಲಿಲ್ಲ. ರಾಜ್ಯ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆಮ್ಲಜನಕ ಸಿಗದೇ ರೋಗಿಗಳು ಜೀವ ಕಳೆದುಕೊಳ್ಳಬೇಕಾಯಿತು. ಜನಪ್ರತಿನಿಧಿಗಳು, ಸರಕಾರದ ಮಂತ್ರಿಗಳು ಪ್ರಜೆಗಳಿಗೆ ಆಹಾರ, ಆರ್ಥಿಕ, ಆರೋಗ್ಯ ಮತ್ತು ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದು ಬಿಟ್ಟು ಲಾಕ್ ಡೌನ್ ಯಶಸ್ವಿಗೊಳಿಸಬೇಕೆಂದು ಕರೆ ನೀಡುತ್ತಿರುವುದು ಜನಕ್ರೋಶಕ್ಕೆ ಗುರಿಯಾದರು. ರಾಜ್ಯ ಸರಕಾರವು ತೇಪೆ ಹಚ್ಚಲು ಪ್ಯಾಕೇಜ್ ಸೆಲೆಕ್ಟಟ್ ಸೆಕ್ಟರ್ ಗಳಿಗೆ rs.2000 ₹3000 ಪರಿಹಾರ ಘೋಷಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಹಾರ ಸಾಮಗ್ರಿಗಳ ಬೆಲೆ ವೃದ್ಧಿಸಿದೆ, ಇಂಧನ ಬೆಲೆ ಏರಿಕೆ ಆಗಿದೆ. ಗ್ಯಾಸ್ ಸಿಲಿಂಡರ್ ದರ ದುಪ್ಪಟ್ಟಾಗಿದೆ. ಆರೋಗ್ಯದ ಖರ್ಚು ವೃದ್ಧಿಸಿದೆ. ಸರಕಾರವು ನೀಡುವಂತಹ 2000 rs.3000 ಕುಟುಂಬ ನಿರ್ವಹಣೆ ಸಾಧ್ಯವೇ.? ಲಾಕ್ಡೌನ್ ಪರಿಸ್ಥಿತಿಯಿಂದಾಗಿ ದಲಿತರು ಆದಿವಾಸಿಗಳು, ಅಲೆಮಾರಿ ಜನಾಂಗ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳು, ಬಡವರು ದುರ್ಬಲರು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದು, ಸರ್ಕಾರವು ಕೋವಿಡ್ ರೋಗಕ್ಕೆ ಸಂಬಂಧಿಸಿದ ಲಸಿಕೆ ಹಾಗೂ ಇತರ ಚಿಕಿತ್ಸೆಗಳನ್ನು ಉಚಿತವಾಗಿ ಸಮರ್ಪಕವಾಗಿ ನೀಡಬೇಕು. ಎಲ್ಲರಿಗೂ ತುರ್ತಾಗಿ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಎಲ್ಲಾ ಬಡ ಕುಟುಂಬಗಳಿಗೆ ಬೇಕಾದಂತಹ ಆಹಾರ ಸಾಮಗ್ರಿ ಹಾಗೂ ಮಾಸಿಕ 5000 ರೂಪಾಯಿ ನೀಡಬೇಕು. ದುಡಿಯುವ ಜನರನ್ನು ಕಳೆದುಕೊಂಡ ಕುಟುಂಬಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಪ್ರಮುಖ ಸಂಘಟನೆ,ರಾಜಕೀಯ ಪಕ್ಷಗಳು ಸೇರಿಕೊಂಡು “ನಾವೂ ಬದುಕಬೇಕು” ಎಂಬ ಜನಾಗ್ರಹ ಚಳುವಳಿ ನಡೆಸುತ್ತಿದೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಆದಿಲ್ ಪಟೇಲ್ ರಾಜ್ಯ ಕಾರ್ಯದರ್ಶಿ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ.
ವರದಿ – ಸಂಪಾದಕೀಯ