ಮೊರಬನಹಳ್ಳಿ: ಕ್ರಾಂತಿಕಾರಿ ಕಾಂಮ್ರೇಡ್ ಕರಿಯಪ್ಪರ  ಕ್ರಾಂತಿ ಕಾರಿ ಹೆಜ್ಜೆ.

Spread the love

ಮೊರಬನಹಳ್ಳಿ: ಕ್ರಾಂತಿಕಾರಿ ಕಾಂಮ್ರೇಡ್ ಕರಿಯಪ್ಪರ  ಕ್ರಾಂತಿ ಕಾರಿ ಹೆಜ್ಜೆ.

 

ವಿಜಯ ನಗರ ಜಿಲ್ಲೆ ಕೂಡ್ಲಿಗಿ: ಕಾಂಮ್ರೇಡ್ ಕರಿಯಪ್ಪರವರು, ಕ್ರಾಂತಿಕಾರಿ ಹೆಜ್ಜೆಗಳಿಗೆ ಹೆಸರು.ಅವರು ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನದ  ಜಾಗೃತಿ, ಹಾಗೂ ಕೋರೋನಾ ಸಂದರ್ಭದಲ್ಲಿ ಕೋವಿಡ್ ಜಾಗ್ರತೆ ಮೂಡಿಸುವ ಮೂಲಕ. ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಸಂವಿಧಾನ ಓದುವ ದಿನ ಮಾತ್ರವಲ್ಲದೇ, ಅನೇಕ ದೇಶಭಕ್ತರ ರಾಜ್ಯ ನಾಯಕರುಗಳ ಜಯಂತಿ ದಿನಾಚರಣೆ ಸಂದರ್ಭಗಳಲ್ಲಿ. ತಮ್ಮದೇ ಆದ ಹಾಗೂ ವೈಚಾರಿಕ ನೆಲೆಗಟ್ಟಿನ ಸಮತಾವದದ ಧಾಟಿಯಲ್ಲಿ, ತಮ್ಮೊಂದಿಗೆ ತಮ್ಮ ಮಕ್ಕಳಾದಿಯಾಗಿ ಸಾಮಾಜಿಕ ಕ್ರಾಂತಿಕಾರಿ ನಿಲುವುಗಳೊಂದಿಗೆ. ವೈಚಾರಿಕತೆ ಸಾಮಾಜಿಕ ನ್ಯಾಯ ಸಮಾನತೆ, ಹಾಗೂ ಕಾನೂನಾತ್ಮಕ ನಿಲುವಿನೊಂದಿಗೆ, ಹರಿಕಾರರು ಹಾಕಿಕೊಟ್ಟ ದಾಟಿಯಲ್ಲಿಯೇ ವಿಶಿಷ್ಠ ಆಚರಣೆ. ಮತ್ತು ಆದರ್ಶನೀಯ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡವರಾಗಿದ್ದಾರೆ, ಕಾಂಮ್ರೇಡ್  ಕರಿಯಪ್ಪರವರು. ಅಂತೆಯೇ ದಸರಾ ಹಬ್ಬದಂದು ಸಂವಿಧಾನ ಶಿಲ್ಪಿ ಡ‍ಾ”ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರ, ಸಮಾನತೆಯ ಹರಿಕಾರ ಬಸವಣ್ಣನವರ ಭಾವಚಿತ್ರ ಹಾಗೂ ತ್ಯಾಗಮಹಿ ಶಾಂತಿ ಧೂತ ಬುದ್ಧರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ. ದಸರಾ ಹಬ್ಬದ ನವರಾತ್ರಿಯ ದಿನ ಆಯುಧ ಪೂಜೆಯಂದು, ದಿನಬಳಕೆಯ ಆಯುಧ ಸಾಮಾಗ್ರಿಗಳನ್ನು ಪೂಜೆಗೈಯ್ಯದೆ. ಗೌತಮ ಬುದ್ಧ, ಕ್ರಾಂತಿಕಾರಿ ಬಸವಣ್ಣರ ತತ್ವಾದರ್ಶಗಳು ಹಾಗೂ ಡಾ”ಬಿ.ಆರ್.ಅಂಬೇಡ್ಕರ್ ರವರ  ಸಂವಿಧಾನ. ಸರಳ ಹಾಗೂ ಯಶಸ್ವೀ ಜೀವನಕ್ಕೆ ಸಾತ್ವಿಕಾಯುಧಗಳಾಗಲಿವೆ ಎಂಬುದು, ಕ್ರಾಂತಿ ಕಾರಿ ಕಾಂಮ್ರೇಡ್ ಕರಿಯಪ್ಪರವರ ನಿಲುವಾಗಿದೆ. ತಮ್ಮೊಂದಿಗೆ ತಮ್ಮ ಮಡದಿ ಮಕ್ಕಳನ್ನೂ ಸಹ, ತಮ್ಮ ಕ್ರಾಂತಿಕಾರಿ ವಿಭಿನ್ನ ದಾಟಿಯ ದಾರಿಯಲ್ಲಿಯೇ ಕರೆದೊಯ್ಯುತ್ತಿದ್ದಾರೆ. ಕರಿಯಪ್ಪರವರ ಪ್ರತಿ ಕ್ರಾಂತಿ ಕಾರಿ ಹೆಜ್ಜೆಯೊಂದಿಗೆ, ಅವರ ಕುಟುಂಬದ ಸದಸ್ಯರೆಲ್ಲರೂ ಹೆಜ್ಜೆ ಹಾಕುತ್ತಾ ಸಾಥ್ ನೀಡುತ್ತಿದ್ದಾರೆ. ಮಡದಿ ಲಕ್ಷ್ಮೀ ಬಾಲಕ ಮನೋರಂಜನ್, ಹಾಗೂ ಮಗಳು ಚಂದು. ಅವರ ಅಣ್ಣನ ಮಗ ಬಾಲಕ ನಾಗರಾಜ, ತಮ್ಮನ ಮಗ ಬಾಲಕ ಮಾರುತಿ. ಮತ್ತು ಅವರ ತಂಗಿ ಮಗಳು ಪುಟ್ಟ ಬಾಲಕಿ ಅನು ಕೂಡ, ಕರಿಯಪ್ಪನವರ ಗರಡಿಯಲ್ಲಿದ್ದಾರೆ. ಪದವೀದರರಾಗಿರುವ ಕಾಂಮ್ರೇಡ್ ಕರಿಯಪ್ಪನವರು, ವಿದ್ಯಾರ್ಥಿ ಜೀವನದುದ್ದಕ್ಕೂ ಹೋರಾಟದ ಗೀಳು ಹೊಂದಿದ್ಧವರು. ಕಮ್ಯುನಿಸ್ಟ್ ಸಿದ್ಧಾಂತಕ್ಕೆ  ಕಟ್ಟುಬಿದ್ದಿರುವ ಅವರು ವೃತ್ತಿಯಲ್ಲಿ ಅರ್ಜಿ ಫಾರಂ ಮಾರಾಟಗಾರರಾಗಿದ್ದು, ಹೋರಾಟಗಳು ಜನ ಜಾಗ್ರತೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದನ್ನೇ ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಮೊರಬನಹಳ್ಳಿಯಂತಹ ಹಿಂದುಳಿದ ಕುಗ್ರಾಮದಲ್ಲಿ, ವಾಲ್ಮೀಕಿ ಸಮುದಾಯದ ಬಡ ಕುಟುಂಬದಿಂದ ಹೊರಹೊಮ್ಮಿದ ಕ್ರಾಂತಿಕಾರಿ ಕರಿಯಪ್ಪರವರು. ಸಾಮಾಜಿಕ  ಮೌಲ್ಯ ಸಮಾನತೆ ಕಂದಾಚಾರಗಳ ವಿರುದ್ಧ, ಕ್ರಾಂತಿಕಾರಿಗಳ ಆದರ್ಶಗಳ ರಹದಾರಿಯಲ್ಲಿಯೇ ನಡೆಯುವುದನ್ನು ರೂಡಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಮಾಜ ಮುಖಿ ಹೃದಯ ಶ್ರೀಮಂತಿಕೆ ತೋರಿದ್ದಾರೆ, ಕರಿಯಪ್ಪರವರು ಮಹಾನಾಯಕರ ಜೀವನ ಗಾಥೆಯಂತೆ. ನಿತ್ಯ ಜೀವನದಲ್ಲಿ  ನಡೆಯುವ ಸಾಹಸ ಮಾಡುತ್ತಿದ್ದು, ಯುವ ಪೀಳಿಗೆಗೆ ಆದರ್ಶ ಯುವ ಪುರುಷರಾಗಿದ್ದಾರೆ. ಅವರಿಗೊಂದು ಸಲಾಂ..

🙏 ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *