ರಾಯಚೂರಲ್ಲಿ ಬೋಯಿಂಗ್ ಅತ್ಯಾಧುನಿಕ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ಶಾಸಕ ತುರ್ವಿಹಾಳ ಒತ್ತಾಯ.
ರಾಯಚೂರಿನಲ್ಲಿ ಅಮೇರಿಕಾದ ಬೋಯಿಂಗ್ ಆಸ್ಪತ್ರೆಯನ್ನು ಸ್ಥಾಪಿಸಲು ಒತ್ತಾಯ :- ಮಸ್ಕಿ ನೂತನ ಶಾಸಕ ಆರ್ ಬಸನಗೌಡ ತುರುವಿಹಾಳ* ರಾಯಚೂರು ಬಿಸಿಲನಾಡು ಎಂದೇ ಪ್ರಖ್ಯಾತವಾಗಿದ್ದು. ಈ ನಾಡಲ್ಲಿ ಅಮೆರಿಕದ ಬೋಯಿಂಗ್ ಸಂಸ್ಥೆಯ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಬೇಕೆಂದು ಮಸ್ಕಿ ನೂತನ ಶಾಸಕ ಆರ್ ಬಸನಗೌಡ ತುರುವಿಹಾಳ ಒತ್ತಾಯಿಸಿದ್ದಾರೆ. ಅಮೆರಿಕದ ಬೋಯಿಂಗ್ ಸಂಸ್ಥೆಯು ದೇಶದ 5 ರಾಜ್ಯಗಳಲ್ಲಿ ತಲಾ ಎರಡು ಕೋವಿಡ್ ಆಸ್ಪತ್ರೆಗಳನ್ನು ತೆರೆಯಲು ಮುಂದಾಗಿದೆ. ಈ ಆಸ್ಪತ್ರೆಯನ್ನು ರಾಜ್ಯದಲ್ಲಿ ಒಂದು ಬೆಂಗಳೂರು ಹಾಗೂ ಇನ್ನೊಂದು ಕಲಬುರ್ಗಿಯಲ್ಲಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಆದರೆ ಕಲಬುರ್ಗಿ ಯಲ್ಲಿ ಮಂಜೂರು ಮಾಡಿದ ಆಸ್ಪತ್ರೆಯನ್ನು ರಾಯಚೂರಿನಲ್ಲಿ ಸ್ಥಾಪನೆ ಮಾಡಲು ಮಸ್ಕಿ ನೂತನ ಶಾಸಕ ಆರ್ ಬಸವನಗೌಡ ತುರುವಿಹಾಳ ಮಾನ್ಯರಲ್ಲಿ ಒತ್ತಾಯಿಸಿದ್ದಾರೆ. ಈಗಾಗಲೇ ಕಲಬುರ್ಗಿಯಲ್ಲಿ ಇ.ಎಸ್.ಐ ಜಯದೇವ ಆಸ್ಪತ್ರೆ , ಹೃದಯರೋಗ ಆಸ್ಪತ್ರೆ ಸೇರಿದಂತೆ ಸರಕಾರಿ ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆ ಸೇರಿದಂತೆ ಹಲವು ಮಹತ್ವದ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಲಾಗಿದ್ದು. ಅದರಿಂದಾಗಿ ಬೋಯಿಂಗ್ ಆಸ್ಪತ್ರೆಯನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದು ನ್ಯಾಯಯುತವಾಗಿದೆ ಎಂದರು. ಅಮೇರಿಕಾದ ಬೋಯಿಂಗ್ ಆಸ್ಪತ್ರೆಯೂ 200 ಹಾಸಿಗೆಗಳನ್ನು ಹೊಂದಿದ್ದು ಎಲ್ಲಾ 200 ಹಾಸಿಗೆಗಳು ಆಕ್ಸಿಜನ್ , ವೆಂಟಿಲೇಟರ್ ಸೇರಿದಂತೆ ಎಲ್ಲ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ಜಿಲ್ಲೆಯ ರಿಮ್ಸ್ ಮತ್ತು ಒಪೇಕ್ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಸೌಲಭ್ಯಗಳು ಇಲ್ಲದ ಕಾರಣ ರಾಯಚೂರಿನಲ್ಲಿ ಬೋಯಿಂಗ್ ಆಸ್ಪತ್ರೆ ಸ್ಥಾಪನೆ ಮಾಡಿದರು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದರು. ಮಹಾಮಾರಿ ಕೊರೊನಾ 2 ನೇ ಅಲೆಯ ಈ ಸಂದರ್ಭದಲ್ಲಿ ರಿಮ್ಸ್ ನಲ್ಲಿ ಪಿಎಂ ಕೇರ್ ಪಂಡ್ ನಲ್ಲಿ ಖರೀದಿಸಿದ 33 ವೆಂಟಲೆಟರ್ ಗಳು ಕಳೆದ 6 ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ ಆದ್ದರಿಂದ ಶೀಘ್ರ ದುರಸ್ತಿಯಾದರೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಹಿರಿಯ ಮಾನ್ಯರಿಗೆ ಅಮೇರಿಕಾದ ಬೋಯಿಂಗ್ ಆಸ್ಪತ್ರೆಯನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲು ಮನವಿ ಮೂಲಕ ಮಸ್ಕಿ ನೂತನ ಶಾಸಕ ಬಸವನಗೌಡ ತುರುವಿಹಾಳ ಒತ್ತಾಯಿಸಿದ್ದಾರೆ.
ವರದಿ – ಸಂಪಾದಕೀಯ