ಅಖಿಲ ಭಾರತೀಯ ರೈತ ಪಾರ್ಟಿ ಮಹಿಳಾ ರಾಜ್ಯಾಧ್ಯಕ್ಷೆಯಾಗಿ_ ಎಸ್.ಯಶೋಧ,
ವಿಜಯನಗರ ಜಿಲ್ಲೆ ಹೂವಿನ ಹಡಗಲಿ: ಅಖಿಲ ಭಾರತೀಯ ರೈತ ಪಾರ್ಟಞ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆಯಾಗಿ, ಹೂವಿನ ಹಡಿಗಲಿಯ ಎಸ್.ಯಶೋಧ ನೇಮಕವಾಗಿದ್ದಾರೆ. ಈ ಕುರಿತು ಅಖಿಲ ಭಾರತೀಯ ರೈತ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಬಸಂತ್ ಕುಮಾರ ರವರು, ನೇಮಕಾತಿ ಆದೇಶ ಪ್ರತಿಯನ್ನು ಎಸ್.ಯಶೋಧರವರಿಗೆ ನೀಡಿದ್ದಾರೆ. ರಾಷ್ಟ್ರೀಯ ಉಪಾಧ್ಯಕ್ಷ ಹೆಚ್ಕೆ.ಸಂತೋಷ ಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಪಿ.ಲಾವಣ್ಯ ಗೌಡ, ಮುಖಂಡರಾದ ಮಂಜೇ ಗೌಡ ರವರು ಉಪಸ್ಥಿತರಿದ್ದರು. ನೂತನ ಮಹಿಳಾ ರಾಜ್ಯಾಧ್ಯಕ್ಷೆ ಎಸ್.ಯಶೋಧ ರವರನ್ನು, ನೇಮಿಸಿರುವುದಾಗಿ ಅಧೀಕೃತ ಪ್ರಕಟಣೆ ಮೂಲಕ ಘೋಷಿಸಿದ್ದಾರೆ. ಅಖಿಲ ಭಾರತೀಯ ರೈತ ಪಾರ್ಟಿಯನ್ನು ಎಲ್ಲಾ ಹಂತದಲ್ಲಿ ಸಂಘಟಿಸಿ, ಸರ್ವತೋಮುವಾಗಿ ಪ್ರಭಲಗೊಳಿಸಬೇಕೆಂದು. ರೈತರ ಸಂಕಷ್ಟ ಗಳಿಗೆ ಧ್ವನಿಯಾಗಬೇಕು, ಪಾರ್ಟಿವತಿಯಿಂದ ರೈತರ ಪರ ಹೋರಾಟಗಳನ್ನು ಹಮ್ಮಿಕೊಳ್ಳಬೇಕಿದೆ. ಈ ಮೂಲಕ ನಾಡಿನ ರೈತರ ಹಿತ ಕಾಪಾಡಬೆಕಿದೆ, ಮತ್ತು ರೈತರಿಗೆ ನಷ್ಟವಾದಾಗ ಹಾಗೂ ಹಾನಿಯಾದಾಗ ಸೂಕ್ತ ಪರಿಹಾರ ಒದಗಿಸಬೇಕಿದೆ. ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ಖಂಡಿಸಿ. ಜನ ವಿರೋಧಿ ನೀತಿಯ ವಿರುದ್ಧ, ಹಾಗೂ ಅವ್ಯವಸ್ಥೆಯ ವಿರುದ್ಧ. ರೈತರ ಪರ ಸಂಘಟನೆಗಳ ಸಹಯೋಗದೊಂದಿಗೆ, ಹೋರಾಟಗಳನ್ನು ಮಾಡಬೇಕೆಂದು, ಅಖಿಲ ಭಾರತೀಯ ರೈತ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ. ಬಸಂತ ಕುಮಾರವರು, ಪ್ರಕಟಣೆಯ ಮೂಲಕ. ಮಹಿಳಾ ವಿಭಾಗದ ನೂತನ ರಾಜ್ಯಾಧ್ಯಕ್ಷೆ, ಎಸ್.ಯಶೋಧರವರಿಗೆ ಸೂಚಿಸಿದ್ದಾರೆ. ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ,