ಜಾನಪದ ಸಂಸ್ಕೃತಿಯ ರಾಯಭಾರಿಗಳು–ಗೌರಿ ಮಕ್ಕಳು,
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ, ತಾಲೂಕಿನೆಲ್ಲೆಡೆಗಳಲ್ಲಿ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಗೌರಿ ಮಕ್ಕಳು (ಗೌರಿ ಹುಡುಗೇರು) ಅಲ್ಲಲ್ಲಿ ಕಾಣ ಸಿಗುತ್ತಾರೆ. ಗೌರಿ ಹಬ್ಬ ಪ್ರಾರಂಭವಾದಾಗಿನಿಂದ, ದಸರಾ ಹಬ್ಬದ ಬನ್ನಿ ಮುಡಿದಾಕ್ಷಣವೇ ಗೌರಿ ಮಕ್ಕಳು ತಮ್ಮ ರಾಯ ಭಾರತ್ವ ಆರಂಭಿಸುತ್ತಾರೆ. ಅಂದು ಅವರು ಹಿರಿಯರಿಗೆ ಬನ್ನಿ ಮುಡಿದ ನಂತರ, ಹುತ್ತದ ಬಳಿ ಇರುವ ಸ್ವಚ್ಚವಾದ ಮಣ್ಣನ್ನು. ಬಾಲೆಯರೆಲ್ಲರೂ ತಲಾ ಒಂದೊಂದು ಸೇರಿನಂತೆ ಹೊತ್ತು ತಂದು, ಹತ್ತಿರದ ದೇವಸ್ಥಾನದ ಮೂಲೆಯಲ್ಲಿ ಗುಪ್ಪೆ ಹಾಕುತ್ತಾರೆ ಅದುವೇ ಮಣ್ಣಿನ ಗೌರಮ್ಮ. ಅದನ್ನು ತರಹವಾರಿ ಹೂಗಳಿಂದ ಪೂಜಿಸಿ ಸಿಂಗರಿಸಿ ಆರಾಧಿಸಲಾಗುತ್ತದೆ, ಪ್ರತಿ ದಿನಕ್ಕೊಂದರಂತೆ ವಿಶೇಷ ಆಹಾರವನ್ನು ನೈವೇದ್ಯ ಮಾಡಲಾಗುತ್ತದೆ. ಮಣ್ಣಿನ ಗೌರಮ್ಮಗೆ ಮೂರು ದಿನಗಳ ಸಂಜೆ ಹೊತ್ತಲ್ಲಿ, ಪೂಜಿಸಿ ಸಾಂಪ್ರದಾಯಿಕ ಜಾನಪದೀಯ ಆಡುಗಳೊಂದಿಗೆ ಆರಾಧಿಸುತ್ತಾರೆ. ಈ ಮೂಲಕ ಗೌರಿ ಮಕ್ಕಳು ಒಗ್ಗಟ್ಟು ಪ್ರದರ್ಶಿಸುತ್ತಾರೆ, ಗಲ್ಲಿಯ ಮಕ್ಕಳು ಪರಸ್ಪರ ಸೌಹಾರ್ಧತೆ ಮೆರೆಯುತ್ತಾರೆ. ಮೂರು ದಿನಗಳ ಮುಸ್ಸಂಜೆ ಹೊತ್ತಲ್ಲೇ ಗೌರಿಯನ್ನ ಆರಾಧಿಸಿ ಪೂಜಿಸಿದ ಗೌರಿ ಮಕ್ಕಳು, ಮೂರನೇ ದಿನದಂದು(ಹುಣ್ಣಿಮೆಯ ಮುನ್ನ ದಿನ) ಮಣ್ಣಿನ ಗೌರಿಯನ್ನು ಶಾಸ್ತ್ರೋಕ್ತವಾಗಿ ಗಂಗೆ ಕಾಣಿಸುತ್ತಾರೆ. ಮರುದಿನವೇ ಗಲ್ಲಿಯ ದೇವಸ್ಥಾನ ಅಥವಾ ಜಂಗಮರ ಮನೆಯಲ್ಲಿ, ನಿಯಮಾನುಸಾರ ವಿಧಿವತ್ತಾಗಿ ಗೌರಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಅಂದು ಸಂಜೆ ಹೊತ್ತಲ್ಲಿ ಬಾಲೆಯರು ಮಹಿಳೆಯರು, ಸಕ್ಕರಾರತಿ ಬೆಳಗಿ ಗೌರಮ್ಮಳನ್ನು ಆರಾಧಿಸಲಾಗುತ್ತದೆ. ಜಾನಪದ ಸಂಸ್ಕ್ರತಿಯ ರಾಯಭಾರಿಗಳಿವರು- ಗೌರಿ ಆರಾಧಕರು, ರೈತ ಕುಟುಂಬದವರಾಗಿರುತ್ತಾರೆ. ವಿಜಯನಗರ ಬಳ್ಳಾರಿ ಜಿಲ್ಲೆಗಳು ಸೇರಿದಂತೆ, ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಎತ್ತೇಚ್ಚವಾಗಿ ಕಾಣಸಿಗಿತ್ತಾರೆ. ಪಾರಂಪಾರಿಕವಾಗಿ ತಲೆತಲಾಂತರಗಳಿಂದ ಈವರೆಗೂ ಕೂಡ, ಹತ್ತಾರು ಕುಟುಂಬಗಳು ಗೌರಿ ಆರಾಧನೆಯನ್ನು. ಧಾರ್ಮಿಕ ನಿಯಮಾನುಸಾರ ಶ್ರದ್ಧೆ, ಭಯ, ಭಕ್ತಿಯಿಂದ, ಗೌರಿ ಹುಣ್ಣಿಮೆಯನ್ನು ಶಿಷ್ಟಾಚಾರಗಳೊಂದಿಗೆ ಆಚರಿಸಲಾಗುತ್ತದೆ. ರೈತ ಕುಟುಂಬದ ನೆತ್ತಿ ಬಲಿತ ಕೂಸು(ಎರೆಡ್ಮೂರು ವರ್ಷದ) ಸೇರಿದಂತೆ, ಬಾಲೆಯರು ಸುಕನ್ಯೆಯರು ನಡೊ ವಯಸ್ಸಿನವರು. ಮುಪ್ಪಿನವರು ವಯೋವೃದ್ಧರು ಸಹ, ಗೌರಿ ಆರಾಧನೆಯಲ್ಲಿ ತಮ್ಮನ್ನ ತೊಡಗಿಸಿಕೊಳ್ಳುತ್ತಾರೆ.
ಇವರೆಲ್ಲರೂ ಸಂಪ್ರದಾಯಿಕ ರೈತ ಕುಟುಂಬದಿಂದ ಬಂದ, ಗೌರಿ ಆರಾಧಕರಾಗಿರುತ್ತಾರೆ. ಇವರಲ್ಲಿ ಬಾಲೆಯರು ಮಾತ್ರ ಗೌರಿ ಮಕ್ಕಳು (ಗೌರಿ ಹುಡಿಗೇರು), ಎಂದು ಗ್ರಾಮೀಣ ಭಾಗದಲ್ಲಿ ಗುರುತಿಸಲಾಗುತ್ತದೆ. ಇವರು ಕೋಲಾಣಿ ಕೊಲು ಹಾಕುತ್ತಾ ಹಾಡುತ್ತಾರೆ, ಗೌರಿ ಕುರಿತಾದ ಜಾಬಪದೀಯ ಹಾಡುಗಳನ್ನು ಹಾಡುತ್ತಾರೆ. ತಮ್ಮ ಹಿರಿಯರು ತಮಗೆ ಹೇಳಿಕೊಟ್ಟ ತುಸು ಹೊತ್ತಿನ ಹಾಡುಗಳನ್ನು, ಕೋಲು ಹಾಕುತ್ತಾ ಹಾಡುತ್ತಾ ಹಿಂದೂ ಸಂಸ್ಕೃತಿಯ ರಾಯಭಾರಿಗಳಾಗಿ ಮೆರೆಯುತ್ತಾರೆ. ಸಾಂಪ್ರದಾಯಿಕ ಉಡುಪಿನಲ್ಲಿಯೇ ಹಳ್ಳಿಯ ಗಲ್ಲಿ ಗಲ್ಲಿ ಹತ್ತಿರದ ಪಟ್ಟಣಕ್ಕೆ ತೆರಳಿ, ಜನ ವಸತಿ ಸಾರ್ವಜನಿಕ ಸ್ಥಳ ವ್ಯಾಪಾರ ಕೇಂದ್ರಗಳಿಗೆ ತೆರಳಿ ಹಾಡುತ್ತಾರೆ. ಶ್ರೀಗೌರಮ್ಮ ಗಂಗೆ ಕಂಡ ಮೂರು ದಿನಗಳ ವರೆಗೆ, ಗೌರಿ ಮಕ್ಕಳು ಗೌರಿ ಹಾಡು ಹಾಡುತ್ತ ಗೌರಿಯನ್ನ ಸ್ಥುತಿಸಿ ಮೆರೆಸುತ್ತಾರೆ. ಸಹಜವಾಗಿಯೇ ದಸರಾ ರಜೆ ಸಂದರ್ಭ ಇರುವುದರಿಂದಾಗಿ, ಶಾಲೆಗೆ ತೆರಳುವ ರೈತ ಕುಟುಂಬದ ಬಹುತೇಕ ಬಾಲೆಯರು.
ಆಧುನಿಕ ಕಾಲದಲ್ಲೂ ಗೌರಿ ಆರಾಧನೆ, ತನ್ನ ಮೂಲ ಸ್ವರೂಪವನ್ನು ಬದಲಿಸದೆ. ಪರಂಪರಾಗತವಾಗಿ ನಡೆದುಕೊಂಡು ಬಂದಂತೆ ಮೊದಲಿನಂತೆಯೇ, ಗ್ರಾಮೀಣ ಸೊಗಡಿನ ಜಾನಪದ ಶೈಲಿಯಲ್ಲಿ. ಗೌರಿ ಹುಣ್ಣಿಮೆ ತನ್ನ ಮೂಲ ಆಚರಣೆ, ಸಡಗರವನ್ನು ಉಳಿಸಿಕೊಂಡು ಬಂದಿದೆ.
ಹಾಡಿನ ಮೂಲಕ ಗ್ರಾಮಸ್ಥರಿಗೆ ಗೌರಮ್ಮನ ಮಹಿಮೆ ತಿಳಿಸುವುದು, ಹಾಗೂ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಗೌರಿ ಮಕ್ಕಳು ತಮ್ಮ ಸುತ್ತಮುತ್ತಲಿನ ಗ್ರಾಮದ ದೊಡ್ಡ ದೊಡ್ಡ ಮನೆತನಗಳ ಮನೆಗಳಿಗೆ, ಪಟ್ಟಣದ ಗಲ್ಲಿ ಗಲ್ಲಿಗಳ ವ್ಯಾಪರ ಕೇಂದ್ರ ಮಳಿಗೆ ಗಳಿಗೆ ತೆರಳಿ ಹಾಡು ಹಾಡುತ್ತಾರೆ. ಈ ಸಂದರ್ಭದಲ್ಲಿ ವ್ಯಾಪಾರಸ್ಥರು, ಗ್ರಾಮಸ್ಥರು, ಗೌರಿ ಮಕ್ಕಳಿಗೆ ಹಣ ನೀಡುತ್ತಾರೆ ಹಾಗೂ ಹಲವರು ಸಿಹಿ ಖಾದ್ಯವನ್ನು ಗೌರಿ ಮಕ್ಕಳಿಗೆ ಉಣ ಬಡಿಸಿ ಸತ್ಕರಿಸುತ್ತಾರೆ.
ಗ್ರಾಮೀಣ ಭಾಗದ ಹಿರಿಯ ಜೀವಗಳು ಗೌರಿಯನ್ನು ನೆನೆದು, ಗೌರಿಯ ಸಂಕಷ್ಟದ ಕುರಿತಾದ ಮಹಿಮೆಯ ಸಾರುವ ಜಾನಪದ ಹಾಡುಗಳನ್ನು ಹಾಡುತ್ತಾರೆ. ಹೀಗೆ ಗೌರಿ ಮಕ್ಕಳು(ಗೌರಿ ಹುಡಿಗೇರು) ಗೋರಿಯನ್ನು ಮೆರೆಸಿ ಆರಾಧಿಸುತ್ತಾರೆ, ಈ ಮೂಲಕ ಅವರು ಜಾನಪದ ಸಂಸ್ಕೃತಿಯ ರಾಯಭಾರಿಗಳಾಗುತ್ತಾರೆ ಸರದಾರರಾಗುತ್ತಾರೆ.
✍️ ವಂದೆೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ,