ಏಕಕಾಲದಲ್ಲಿ ಗುರುಭೂಷಣ ಮತ್ತು ಶಿಕ್ಷಣ ಸೇವಾರತ್ನ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತಿ.
ರಾಜಧಾನಿ ಬೆಂಗಳೂರಿನ ಇಂಡೊಗ್ಲೋಬ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಸೂರ್ಯ ಫೌಂಡೇಶನ್, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಸ್ಪಾರ್ಕ್ ಅಕಾಡೆಮಿ, ಎಜಿಎಸ್ ಕಾರ್ಟ್ ಸಹಯೋಗದೊಂದಿಗೆ ಹಮ್ಮಿಕೊಂಡ 2024 ನೇ ಸಾಲಿನ ಬೃಹತ್ ರಾಜ್ಯ ಶೈಕ್ಷಣಿಕ ಸಮ್ಮೇಳನದಲ್ಲಿ ಕರ್ನಾಟಕದಾತ್ಯಂತ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಗೈದ, ಶಿಕ್ಷಣ ಸೇವಾ ಮನೋಭಾವದಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸಾಧಕ ಸಾಧಕೀಯರನ್ನೂ, ಶಾಲೆಗಳನ್ನೂ ಗುರುತಿಸಿ ಸರಿಸುಮಾರು 240 ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸುವ ಮಹತ್ ಕಾರ್ಯವು ಜರುಗಿತು. 2 ದಿನಗಳ ಬೃಹತ್ ಸಮ್ಮೇಳನ ಇದಾಗಿದ್ದು ಖ್ಯಾತ ಶಿಕ್ಷಣ ತಜ್ಞರ ಡಾ. ಚೇತನ್ ರಾಮ್ ಆಗಮಿಸಿ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದರು. ಇಂತಹ ಒಂದು ಬೃಹತ್ ರಾಜ್ಯ ಶೈಕ್ಷಣಿಕ ಸಮ್ಮೇಳನದಲ್ಲಿ ನಿರಂತರವಾಗಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಗೈದುದ್ದಕ್ಕಾಗಿ ಗುರುಭೂಷಣ ರಾಜ್ಯ ಪ್ರಶಸ್ತಿ ಹಾಗೂ ಶಿಕ್ಷಣದಲ್ಲಿ ಸೇವಾ ಮನೋಭಾವವನ್ನು ಹೊಂದಿ ಆ ಮೂಲಕ ಸೇವೆಗೈದದ್ದಕ್ಕಾಗಿ ಶಿಕ್ಷಣ ಸೇವ ರತ್ನ ರಾಜ್ಯ ಪ್ರಶಸ್ತಿ ಕರಾವಳಿಯ ಮನೆಮಗಳು ಭಾರತಿಗೆ ಲಭಿಸಿವೆ. ಬಡತನದಲ್ಲಿ ಹುಟ್ಟಿದ ಇವರು ಬಾಲ್ಯದಿಂದಲೂ ಶಿಕ್ಷಕಿ ಆಗಬೇಕು ಎಂಬ ಕನಸು ಹೊತ್ತವರು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಹೊತ್ತ ಇವರು ನಿರಂತರ 20 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಹಸ್ರಾರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಚಿಕ್ಕಂದಿನಿಂದಲೂ ಸರಸ್ವತಿ ಇವರೊಂದಿಗೆ ನಿಂತಿದ್ದಾಳೆ ಎಂದರೆ ತಪ್ಪಾಗಲಾರದು. ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮ ಸ್ಟೇಟ್ ಸಿಬಿಎಸ್ಸಿ ಐಸಿಎಸ್ಇ ಮಾಧ್ಯಮದಲ್ಲಿ ಪ್ರಾಥಮಿಕ ಪ್ರೌಢ ಹಾಗೂ ಪಿಯುಸಿ ವರೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಚಿತ್ರಕಲೆ, ಸಂಗೀತ, ಭರತನಾಟ್ಯ, ನೃತ್ಯ, ಹೊಲಿಗೆ, ಕಸೂತಿ ಮುಂತಾದ ಕಲಾ ಕ್ಷೇತ್ರದಲ್ಲಿಯೂ, ಪ್ರಾಣ ವಿದ್ಯೆಯಂತಹ ವೈದ್ಯಕೀಯ ಕ್ಷೇತ್ರದಲ್ಲೂ ಸ್ಪೋಕನ್ ಇಂಗ್ಲೀಷ್, ವೈದಿಕ ಗಣಿತ, ಅಬಾಕಸ್, ಪ್ರೇರಕ ಭಾಷಣ, ಶಿಕ್ಷಕರ ತರಬೇತಿ, ವ್ಯಾಪಾರ ಉದ್ಯೋಗಗಳ ತರಬೇತಿ, ಮುಂತಾದ ಜ್ಞಾನ ಸಂಪಾದನಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಗೈದ ಹಿರಿಮೆ ಭಾರತಿಯವರದು. ಚಿಕ್ಕ ವಯಸ್ಸಿನಲ್ಲೇ ಸಾಧನೆಯ ಮೆಟ್ಟಿಲೇರುವ ಇವರು ಸಾಮಾಜಿಕ ವಲಯ, ಶೈಕ್ಷಣಿಕ ವಲಯ ಹಾಗೂ ಮಾನವ ಸಂಪನ್ಮೂಲ ಅಥವಾ ಔದ್ಯೋಗಿಕ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ಸಲಹಾ ಕೇಂದ್ರವನ್ನು ಪ್ರಾರಂಭಿಸಿ ಹಲವಾರು ಶಿಕ್ಷಣ ಸಂಸ್ಥೆ, ಸಾಮಾಜಿಕ ವಲಯ ಹಾಗೂ ನಿರುದ್ಯೋಗಿಗಳಿಗೆ ದಾರಿದೀಪವಾಗಿದ್ದಾರೆ. ಇವರ ಸಾಧನೆ ಇನ್ನಷ್ಟು ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಹಿತೈಷಿಗಳು ಶುಭ ಹಾರೈಸಿದ್ದಾರೆ. ವರದಿ – ಸಂಪಾದಕೀಯಾ