ಬುದ್ದಂ, ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) & ತಾವರಗೇರಾ ನ್ಯೂಸ್ ಪತ್ರಿಕ ಬಳಗದವತಿಯಿಂದ ನಾಡಿ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು,

Spread the love

ಬುದ್ದಂ, ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್(ರಿ) & ತಾವರಗೇರಾ ನ್ಯೂಸ್ ಪತ್ರಿಕ ಬಳಗದವತಿಯಿಂದ ನಾಡಿ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು,

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.[೩] ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಇತಿಹಾಸ

  • ಕನ್ನಡ ಕುಲಪುರೋಹಿತರಾದಆಲೂರು ವೆಂಕಟರಾಯರುಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪ ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.
  • ೧೯೫೬ ರ ನವೆಂಬರ್ ೧ ರಂದು, ಮದ್ರಾಸ್ಮುಂಬಯಿಹೈದರಬಾದ್ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
  • ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು “ಕರ್ನಾಟಕ” ಎಂದು ಬದಲಾಯಿತು.
  • ಈ ಸಂದರ್ಭದಲ್ಲಿದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃಕೆ. ಶಿವರಾಮ ಕಾರಂತಕುವೆಂಪುಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ
  • ನಮಗೆಲ್ಲಾ ತಿಳಿದಿರುವಂತೆ ಭಾರತ ಸ್ವಾತಂತ್ರ್ಯಗೊಂಡ ನಂತರ ಕನ್ನಡ ಭಾಷಿಕರಿರುವ ವಿವಿಧ ಪ್ರದೇಶಗಳನ್ನು ಒಂದುಗೂಡಿಸಿ “ಮೈಸೂರು ರಾಜ್ಯʼʼವನ್ನು ರಚಿಸಲಾಗಿತ್ತು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ) ಪ್ರದೇಶಗಳು ಈ ರಾಜ್ಯದಲ್ಲಿ ವಿಲೀನವಾಗಿದ್ದವು. ಆದರೆ ಈ ಪ್ರದೇಶದ ಜನರಿಗೆ ರಾಜ್ಯಕ್ಕೆ “ಮೈಸೂರು ರಾಜ್ಯʼʼ ಎಂದು ನಾಮಕರಣ ಮಾಡಿರುವುದು ಇಷ್ಟವಾಗಿರಲಿಲ್ಲ. ಈ ಹೆಸರಲ್ಲಿ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು.
  • ಈ ಕುರಿತು ಆಗ ರಾಜ್ಯದಲ್ಲಿ ಸುದೀರ್ಘ ಚರ್ಚೆಯ ಬಳಿಕ ೧೯೭೩ರ ನವೆಂಬರ್ ೧ರಂದು ರಾಜ್ಯಕ್ಕೆ “ಕರ್ನಾಟಕʼʼವೆಂದು ಪುನರ್ ನಾಮಕರಣ ಮಾಡಲಾಯಿತು. ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಅವರು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದರು.
  • ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ ಶುಭದಿನದಂದು ರಾಜ್ಯವನ್ನು ಉದ್ದೇಶಿಸಿದ ಮಾತನಾಡಿದ ಅರಸರು ಈ ಬೆಳವಣಿಗೆಯನ್ನು ಹೀಗೆ ವಿವರಿಸಿದ್ದರು; ಕರ್ನಾಟಕದ ಏಕೀಕರಣದ ಹಂಬಲಕ್ಕೆ ಸ್ಫುಟವಾದ ರೂಪು ದೊರೆಕಿದ್ದು ೧೯೧೬ರಲ್ಲೇ. ಧಾರವಾಡದಲ್ಲಿ ಕರ್ನಾಟಕ ಸಭೆ ಸ್ಥಾಪನೆಯಾದಾಗ, ಏಕೀಕರಣ ಸಮ್ಮೇಳನವು ಧಾರವಾಡದಲ್ಲಿ ಮೊಟ್ಟ ಮೊದಲಿಗೆ ನಡೆಯಿತು. ೧೯೨೦ರಲ್ಲಿ ನಾಗಪುರ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಭಾಷಾವಾರು ಪ್ರಾಂತ್ಯರಚನೆ ಸ್ಪಷ್ಟವಾದ ರೂಪುರೇಷೆ ಪಡೆಯಿತು. ಆದರೆ ಕನ್ನಡಿಗರ ಕನಸು ನನಸಾಗಲು ಮುವತ್ತಾರು ವರ್ಷಗಳೇ ಬೇಕಾಯಿತು.
  • ೧೯೫೬ರ ನವೆಂಬರ್ ಒಂದರಂದು ಕನ್ನಡನಾಡು ಉದಯಿಸಿತು. ಆದರೆ ಈ ನಾಡಿನ ಹಿರಿಮೆ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸಂಕೇತವಾದ ಹೆಸರು ಇರದೇ ಇದ್ದುದು ಜನಮನದ ಅಂತರಾಳವನ್ನು ಕಲಕಿತ್ತು. ಮತ್ತೆ ೧೭ ವರ್ಷಗಳ ನಂತರ ಕಾಲಮಾನ ಪರಿಸ್ಥಿತಿಗೆ ಅನುಗುಣವಾಗಿ ನಡೆದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಈಗ ಜನತೆಯ ಮಹತ್ವಾಕಾಂಕ್ಷೆ ಈಡೇರಿದೆ. ಹಲವಾರು ದಶಕಗಳ ಕಾಲ ನಾಡು-ನುಡಿಯ ಉತ್ಕಟ ಪ್ರೇಮಿಗಳ ತ್ಯಾಗ ಶ್ರಮದ ಸಾಕ್ಷಾತ್ಕಾರ ಈ ನಾಮಕರಣ. ಆ ಪ್ರಾತಃಸ್ಮರಣೀಯರಿಗೆಲ್ಲ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಗಳು ಎಂದು ಹೇಳಿದ್ದರು.
  • ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಮಾರ್ಪಡಿಸುವ ಕುರಿತು ಸರ್ಕಾರದ ತೀರ್ಮಾನವನ್ನು ವಿಧಾನಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ದೇವರಾಜ ಅರಸು ಅವರೇ ಮಂಡಿಸಿದ್ದರು. ಆ ದಿನವನ್ನು ಅವರು ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ದಿವಸ ಎಂದು ಬಣ್ಣಿಸಿದರು,,  ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) & ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು      
  • ವರದಿ :- ಸಂಪಾದಕೀಯ

Leave a Reply

Your email address will not be published. Required fields are marked *