“ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ” – ಶರಣ ಕೆ ಸೋಮಶೇಖರಪ್ಪ.
ದಾವಣಗೆರೆ:ನ೦೧: ದಾವಣಗೆರೆ ಜಿಲ್ಲೆಯೇ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್ ಅನುಭವಮಂಟಪದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬರೆದಂತೆ – ಓದುವ, ಓದಿದಂತೆ – ಬರೆಯುವ, ಅಂಕೆಗಳನ್ನು ಒತ್ತಾಕ್ಷರಗಳನ್ನಾಗಿ, ಒತ್ತಾಕ್ಷರಗಳನ್ನ ಅಂಕೆಗಳನ್ನಾಗಿ ಬಳಸುವ ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅನುಭವಮಂಟಪ ಶಾಲಾ ಸಂಕೀರ್ಣದ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ನಿರ್ದೇಶಕರಾದ ಶರಣ ಕೆ ಸೋಮಶೇಖರಪ್ಪ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಅನುಭವಮಂಟಪ ಶಾಲಾ ಸಂಕೀರ್ಣದ ವಿವಿಧ ವಿಭಾಗಗಳ ಶಿಕ್ಷಕರಾದ ಶರಣೆ ಅಂಬುಜ ಕೆ ಅವರು “ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆಗಳು”, ಶರಣೆ ದೀಪಾ ಹೆಚ್ ಸಿ ಅವರು “ಕನ್ನಡ ಭಾಷೆಯ ವೈಶಿಷ್ಟ್ಯಗಳು”, ಶರಣೆ ಪಲ್ಲವಿ ಎ ಎಲ್ ಅವರು “ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು”, ಶರಣ ಗಣೇಶ್ ಎಸ್ ಕೆ ಅವರು “ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಆಲೂರು ವೆಂಕಟರಾಯರ ಪಾತ್ರ” ವಿಷಯಗಳ ಕುರಿತು ಭಾಷಣ ಮಾಡಿದರು.
ಶರಣೆ ಲಕ್ಷ್ಮೀ ಉಪ್ಪಾರ್ ಮತ್ತು ಸಂಗಡಿಗರು, ಶರಣೆ ಶಶಿಕಲಾ ಜಿ ಮತ್ತು ಸಂಗಡಿಗರು, ಶರಣೆ ಮೇಘ ಬಿ ಎಂ ಮತ್ತು ಸಂಗಡಿಗರು ಕನ್ನಡ ನಾಡು ನುಡಿಯ ಕುರಿತಾಗಿ ಸಮೂಹ ಗಾಯನ ಮಾಡಿದರು.
ಇದೇ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ “ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರ ಪ್ರಶಸ್ತಿಗೆ” ಭಾಜನರಾಗಿರುವ “ಶರಣ ಶಿವಮೂರ್ತಿ ಹೆಚ್” ಅವರಿಗೆ ಅನುಭವಮಂಟಪ ಶಾಲಾ ಸಂಕೀರ್ಣದ ವಿವಿಧ ವಿಭಾಗಗಳ ಮುಖ್ಯಸ್ಥರು ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು.
ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸುಂದರ ಸಮಾರಂಭದ ನಿರೂಪಣೆಯನ್ನು ಶರಣೆ ಪಲ್ಲವಿ ಬಿ ಮತ್ತು ಶರಣೆ ಮಮತಾ ಸಿ ಎಸ್, ಸ್ವಾಗತವನ್ನು ಶರಣೆ ಲಕ್ಷ್ಮೀ ಉಪ್ಪಾರ್, ವಂದನಾರ್ಪಣೆಯನ್ನು ಶರಣೆ ಸುವರ್ಣ ಬಿ ಹೆಚ್ ಅವರು ನಡೆಸಿಕೊಟ್ಟರು.
ಈ ಸುಂದರ ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಶರಣ ಉಮೇಶ್ ಜಿ ಪಿ, ಶರಣ ಶ್ರೀಕುಮಾರ್ ಹಿಂಡಸಗಟ್ಟಿ, ಶರಣ ರವಿಕುಮಾರ್ ಹೆಚ್ ಎಸ್, ಶರಣ ಕೆ ನಾಗರಾಜ್ ನಾಯ್ಕ್, ಶರಣೆ ಮಂಜುಳಾ ಕೆ ಬಿ, ಶರಣೆ ಗೌರಂಬಿಕಾ ಎಂ, ಶರಣೆ ಭುವನೇಶ್ವರಿ ಜೆ ಎಸ್, ಫಿಲೊಮೀನ ಪಿ ಸಿ ಅವರು ವಿದ್ಯಾರ್ಥಿ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿಗಳಾದ ಶರಣ ಶಿವಮೂರ್ತಿ ಹೆಚ್, ಶರಣೆ ವತ್ಸಲಾ ಕೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶರಣೆ ವೀಣಾ ಜಿ ಪಿ, ಶರಣೆ ಪಂಕಜಾಕ್ಷಿ ಎಂ, ಶರಣೆ ಶ್ರೇಯಾ ಜಿಂಗಾಡೆ, ಕನ್ನಡ ಶಿಕ್ಷಕರಾದ ಶರಣ ಪ್ರಸನ್ನ ಎಂ ಎಂ, ಶರಣ ಸಂದೀಪ ಎಲ್ ಎಸ್, ಶರಣ ಶಿವಮೂರ್ತಿ ಹೆಚ್, ಶರಣ ಬಸವರಾಜ್ ಕೆ ಎನ್ , ಶರಣ ಕೊಟ್ರೇಶ್ ಎ ಎನ್, ಶರಣ ಅನಂತ್ ಭಾಗವತ್, ಶರಣ ಗಣೇಶ್ ಎಸ್ ಕೆ, ಶರಣೆ ಭಾರತಿ ಕೆ ಎಸ್, ಶರಣೆ ವೀಣಾ ಜಿ ಪಿ, ಶರಣೆ ಜ್ಯೋತಿ ಆರ್, ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರಾದ ಶರಣ ನವೀನಕುಮಾರ್ ಜಿ ಎಸ್, ಶರಣ ಬಸವರಾಜ್ ಕೆ, ಶರಣ ಸಿದ್ದೇಶ್ ಕೆ ಬಿ, ಶರಣ ಶ್ಯಾಂ ನಾಯಕ್, ಶರಣೆ ಅನಿತಾ ಜೆ, ಶರಣೆ ಗುರುಬಸಮ್ಮ, ಶರಣೆ ಮಾಧುರಿ, ಶರಣೆ ಸುಜಾತ ಎನ್ ಬಿ, ಬೋಧಕೇತರ ಸಿಬ್ಬಂದಿಗಳಾದ ಶರಣ ಪ್ರವೀಣ್ ಬಿ ಕೆ, ಶರಣ ನವೀನ್ ಬಿ ಎ ಹಾಗೂ ಅನುಭವ ಶಾಲಾ ಸಂಕೀರ್ಣದ ಎಲ್ಲಾ ವಿಭಾಗದ ಶಿಕ್ಷಕರು ಉಪಸ್ಥಿತರಿದ್ದರು.
ಶಿವಮೂರ್ತಿ.ಹೆಚ್.ಕನ್ನಡ ಶಿಕ್ಷಕರು ಶ್ರೀ ತರಳಬಾಳು