ನೀನು ನಾನು,,,,,
ನನಗೆ ನೀನು
ನಿನಗೆ ನಾನು
ಜೀವನ ಬಂಧನ.
ಹೂವು ನೀನು
ದುಂಬಿ ನಾನು
ಜೀವನ ಹೂಬನ.
ಸ್ವರವು ನೀನು
ತಾಳವು ನಾನು
ಜೀವನ ಗಾಯನ.
ಭಾವವು ನೀನು
ಪದವು ನಾನು
ಜೀವನ ಕವನ.
ಹೃದಯ ನೀನು
ಬಡಿತ ನಾನು
ಜೀವನ ಚೇತನ.
ಕಾಯ ನೀನು
ಮನಸು ನಾನು
ಜೀವನ ಪಾವನ.
ಒಲವು ನೀನು
ನಲಿವು ನಾನು
ಜೀವನ ಮಂಥನ.
ನದಿಯು ನೀನು
ಕಡಲು ನಾನು
ಜೀವನ ಮಿಲನ.
ಜ್ಯೋತಿ ನೀನು
ಶಿವನು ನಾನು
ಜೀವನ ನಂದನ.
ಶಿವಜ್ಯೋತಿ (ಶಿವಮೂರ್ತಿ.ಹೆಚ್.) ಬಸಾಪುರ-ಆವರಗೆರೆ, ದಾವಣಗೆರೆ.
ದೂ.ಸಂ.9591417815.