ಜಿಲ್ಲಾ ಮಟ್ಟದ ಕವಿಗೋಷ್ಠಿ ನಿತ್ಯವು ಕನ್ನಡಪರ ಕೆಲಸಗಳು  ನಡೆಯಲಿ – ರಾಮು ಎನ್ ರಾಠೋಡ.

Spread the love

ಜಿಲ್ಲಾ ಮಟ್ಟದ ಕವಿಗೋಷ್ಠಿ ನಿತ್ಯವು ಕನ್ನಡಪರ ಕೆಲಸಗಳು  ನಡೆಯಲಿರಾಮು ಎನ್ ರಾಠೋಡ.

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಮತ್ತು ಜಿಲ್ಲಾ ಘಟಕ ಶಿವಮೊಗ್ಗದ ವತಿಯಿಂದ ದಿನಾಂಕ: ೦೩.೧೧.೨೦೨೪ ರಂದು ಭಾನುವಾರ ಕೆಇಬಿ ಇಂಜಿನಿಯರ್ ಅಸೋಸಿಯೇಷನ್ ಭವನದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಶ್ರೀ ಯಶ್ವಂತ್ ನಾಯ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರು ಉದ್ಘಾಟನೆ ಮಾಡಿ ಇಂದು ನಿವು ನೀವು ಎಲ್ಲರೂ ಸೇರಿ ದಿನ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಬರಹಗಾರರ ಸಂಘ ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ರಾಮು ಎನ್ ರಾಠೋಡ ಮಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಕನ್ನಡಪರ ಕಾರ್ಯಕ್ರಮಗಳು ಮತ್ತು ಧ್ಯೇಯೋದ್ದೇಶಗಳನ್ನು ಹೇಳಿ ಬರಹಗಾರರು ದಿನ ನಿತ್ಯದ ಬದುಕಿನಲ್ಲಿ ನೋಡುವ ಪರಿಪಾಟಲು, ಬವಣೆಗಳ ಕುರಿತು ಬರೆಯಬೇಕು  ಎಂದು ಹೇಳಿದರು.

ಶ್ರೀಮತಿ ಕುಮುದಾ ಸುಶೀಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಮತ್ತು ಸಾಹಿತಿಗಳು ಇವರು ಆಶಯ ನುಡಿ ನುಡಿದರು. ಶ್ರೀ ಇಂದೂಧರ ಆರ್ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಮತ್ತು ಸಾಹಿತ್ಯಾಸಕ್ತರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಡಾ. ಹಸೀನಾ ಹೆಚ್ ಕೆ ಸಾಹಿತಿಗಳು ಮತ್ತು ಜಿಲ್ಲಾಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕವನ ವಾಚನ ಮಾಡಿದ ಬರಹಗಳ ಕುರಿತು ಮಾತನಾಡಿ ಕವಿಗಳು ಹೆಚ್ಚೆಚ್ಚು ಓದಬೇಕು ಅಧ್ಯಯನಶೀಲರಾಗಬೇಕು ಎಂದು ಹೇಳಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ೪೦ ಕ್ಕೂ ಹೆಚ್ಚು  ಕವಿಗಳು ಕವನ ವಾಚನ ಮಾಡಿದರು. ಶ್ರೀಮತಿ ಭಾಗ್ಯ ಎಲ್ ಆರ್ ನಿರೂಪಣೆ ಮಾಡಿದರು, ಶ್ರೀ ಶ್ರೀ ಭುವನೇಶ್ ನಾಯ್ಕ್ ಹೆಚ್ ಪ್ರಾರ್ಥನೆ ಮಾಡಿದರು. ಶ್ರೀಮತಿ ಸಾವಿತ್ರಿ ಶಶಿಧರ್ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *