ಮಾನವ ಧರ್ಮದ ಕರುಣೆ ಅನುಕಂಪದ ಅರಮನೆಯಾಗಿದೆ ನಮ್ಮ ಸಿಂಧನೂರಿನ ಕಾರುಣ್ಯ ಕುಟುಂಬ —– ಅಮರಯ್ಯ ಸ್ವಾಮಿಗಳು.

Spread the love

ಮಾನವ ಧರ್ಮದ ಕರುಣೆ ಅನುಕಂಪದ ಅರಮನೆಯಾಗಿದೆ ನಮ್ಮ ಸಿಂಧನೂರಿನ ಕಾರುಣ್ಯ ಕುಟುಂಬ —– ಅಮರಯ್ಯ ಸ್ವಾಮಿಗಳು.

ಜಂಗಮನ ಕಾಯಕಕ್ಕೆ ಸಹಾಯ ಸಹಕಾರ ನೀಡಿದ ದಾನಿಗಳು ಕೂಡ ಜಂಗಮರೆ —-=ಮಾನವ ಧರ್ಮದ ಕರುಣೆ ಅನುಕಂಪದ ಅರಮನೆಯಾಗಿದೆ ನಮ್ಮ ಸಿಂಧನೂರಿನ ಕಾರುಣ್ಯ ಕುಟುಂಬ ಜಂಗಮನ ಕಾಯಕಕ್ಕೆ ಸಹಾಯ ಸಹಕಾರ ನೀಡಿದ ದಾನಿಗಳು ಕೂಡ ಜಂಗಮರೆ ನಮ್ಮ ಈ ಸಿಂಧನೂರಿನ ಕಾರುಣ್ಯ ಆಶ್ರಮವು ನೆಲೆ ಇಲ್ಲದ ಹಾಗೂ ನೊಂದು -ಬೆಂದ ಜೀವಿಗಳಿಗೆ ದಾನಿಗಳ ಸಹಕಾರ ಸಹಾಯ ಅನುಕಂಪ ಕರುಣೆಯ ಮೂಲಕ ಬದುಕು ಕೊಟ್ಟಿರುವುದು ನಮ್ಮ ನಾಡಿನ ಶರಣ ಸಂಸಾರ ಸಂಸ್ಕಾರ ಸಂಸ್ಕೃತಿಗೆ ಮೆರುಗು ತಂದುಕೊಟ್ಟಿದೆ. ಈ ಕಾರುಣ್ಯಾಶ್ರಕ್ಕೆ ಬಹು ದೊಡ್ಡ ಮಟ್ಟದ ಸಹಾಯ ಮಾಡಿದ ಸಿಂಧನೂರಿನ ವೈದ್ಯ ದೇವರುಗಳಾದ ಸಹನಾ ಮಕ್ಕಳ ಆಸ್ಪತ್ರೆಯ  ಡಾ.ಕೆ ಶಿವರಾಜ. ಹಾಗೂ ಅವರ ಸಹೋದರರಾದ ರಾಜಶೇಖರ ರೆಡ್ಡಿ ಹಾಗೂ ಖ್ಯಾತ ನೇತ್ರ ತಜ್ಞರಾದ  ಡಾ. ಚನ್ನನಗೌಡ. ಆರ್.ಪಾಟೀಲ್ ಇವರುಗಳ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಸಹಕಾರ ಮಾಡುತ್ತಿರುವ ದಾನಿಗಳ ಸೇವೆ ಕಾರುಣ್ಯ ಆಶ್ರಮಕ್ಕೆ  ಭದ್ರ ಬುನಾದಿಯಾಗಿದೆ. ಈ ಕರುಣೆಯ ಕಾರುಣ್ಯ ಆಶ್ರಮಕ್ಕೆ ನಮ್ಮ ಶ್ರೀಮಠದ ಆಶೀರ್ವಾದ ಸಹಾಯ ಸಹಕಾರ ನಿರಂತರವಾಗಿರುತ್ತದೆ ಎಂದು ಗೌಡನಭಾವಿಯ ಶ್ರೀ ಕಟ್ಟೆ ಬಸವೇಶ್ವರ ಸುಕ್ಷೇತ್ರದ ಪೀಠಾಧಿಪತಿಗಳಾದ ಬಾಲಯೋಗಿ ಶ್ರೀ ಶ್ರೀ ಶ್ರೀ ಅಮರಯ್ಯ ಸ್ವಾಮಿಗಳು ತಮ್ಮ ಆಶೀರ್ವಚನದ ನುಡಿಗಳನ್ನಾಡಿದರು. ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಂತೋಷ ಕುಮಾರ ಗೌಡ ಮಾಲಿಪಾಟೀಲ್ ಹುಡಾ ಸ್ನೇಹ ಬಳಗ ಮತ್ತು ಕುಟುಂಬದ ವತಿಯಿಂದ ಹಮ್ಮಿಕೊಂಡಿದ್ದ ” ಹೆತ್ತವರ ಹಿರಿಮೆ” ಕಾರ್ಯಕ್ರಮವು ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ  ಗೌಡನಭಾವಿ ಶ್ರೀ ಕಟ್ಟೆ ಬಸವೇಶ್ವರ ಸುಕ್ಷೇತ್ರದ ಶ್ರೀಶ್ರೀ ಶ್ರೀ ಅಮರಯ್ಯ ಸ್ವಾಮಿಗಳು ಹಾಗೂ ಸಂತೋಷ ಕುಮಾರಗೌಡ ಹುಡಾ ಇವರುಗಳಿಗೆ ಗೌರವ ಸಮರ್ಪಣೆ ಅರ್ಪಿಸಲಾಯಿತು. ನಂತರ ಆರ್.ಡಿ.ಸಿ.ಸಿ. ಬ್ಯಾಂಕ್ ರಾಯಚೂರು ನಿರ್ದೇಶಕರಾದ ಸೋಮನಗೌಡ ಬಾದರ್ಲಿ ಮಾತನಾಡಿ ಸಿಂಧನೂರಿನ ನಮ್ಮ ಈ ಕಾರುಣ್ಯ ಆಶ್ರಮಕ್ಕೆ ಪ್ರತಿಯೊಬ್ಬರೂ ಕೂಡ ಸಹಾಯ ಸಹಕಾರ ಮಾಡಬೇಕು ಮತ್ತು ವಿಶೇಷವಾಗಿ ಈ ನಮ್ಮ ಸಂಸ್ಥೆಯು ಬರೀ ವೃದ್ಧಾಶ್ರಮ ನಡೆಸುವುದಲ್ಲದೆ ಸಮಾಜದಲ್ಲಿರುವ ಹಿರಿಯರನ್ನು ಎಲ್ಲರೂ ಪ್ರೀತಿ ವಿಶ್ವಾಸ ಗೌರವದಿಂದ ಕಾಣಬೇಕು ಎನ್ನುವ ಅಭಿಯಾನದ ಮೂಲಕ ಸೇವೆಗೈಯ್ಯುತ್ತಿದೆ. ಹೋದ ವರ್ಷ ಇಡೀ ರಾಜ್ಯದಲ್ಲಿ ಹಿರಿಯ ನಾಗರಿಕ ಸೇವಾ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರದಿಂದ ಪಡೆದಿರುವ ಪ್ರಶಸ್ತಿ ಸರ್ಕಾರಕ್ಕೆ ದೊಡ್ಡಮಟ್ಟದ ಗೌರವ ತಂದುಕೊಟ್ಟಿದೆ ವೇದಿಕೆ ಮೇಲಿರುವಂತಹ ಶ್ರೀಗಳ  ಸಿಂಧನೂರು ಜನತೆಯ ಆಶೀರ್ವಾದ ನಮಗೆ ಜನಸೇವೆ  ಮಾಡಲು ಸ್ಫೂರ್ತಿಯಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರೇಶ ರಾರಾವಿಮಠ. ವೆಂಕೋಬ ನಾಯಕ ಭೂತಲದಿನ್ನಿ ಪತ್ರಕರ್ತರು. ವಿಜ್ಞೇಶ ಬ್ಯಾಂಕ್ ಸಿಬ್ಬಂದಿಗಳು.ಪ್ರದೀಪ್ ಪೂಜಾರಿ ಸಂಸ್ಥಾಪಕರು ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್. ಬಸವರಾಜ. ಕೆ.ಹುಡಾ. ದೇವೇಂದ್ರ ನಾಯಕ ಗೊಬ್ಬರಕಲ್. ಬಸವರಾಜ ಪಗಡದಿನ್ನಿ ಅಧ್ಯಕ್ಷರು ರೆಡ್ಡಿ ಸಮಾಜ ಸಿಂಧನೂರು. ಗಿರೀಶ. ಬಸವರಾಜ ಸಾಲಗುಂದ ಬಜರಂಗದಳ ಸಿಂಧನೂರು. ರಮೇಶ ಬಪ್ಪೂರ. ಪ್ರವೀಣ್ ಕುಮಾರ್ ಧುಮತಿ. ಹುಲ್ಲೇಶ ರೆಡ್ಡಿ ಇಂಜಿನಿಯರ್. ಸಿದ್ದನಗೌಡ ಪಗಡೆದಿನ್ನಿ. ರಾಜೇಶ ಪಗಡದಿನ್ನಿ. ವೀರೇಶ ನಾಯಕ. ಮುನ್ನಾ. ರಾಜು ಬಾದರ್ಲಿ ಶ್ರೀ ಶಕ್ತಿ ರಕ್ತ ಬಂಡಾರ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಸಿದ್ದಯ್ಯ ಸ್ವಾಮಿ. ಶರಣಮ್ಮ. ಮರಿಯಪ್ಪ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *