*‘ತಾರಕೇಶ್ವರ’ ಚಲನಚಿತ್ರ ತಂಡದಿಂದ ಅಬ್ಬರದ ಪ್ರಚಾರ *

Spread the love

*‘ತಾರಕೇಶ್ವರ’ ಚಲನಚಿತ್ರ ತಂಡದಿಂದ ಅಬ್ಬರದ ಪ್ರಚಾರ *


ಹುಬ್ಬಳ್ಳಿ : ಜಿ.ಆರ್ ಫಿಲಂಸ್ ಬೆಂಗಳೂರು ಲಾಂಛನದಲ್ಲಿ ಭಕ್ತಿ ಪ್ರಧಾನ ‘ತಾರಕೇಶ್ವರ’ ಅಡಿಬರಹದಲ್ಲಿ ‘ಅಸುರ ಕುಲತಿಲಕ’ ಎಂದು ಹೇಳಲಾದ ಕನ್ನಡ ಚಲನಚಿತ್ರ ತಂಡದ ಪತ್ರಿಕಾಗೋಷ್ಠಿ, ಪೋಸ್ಟರ್ ಬಿಡುಗಡೆ ಹಾಗೂ ಅಬ್ಬರದ ಪ್ರಚಾರ ಕಾರ್ಯ ಹುಬ್ಬಳ್ಳಿಯಲ್ಲಿ ನೆರವೇರಿತು.
ತಾರಕೇಶ್ವರ ಚಲನಚಿತ್ರ ತಂಡ ಮತ್ತು ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷರು , ಪದಾಧಿಕಾರಿಗಳು ಮತ್ತು ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಕಿತ್ತೂರರಾಣಿ ಚನ್ನಮ್ಮ ಪುತ್ಥಳಿಗೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಪಾಲಾರ್ಪಣೆ ಮಾಡುವ ಮೂಲಕ ಆಟೋದಲ್ಲಿ ‘ತಾರಕೇಶ್ವರ’ ಚಿತ್ರದ ಪ್ರಚಾರ ಕಾರ್ಯ ಕಿತ್ತೂರರಾಣಿ ಚನ್ನಮ್ಮನ ವೃತ್ತದಿಂದ ಆರಂಭಗೊಂಡಿತು. ನಂತರ ಪತ್ರಿಕಾಗೋಷ್ಠಿ ಮತ್ತು ಪೋಸ್ಟರ್ ಬಿಡುಗಡೆಯ ಕಾರ್ಯಕ್ರಮ ಜರುಗಿತು.
ಈಗಾಗಲೇ ಚಲನಚಿತ್ರರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಹಿರಿಯ ನಟ ಚಿತ್ರದ ನಿರ್ಮಾಪಕರೂ ಆದ ಗಣೇಶ್‌ರಾವ್ ಕೇಸರಕರ ಮಾತನಾಡಿ ತಾರಕೇಶ್ವರ ಚಿತ್ರ ನನ್ನ 333 ನೇ ಚಿತ್ರ .ಇದೆ ನ.15ರಿಂದ ರಾಜ್ಯಾದ್ಯಾಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ .ಈ ಹಿಂದೆ ನನ್ನ ಚಿತ್ರಗಳಿಗೆ ಪ್ರೋತ್ಸಾಹಿಸಿದಂತೆ ಈ ಚಿತ್ರವನ್ನೂ ಪ್ರೋತ್ಸಾಹಿಸಬೇಕು ಎಂದರು. ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಬಿ.ಎ.ಪುರುಷೋತ್ತಮ್ ಅವರು ಮಾತನಾಡಿ ಗಣೇಶ್‌ರಾವ್ ಇದರಲ್ಲಿ ಶಿವ,ಕುರುಡ, ತಾರಕೇಶ್ವರ ಮತ್ತು ಮಹಾರಾಜನಾಗಿ ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ . ಗಣೇಶ್‌ರಾವ್ ಕೇಸರಕರ್ ಪುತ್ರ ಪ್ರಜ್ವಲ್ ಕೇಸರಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು. ನಾಯಕಿ ರೂಪಾಲಿ ,ರಾಜೇಶ್ವರಿ, ಋತುಸ್ಪರ್ಶ ಚಲನಚಿತ್ರ ಮಂದಿರಕ್ಕೆ ಕುಟುಂಬ ಸಮೇತ ಬಂದು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದರು.
ತಾರಾಗಣದಲ್ಲಿ- ರಾಜನ ಮಗಳು ಶಿವಭಕ್ತೆ ಪಾರ್ವತಿಯಾಗಿ ನಾಯಕಿ ರೂಪಾಲಿ ,ತಾರಕೇಶ್ವರನನ್ನು ಸಂಹಾರ ಮಾಡುವ ಬಾಲ ಸುಬ್ರಹ್ಮಣ್ಯ ಪಾತ್ರದಲ್ಲಿ ಬಾಲನಟಿ ಋತುಸ್ಪರ್ಶ. ಇವರೊಂದಿಗೆ ಸುಮಿತ ಪ್ರವೀಣ್, ಅನ್ನಪೂರ್ಣ, ರತಿಮನ್ಮಥರಾಗಿ ವಿಕ್ರಂಸೂರಿ-ನಮಿತಾರಾವ್, ಉಳಿದಂತೆ ಶಂಕರಭಟ್, ಶ್ರೀವಿಷ್ಣು, ಜಿಮ್ ಶಿವು, ಎನ್.ಟಿ.ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ, ಬಸವರಾಜ ದೇಸಾಯಿ, ವೀರೇಂದ್ರ ಬೆಳ್ಳಿಚುಕ್ಕಿ, ಮಧು ಕಾರ್ತಿಕ್, ಗೀತಾ,ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಶ್ರೀರಾಮ್, ರೂಪ ಮುಂತಾದವರು ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ- ಛಾಯಾಗ್ರಹಣ ಮುತ್ತುರಾಜ್, ಸಂಗೀತ ರಾಜ್‌ಭಾಸ್ಕರ್, ಸಂಕಲನ ಅನಿಲ್ ಕುಮಾರ್, ನೃತ್ಯ ಕಪಿಲ್ ,ವಸ್ತಾçಲಂಕಾರ ವೀರೇಂದ್ರ ಬೆಳ್ಳಿಚುಕ್ಕಿ, ವರ್ಣಾಲಂಕಾರ ಅಭಿನಂದನ, ಪತ್ರಿಕಾ ಸಂಪರ್ಕ ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ, ಸಂಭಾಷಣೆ ಜೆಮ್ ಶಿವು, ಸಂಕಲನ ಆರ್. ಅನಿಲ್ ಕುಮಾರ್,ಸಹ ನಿರ್ದೇಶನ ಜೆಮ್ ಶಿವು, ಶ್ರೀಕರ ಮಂಜು, ಸಹ ನಿರ್ಮಾಪಕರು ತುಳಜಾಬಾಯಿ, ರೂಪ.ಎಸ್.ದೊಡ್ಡನಿ, ಡಾ.ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ , ನಿರ್ಮಾಣ ನಿರ್ವಹಣೆ ಹೇಮಂತ್ ಬಾಬು, ನಿರ್ಮಾಪಕರು ಗಣೇಶ್ ರಾವ್ ಕೇಸರಕರ ಆಗಿದ್ದಾರೆ. ಈ ಸಂದರ್ಭದಲ್ಲಿ ಚಿತ್ರ ತಂಡದ ನಾಯಕಿ ನಟಿ ರೂಪಾಲಿ, ರಾಜೇಶ್ವರಿ ಪಾಂಡೆ, ಋತುಸ್ಪರ್ಶ, ಡಾ.ಸುಮಿತ ಪ್ರವೀಣ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ , ಸುನೀತಾ, ಪ್ರಸಾಧನಕಾರ ಅಭಿನಂದನ, ಬಸವರಾಜ ದೇಸಾಯಿ, ನಮ್ಮ ಕರ್ನಾಟಕ ಸೇನೆಯ ಅಮೃತ ಇಜಾರಿ ಮತ್ತು ಕಾರ್ಯಕರ್ತರು ಹಾಜರಿದ್ದರು.
** ವರದಿ: ಡಾ.ಪ್ರಭು ಗಂಜಿಹಾಳ

Leave a Reply

Your email address will not be published. Required fields are marked *