ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಆಡಳಿತ ಮಂಡಳಿ ಸಭೆ.
ದಿನಾಂಕ:17.11.2024 ರ ಭಾನುವಾರ ದಂದು ಬಂಜಾರ ಸಮುದಾಯ ಭವನ ಹುಬ್ಬಳ್ಳಿ – ಧಾರವಾಡದಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು (ರಿ) ದ ಪ್ರಥಮ ಆಡಳಿತ ಮಂಡಳಿ ಸಭೆಯನ್ನು ನಡೆಸಲಾಯಿತು. ಈ ಆಡಳಿತ ಮಂಡಳಿ ಸಭೆಯಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಉದ್ಘಾಟನೆಯನ್ನು ಬೆಂಗಳೂರಿನಲ್ಲಿ ಮಾಡಲು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಅಧ್ಯಕ್ಷರ ಅನುಮತಿ ಮೆರೆಗೆ ಪರಿಷತ್ತಿನ ಮುಂದಿನ ನಡೆಯ ಬಗ್ಗೆ ಮತ್ತು ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ತಿರ್ಮಾನಗಳನ್ನು ತಗೊಂಡು ಸಭೆಯನ್ನು ಯಶಸ್ವಿಗೊಳಿಸಲಾಯಿತು.ಈ ಸಭೆಯಲ್ಲಿ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಜಾಧವ, ಉಪಾಧ್ಯಕ್ಷರುಗಳಾದ ಶ್ರೀ ಗೋಪಾಲ ನಾಯ್ಕ, ಶ್ರೀ ನರ್ಸಿಂಗ್ ಲಮಾಣಿ, ಶ್ರೀ ಎಲ್ ಮಂಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಕಠಾರಿ ನಾಯ್ಕ, ಖಜಾಂಚಿ ಶ್ರೀ ಮೋತಿಲಾಲ್ ರಾಠೋಡ್, ಸಂಘಟನಾ ಕಾರ್ಯದರ್ಶಿ ಶ್ರೀ ರಾಮು ಎನ್ ರಾಠೋಡ ಮಸ್ಕಿ, ಸಂಸ್ಕೃತಿ ಕಾರ್ಯದರ್ಶಿ ಶ್ರೀಮತಿ ಭಾಗ್ಯ ನಾಗರಾಜ ಬಂಜಾರ, ಸಹ ಕಾರ್ಯದರ್ಶಿ ಶ್ರೀ ಬಾಲು ಆರ್ ಚವ್ಹಾಣ್ ಮತ್ತು ಸದಸ್ಯರುಗಳಾದ ಕಲಾಶ್ರೀ ವಸಂತ ಎಲ್ ಚವ್ಹಾಣ್, ಡಾ. ಶಿವಾಜಿ ಲಮಾಣಿ, ಶ್ರೀ ಗಂಗಾಧರ ಪಮ್ಮಾರ, ಎಲ್ ಮಿಠ್ಯಾ ನಾಯ್ಕ, ಶ್ರೀಮತಿ ಸುಜಾತ ಚಂದ್ರಧರ್ ನಾಯ್ಕ್, ಶ್ರೀ ಬೆನಕ ನಾಯ್ಕ ಲಂಬಾಣಿ, ಶ್ರೀಮತಿ ಲಕ್ಷ್ಮೀ ಬಾಯಿ ಹಾಜರಿದ್ದರು. ಶ್ರೀ ತಿರುಮಲೇಶ್ ನಾಯ್ಕ, ಶ್ರೀ ಶಿವು ನಾಯ್ಕ, ಅಮರೇಶ ವೀಕ್ಷಕರಾಗಿ ಭಾಗಿಯಾಗಿದ್ದರು.
ವರದಿ-ಉಪಳೇಶ ವಿ.ನಾರಿನಾಳ.