ಕರ್ನಾಟಕದ ಸಂಸ್ಕೃತಿ ಅತ್ಯಂತ ಹೆಮ್ಮೆಪಡುವಂಥದ್ದು…..ಗಣೇಶ್ ಕೆ (ರಾಯಣ್ಣ ಅಭಿಮಾನಿ)
ಕದಂಬ ವಂಶದ ಸ್ಥಾಪನೆಯ ಮೂಲಕ ಮೊಟ್ಟಮೊದಲಿಗೆ ಕನ್ನಡದ ಮನೆತನವೇ ಕನ್ನಡಿಗ ರನ್ನು ಆಳುವುದು ಶುರುವಾಯಿತು. ಈ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಪ್ರಾಮುಖ್ಯತೆ ದೊರೆಯಿತು ಕಪ್ಪೆ ಅರಭಟ್ಟನ ಶಾಸನವು’ ಕನ್ನಡಿಗರು ಒಳ್ಳೆಯವರಿಗೆ ಒಳ್ಳೆಯವರು ಕೆಟ್ಟವರಿಗೆ ಅಷ್ಟೇ ಕೆಟ್ಟವರು’ ಎಂದು ಹೇಳಿರುವುದು ಕಂಡುಬರುತ್ತದೆ. ಕನ್ನಡಿಗರ ಇಂತಹ ಶೌರ್ಯವನ್ನು, ಗುಣ ಸ್ವಭಾವವನ್ನು ತಿಳಿಸುವಂತ ಹಶಿಲಾಶಾಸನಗಳು, ಸಾಹಿತ್ಯ ಆಧಾರಗಳು ನಮ್ಮ ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತವೆ. ಪಂಪನು ತನ್ನ ಕಾವ್ಯದಲ್ಲಿ ಹೇಳುವಂತೆ, ಕನ್ನಡನಾಡಿನಲ್ಲಿ ಕನ್ನಡ ನಾಡಿನ ಒಂದು ಭಾಗವಾದ ಬನವಾಸಿ ದೇಶದಲ್ಲಿ ಸಂಸ್ಕೃತಿ ಸಂಪನ್ನನಾಗಿ, ಗುಣವಂತ ಮನುಷ್ಯನಾಗಿ ನನಗೆ ಹುಟ್ಟಲಿಕ್ಕೆ ಅವಕಾಶ ದೊರೆಯದೇ ಹೋದರೂ ಸಹ ಅಲ್ಲಿ ನಾನು ಮುರಿದುಂಬಿಯಾಗಿ ಯಾದರು ಕೋಗಿಲೆಯಾಗಿಯಾದರೂ ಹುಟ್ಟಲಿಕ್ಕೆ ಬಯಸುತ್ತೇನೆ ಎನ್ನುವ ಪಂಪನ ಮಾತು ನಮ್ಮ ನಾಡಿನ ಬಗೆಗಿನ ಅಭಿಮಾನವನ್ನು ತೋರಿಸುತ್ತದೆ. ಇದು ನಮ್ಮ ಭಾಷೆ ನಾಡಿನ ಹೆಮ್ಮೆ ಸುಲಿದಬಾಳೆಯ ಹಣ್ಣಿನಂದದಿ, ಚಿಗು ರೊಡೆದ ಕಬ್ಬಿನಂದದಿ, ಉಷ್ಣವಡೆದ ಹಾಲಿ ವಾದ ಭಾಷೆ ಕನ್ನಡ ಇರುವಾಗ ಸಂಸ್ಕೃತದ ಹಂಗೇಕೆ ? ಎನ್ನುವ ಪ್ರಶ್ನೆಮಹಾ ಲಿಂಗರಂಗ ರದ್ದು. ಕನ್ನಡ ನಾಡು-ನುಡಿಯಲ್ಲೇ ಎಲ್ಲವೂ ಇರುವಾಗ ಪರಭಾಷೆಯ ಹಂಗೇಕೆ ಎನ್ನುವ ಪ್ರಶ್ನೆ ಕನ್ನಡ ನುಡಿಯ ಬಗೆಗಿನ ಅಭಿಮಾನ ಇಲ್ಲಿ ಕಾಣುವುದಕ್ಕೆ ಸಾಧ್ಯ. “ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷ ವಾಗುತ್ತದೆ. ಕನ್ನಡಕ್ಕಾಗಿಧ್ವನಿಯೆತ್ತು ನಿನ್ನ ಧ್ವನಿ ಪಾಂಚಜನ್ಯವಾಗುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿ ದರೂ ಗೋವರ್ಧನ ಗಿರಿಯಾಗುತ್ತದೆ” ಎಂದು ಕುವೆಂಪುರವರು ಹೇಳಿರುವುದನ್ನು ಸ್ಮರಿಸುತ್ತಾ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕಲಿಯಬಹುದು ಅಥವಾ ಬಿಡಬಹುದು ಎನ್ನುವಂತಹ ಸ್ಥಿತಿ ನಮ್ಮನಾಡಿ ನಲ್ಲಿ ಇರುವಂತಹದ್ದು, ಕನ್ನಡಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ಎಚ್ಚರಿಕೆಯನ್ನೂ ನೀಡುತ್ತಿದೆ. ಕನ್ನಡ ಭಾಷೆ ಧರ್ಮ ಸಹಿಷ್ಣುತೆ ಹೊಂದಿದ ಭಾಷೆ, ಇಲ್ಲಿ ಎಲ್ಲಾ ಧರ್ಮಗಳಿಗೂ ಕಲೆ, ವಾಸ್ತುಶಿಲ್ಪ, ಸಾಹಿತ್ಯ-ಸಂಗೀತಕ್ಕೂ ಸಮಾನ ಅವಕಾಶವನ್ನು ನೀಡಲಾಗಿತ್ತು. ಹಾಗೆಯೇ ಸ್ತ್ರೀಯರಿಗೂ ದೊರೆತ ಸಮಾನತೆಯು ನಮ್ಮ ಕನ್ನಡ ಸಂಸ್ಕೃತಿಯ ಹೆಮ್ಮೆ ಎನ್ನುವುದು ಅಭಿನಂದನೀಯ ದಕ್ಷಿಣ ಭಾರತದ ಸಂಗೀತ ಪರಂಪರೆ ಮತ್ತು ಕರ್ನಾಟಕದ ಸಂಗೀತ ಪರಂಪರೆ ಹುಟ್ಟಿ ಬೆಳೆದದ್ದು ನಮ್ಮ ಕನ್ನಡನಾಡಿನಲ್ಲಿ ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟರ ಕಲೆ, ವಾಸ್ತುಶಿಲ್ಪ, ಗಂಗರ ಕಾಲದ ಏಕಶಿಲಾ ವಾಸ್ತುಶಿಲ್ಪ, ಬೇಲೂರು ಹಳೇಬೀಡು ದೇವಾ ಲಯಗಳ ಕುಸುರಿ ಕೆತ್ತನೆಗಳು, ಸೋಮ ನಾಥ ದೇವಾ ಲಯದ ಸೂಕ್ತ ಕುಸುರಿ ಕೆತ್ತನೆಗಳಿಂದ ವಿಶ್ವಶ್ರೇಷ್ಠ ಕಲಾ ಸಂಸ್ಕೃತಿಯ ಸ್ಥಾನದಲ್ಲಿ ನಿಲ್ಲಿಸುತ್ತವೆ. ಇದಕ್ಕಾಗಿ ಕನ್ನಡ ನಮ್ಮ ಹೆಮ್ಮೆ ಎಂದರು. ಕರ್ನಾಟಕವನ್ನು ಎತ್ತರದಲ್ಲಿ ಕರ್ನಾಟಕ ಶೂರರ, ಉದಾರಿಗಳ ನಾಡಾಗಿತ್ತು ಇಂತಹ ಸಮೃದ್ಧ –ಶ್ರೀಮಂತ ವಾರಸುದಾರರು ಆಗಿರುವ ನಾವು ಕನ್ನಡದ ಅಭಿಮಾನ ವನ್ನು ಮಾತುಗಳ ಮೂಲಕ, ಉಪನ್ಯಾಸದ ಮೂಲಕ ಹೇಳುವುದರಿಂದ ಅಷ್ಟೇ, ಅಲ್ಲ ಅದನ್ನು ನಿಜವಾಗಿಯೂ ನಮ್ಮ ಕೊಳ್ಳುವುದರ ಮೂಲಕ ನಮ್ಮ ನಾಜು ಗೌರವವನ್ನು ಅರ್ಪಿಸುವ ಅಗತ್ಯ ಗಣೇಶ್ ತಿಳಿಸಿದರು.
ವರದಿ-ಸಂಪಾದಕೀಯ