ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾದವತಿಯಿಂದ ಸಮಸ್ತ ನಾಡಿನ ಜನತೆಗೆ ಕನಕದಾಸ ಜಯಂತಿಯ ಶುಭಾಶಯಗಳು.
ಕನಕದಾಸರ ಬಗ್ಗೆ ಯಾರಿಗೇ ತಾನೇ ತಿಳಿದಿಲ್ಲ. ಅವರ ಭಕ್ತಿ ಜೊತೆಗೆ ಕೀರ್ತನೆಗಳು ಇಂದಿಗೂ ಅಜರಾಮರವಾಗಿದೆ. ಸುಮಾರು 15-16ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಕೂಡ ಒಬ್ಬರಾಗಿದ್ದಾರು. ಸಾಮಾನ್ಯವಾಗಿ ಪ್ರತೀ ವರ್ಷ ಕಾರ್ತಿಕ ಮಾಸದ 18ನೇ ದಿನದಂದು ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನ. 18 ರಂದು ಸೋಮವಾರ ಈ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಕರ್ನಾಟಕ ಸರ್ಕಾರ 2008 ರಿಂದ ಕನಕದಾಸ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ.
- ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋನೀ ದೇಹದೊಳಗೋ ನಿನ್ನೊಳು ದೇಹವೋ ಕಾಗಿನೆಲೆಯಾದಿಕೇಶವ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ
- ಕುಲ, ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾನಿಮ್ಮ ಕುಲದ ನೆಲೆಯನ್ನು ಬಲ್ಲಿರಾ? ಆತ್ಮ, ಜೀವ, ಗಾಳಿ, ನೀರು, ಅನ್ನ ಯಾವ ಕುಲ?
- ಮೋಕ್ಷ ಸಿಗಬೇಕೆಂದರೆ ನಾನು ಎಂಬಾಸೆ ಬಿಟ್ಟು ದಾಸನಾಗಬೇಕು, ಸದಾಶಿವನ ದಾಸನಾಗಬೇಕು,ಅಜ್ಞಾನಿಗಳೊಡನೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳೊಡನೆ ಜಗಳವಾಡುವುದೇ ಲೇಸು
- ಅಡಿ ಸತ್ತ ಮಡಿಕೆಯನು ಜೋಡಿಸಿ ಒಲೆಗುಂಡು ಹೂಡಬಾರದು, ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು
- ಪರಸತಿಯ ನೋಡದಿರು, ದುರ್ಜನರ ಕೂಡದಿರುಗರ್ವದ ಮಾತುಗಳನ್ನು ಆಡದಿರು ಕೈಯಹಿಂದೆಗೆವ ಹೇಡಿಯನ್ನು ಬೇಡದಿರು ಬೀದಿಗೂಳುಂಬ ದೈವಗಳನ್ನು ಕೊಂಡಾಡದಿರು
- ಬಟ್ಟೆ ನೀರೊಳಗೆ ಅದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲಹೊಟ್ಟೆಯೊಳಗಿನ ಕಾಮ, ಕ್ರೋಧಾದಿಗಳನು ಬಿಟ್ಟು ನಡೆದರೆ ಅದು ಮಡಿ
ತನುವ ನೇಗಿಲ ಮಾಡಿ ಹೃದಯ ಹೊಲವನು ಮಾಡಿ ತನ್ವಿರಾ ಎಂಬ ಎರಡೆತ್ತ ಹೂಡಿ ಜ್ಞಾನವೆಂಬೋ ಮಿಣೆಯ ಕಟ್ಟು ಹಗ್ಗವ ಮಾಡಿ ಧ್ಯಾನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ, ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾದವತಿಯಿಂದ ಸಮಸ್ತ ನಾಡಿನ ಜನತೆಗೆ ಕನಕದಾಸ ಜಯಂತಿಯ ಶುಭಾಶಯಗಳು.