“ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಶಾಲಾ ವಾರ್ಷಿಕೋತ್ಸವ ಕ್ರೀಡಾಕೂಟಗಳು ಸಹಕಾರಿ” –ಡಿವೈಎಸ್ಪಿ ‘ಬಿ ಎಸ್ ಬಸವರಾಜ‘.
ದಾವಣಗೆರೆ:ನ20: ದಾವಣಗೆರೆ ನಗರದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್ ಅನುಭವಮಂಟಪದಲ್ಲಿ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಶಾಲಾ ವಾರ್ಷಿಕೋತ್ಸವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ನಿಟ್ಟುವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಡಿವೈಎಸ್ಪಿ ಬಿ ಎಸ್ ಬಸವರಾಜ್ ಅವರು “ನಾವೆಲ್ಲರಿಂದ ಸ್ಪರ್ಧಾ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಶಾಲಾ ಹಂತದಿಂದಲೇ ಮಕ್ಕಳಲ್ಲಿ ನಾಯಕತ್ವ ಗುಣ, ಸಹಬಾಳ್ವೆ, ಕ್ರೀಡಾಸ್ಪೂರ್ತಿ, ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ, ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಶಾಲಾ ವಾರ್ಷಿಕೋತ್ಸವ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಕ್ರೀಡೆಗಳಲ್ಲಿ ತೊಡಗಿದಾಗ ನಮ್ಮ ದೇಹ ಮತ್ತು ಮನಸ್ಸು ಸದೃಢವಾಗುತ್ತದೆ. ಕ್ರೀಡೆಗಳಲ್ಲಿ ತೊಡಗಿ ನಾವು ಯಶಸ್ವಿಯಾದರೆ ಮುಂದೆ ಕ್ರೀಡಾ ಕೋಟಾದಡಿಯಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಸಹ ಅನುಕೂಲವಾಗುತ್ತದೆ. ಇತ್ತೀಚೆಗೆ ಮಕ್ಕಳು ಮೊಬೈಲು ಗೀಳಿಗೆ ಬಲಿಯಾಗಿ ಓದಿನ ಕಡೆಗೆ ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಟ್ಟ ಮೇಲೆ ಅವರ ಚಲನವಲನಗಳ ಬಗ್ಗೆ ಗಮನ ವಹಿಸಿದಾಗ ಮಾತ್ರ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಲು ಸಾಧ್ಯವೆಂದು ಮಾತನಾಡಿದರು. ನಮ್ಮ ಅನುಭವಮಂಟಪದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಶಾಲಾ ವಾರ್ಷಿಕೋತ್ಸವ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ವರ್ತಿಸಬೇಕೆಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅನುಭವಮಂಟಪ ಶಾಲಾ ಸಂಕೀರ್ಣದ ಆಡಳಿತಾಧಿಕಾರಿಗಳಾದ ಶರಣ ಡಾಕ್ಟರ್ ಮಲ್ಲಿಕಾರ್ಜುನಪ್ಪ ಹೆಚ್ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ನಿರ್ದೇಶಕರಾದ ಸೋಮಶೇಖರಪ್ಪ ಕೆ, ಪ್ರಾಚಾರ್ಯರಾದ ಉಮೇಶ್ ಜಿ ಪಿ ಅವರು ಗೌರವಾನ್ವಿತ ಉಪಸ್ಥಿತರಿದ್ದರು.
ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸುಂದರ ಸಮಾರಂಭದಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ಪೂರ್ವಿ ಟಿ, ರೇವತಿ ಎನ್ ಮಳಗಿ, ಸ್ವಾಗತವನ್ನು ಸಾನಿಕ ಚಿಕರಡ್ಡಿ, ಅತಿಥಿಗಳ ಪರಿಚಯವನ್ನು ಇಂಚರ ಎಸ್ ಸಿ, ಪ್ರತಿಜ್ಞಾ ವಿಧಿ ಬೋಧನೆಯನ್ನು ಚಂದ್ರಶೇಖರ್ ಎಸ್ ಬಿ, ಪಥ ಸಂಚಲನ ನಿರೂಪಣೆಯನ್ನು ಗಗನ ದೀಪಿಕಾ, ಭವಿನಿ ಕಲಿಗಲ್, ಋಷಾಂಕ್ ಕುಮಾರ್ ಎಂ ಎಸ್, ಹರ್ಷಲ್ ಪಿ ಎನ್, ಗೌರವ ಪ್ರಧಾನ್ ನಿರೂಪಣೆಯನ್ನು ಮಹಮದ್ ಶೆಹ್ಜಾದ್, ಕಾರ್ತಿಕ್, ವಂದನಾರ್ಪಣೆಯನ್ನು ಶ್ರೀರಕ್ಷಾ ಬಾಗೇವಾಡಿ, ದೇವಿಕಾ ಅವರು ನಡೆಸಿಕೊಟ್ಟರು. ಈ ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಶ್ರೀಕುಮಾರ್ ಹಿಂಡಸಗಟ್ಟಿ, ರವಿಕುಮಾರ್ ಹೆಚ್ ಎಸ್, ಕೆ ನಾಗರಾಜ್ ನಾಯ್ಕ್, ಮಂಜುಳಾ ಕೆ ಬಿ, ಗೌರಂಬಿಕಾ ಎಂ, ಭುವನೇಶ್ವರಿ ಜೆ ಎಸ್, ಫಿಲೊಮೀನ ಪಿ ಸಿ, ವಿದ್ಯಾರ್ಥಿ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿಗಳಾದ ಶಿವಮೂರ್ತಿ ಹೆಚ್, ವತ್ಸಲಾ ಕೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವೀಣಾ ಜಿ ಪಿ, ಶ್ರೇಯಾ ಜಿಂಗಾಡೆ, ಕನ್ನಡ ಶಿಕ್ಷಕರಾದ ಪ್ರಸನ್ನ ಎಂ ಎಂ, ಸಂದೀಪ ಎಲ್ ಎಸ್, ಶಿವಮೂರ್ತಿ ಹೆಚ್, ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರಾದ ನವೀನಕುಮಾರ್ ಜಿ ಎಸ್, ಬಸವರಾಜ್ ಕೆ, ಸಿದ್ದೇಶ್ ಕೆ ಬಿ, ಶ್ಯಾಂ ನಾಯಕ್, ಅನಿತಾ ಜೆ, ಗುರುಬಸಮ್ಮ, ಮಾಧುರಿ, ಸುಜಾತ ಎನ್ ಬಿ, ಬೋಧಕೇತರ ಸಿಬ್ಬಂದಿಗಳಾದ ಪ್ರವೀಣ್ ಬಿ ಕೆ, ನವೀನ್ ಬಿ ಎ ಹಾಗೂ ಅನುಭವ ಶಾಲಾ ಸಂಕೀರ್ಣದ ಎಲ್ಲಾ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.