ಚಿಕ್ಕೋಡಿ. ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಬಂದ ಮಾಡಿದ್ದು, ಇದನ್ನು ಪುನರಾರಂಭ ಮಾಡಬೇಕೆಂದು, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ.

Spread the love

ಚಿಕ್ಕೋಡಿ. ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಬಂದ ಮಾಡಿದ್ದು, ಇದನ್ನು ಪುನರಾರಂಭ ಮಾಡಬೇಕೆಂದು, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ.

ಚಿಕ್ಕೋಡಿ ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಈಗಾಗಲೇ ಹಲವಾರು ಸಹಜ ಹೆರಿಗೆಗಳು ಹಾಗೂ ಸಿಜೇರುಯನ್ ಗಳು ಆಗಿವೆ, ಆದರೆ ಬೆಳಗಾವಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸೂಚನೆಯ ಮೇರೆಗೆ ಸಿಜೇರಿಯನ್ ಬಂದ ಮಾಡಿದ ಬಗ್ಗೆ ತಿಳಿದು ಬಂದ ಕಾರಣ, ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ಅಶ್ಪಾಕ್ ಸಯ್ಯದ ಇವರ ನೇತೃತ್ವದಲ್ಲಿ, ತಾಯಿ ಮಕ್ಕಳ ಆಸ್ಪತ್ರೆಯ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಈ ಸಂಧರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಪ್ರಕಾಶ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿ ಇವರ ಪ್ರಯತ್ನದಿಂದ ಸುಮಾರು 28 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿ, ಕಟ್ಟಸಲಾದ ಈ ಆಸ್ಪತ್ರೆಯು ಬಡ ಜನರಿಗಾಗಿ ಸಮರ್ಪಕ ಕಾರ್ಯ ಮಾಡುತ್ತಿತ್ತು, ಆದರೆ ತಮ್ಮ ಖಾಸಗಿ ಆಸ್ಪತ್ರೆಯ ವ್ಯವಹಾರ ಕುಂಟಿತವಾಗಬಾರದು ಎಂಬ ವಿಚಾರದಿಂದ, ಮೇಲಾಧಿಕಾರಿಗಳು ಈ ನೂತನ ಆಸ್ಪತ್ರೆಯಲ್ಲಿ ಸಿಜೇರಿಯನ್ ಮಾಡುವುದನ್ನು ಸ್ಥಗಿತಗೊಳಿಸಿದ್ದು ಕಂಡು ಬಂದಿದೆ, ಇದನ್ನು ನಾವು ತೀವ್ರವಾಗಿ ಖಂಡಸುತ್ತೇವೆ, ಕೂಡಲೇ ಇಲ್ಲಿ ಪುಣ: ಸಿಜೇರಿಯನ್ ಮಾಡುವುದನ್ನು ಆರಂಭಿಸಬೇಕು ಮತ್ತು ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳ ಹಿತದೃಷ್ಟಿಯಿಂದ, ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಹೇಳಿದರು, ಸಂಜು ಬಡಿಗೇರ ಮಾತನಾಡಿ, ಸರಕಾರದವರು ಬಡ ಜನರಿಗೆ ಸಹಾಯವಾಗಲಿ ಎಂದು ಇಷ್ಟೊಂದು ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿ, ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ, ಆದರೆ ಕೆಲವು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂತ್ರ ಕುತಂತ್ರದಿಂದ ಆಸ್ಪತ್ರೆಯನ್ನು ಬಂದ ಮಾಡುವ ಶಡಯಂತ್ರ ನಡೆದಿದೆ, ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ, ಕೂಡಲೇ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕ ಮಾಡಿ ಸಿಜೇರಿಯನ್ ಆರಂಭ ಮಾಡಬೇಕು, ಬಡ ಜನರಿಗೆ ಅನುಕೂಲವಾಗಬೇಕು, ಇದಕ್ಕೆ ತಪ್ಪಿ ದಲ್ಲಿ ರಸ್ತೆಗಿಳಿದು ಜಿಲ್ಲಾ ಆರೋಗ್ಯಾಧಿಕಾರಿಯ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು, ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ, ಆರೋಗ್ಯ ಇಲಾಖೆಯ ದುಷ್ಟ-ಭ್ರಷ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ಸಂಧರ್ಭದಲ್ಲಿ ಬಸವರಾಜ ಸಾಜನೆ, ಅಮೂಲ ನಾವಿ, ರಫೀಕ್ ಪಠಾಣ, ಖಾನಪ್ಪಾ ಬಾಡಕರ, ಸಚೀನ ದೊಡ್ಡಮನಿ, ಮಾಳು ಕರೆಣ್ಣವರ, ಸಂಜು ಕರೆಣ್ಣವರ, ಸಿದ್ರಾಮ್ ಕರಗಾಂವೆ, ಅಪ್ಪಾಸಾಹೇಬ ಹಿರೇಕೋಡಿ, ರಾಹುಲ್  ವಾಳಕೆ, ವಿಜಯ  ಬ್ಯಾಳೆ, ಪ್ರಮೋದ್ ಪಾಟೀಲ್, ಸಚಿನ್ ಬುರುಡ, ಗಜಾನನ ಖಾಪೆ, ಪ್ರವೀನ ಝಳಕೆ, ರಾಖೇಶ ಹುಕ್ಕೇರಿ ಹಾಗೂ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *