* ಡಾ .ಎಸ್ .ಕೆ. ಮಂಜುನಾಥರಿಗೆ ‘‘ಸಂಗಮ ಸಿರಿ’’ ರಾಜ್ಯಪ್ರಶಸ್ತಿ*

Spread the love

* ಡಾ .ಎಸ್ .ಕೆ. ಮಂಜುನಾಥರಿಗೆ ‘‘ಸಂಗಮ ಸಿರಿ’’ ರಾಜ್ಯಪ್ರಶಸ್ತಿ*

ಹುಬ್ಬಳ್ಳಿ : ನಾಡಿನ ಹಿರಿಯ ಸಾಹಿತಿ ಡಾ ಸಂಗಮೇಶ ಹಂಡಿಗಿ ಅವರ ನೆನಪಿನಲ್ಲಿರುವ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ ‘‘ಸಂಗಮ ಸಿರಿ’’ ರಾಜ್ಯ ಪ್ರಶಸ್ತಿಯು ಈ ಬಾರಿ ಕಾವ್ಯ ಕ್ಷೇತ್ರದಲ್ಲಿನ ಸಾಧಕರಿಗೆ ನೀಡಲಾಗುತ್ತಿದ್ದು, ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಶಿವರ ಗ್ರಾಮದ ಡಾ .ಎಸ್ .ಕೆ. ಮಂಜುನಾಥ ಅವರಿಗೆ ಸಂದಿದೆ.

‘ಗಾಳಿಯ ಎದೆ ಸೀಳಿ ಹೊರಟ ಹಕ್ಕಿ‘ ಎಂಬ ಕೃತಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ೧೦ ಸಾವಿರ ರೂ.ನಗದು ಹಾಗೂ ಫಲಕವನ್ನು ಒಳಗೊಂಡಿದ್ದು ಡಿ.೮ ರಂದು ಹುಬ್ಬಳ್ಳಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಜಿ.ಬಿ.ಗೌಡಪ್ಪಗೊಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ತಿಳಿಸಿದ್ದಾರೆ. ಕವಿ ಮಹಾಂತಪ್ಪ ನಂದೂರ ಅವರ ನೇತೃತ್ವದ ಸಾಹಿತ್ಯ ಸಮಿತಿ ಈ ಆಯ್ಕೆಯನ್ನು ಮಾಡಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ.ಪ್ರಭು ಗಂಜಿಹಾಳ ತಿಳಿಸಿದ್ದಾರೆ. ಈ ಹಿಂದೆ ಸಂಗಮಸಿರಿ ಪ್ರಶಸ್ತಿಯು ವಚನ ಸಾಹಿತ್ಯ ಕ್ಷೇತ್ರದಲ್ಲಿ ಡಾ.ವೀರಣ್ಣ ದಂಡೆ ದಂಪತಿ ಹಾಗೂ ಸಿದ್ದನಗೌಡ ಬಿಜ್ಜೂರ ಅವರಿಗೆ ನೀಡಲಾಗಿತ್ತು . *-ಡಾ.ಪ್ರಭು ಗಂಜಿಹಾಳ.

Leave a Reply

Your email address will not be published. Required fields are marked *