ಸರ್ಕಾರಿ ಕೆಲಸಕ್ಕೆ ತ್ಯಾಗ ಮಾಡಿ, ಜನ ಸೇವೆ ಮಾಡಲು ಮುಂದಾದ ತ್ಯಾಗ ಯೋಗಿ ಕೃಷಿ ಅಧಿಕಾರಿ ಶರಣಪ್ಪ ಗುಂಗಾಡಿ.
(ಪ್ರಮಾಣಿಕತೆಗ ಮತ್ತೊಂದು ಹೆಸರೆ ಶ್ರೀ ಶರಣಪ್ಪ ಗುಂಗಾಡಿಯವರು)
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿಯಾಧ ಶ್ರೀ ಶರಣಪ್ಪ ಗುಂಗಾಡಿಯವರು ಸರ್ಕಾರಿ ಹುದ್ದೆಗೆ ದಿಡೀರನೆ ರಾಜೀನಾಮೆ ನೀಡಿದ್ದಾರೆ. ಯಲಬುರ್ಗಾ ತಾಲೂಕಿನ ರೈತರ ಹಾಗೂ ಸಮಾಜಮೂಖಿ ಸೇವೆಯಲ್ಲಿ ನಿರತರಾದ ಇವರು. ಯಲಬುರ್ಗಾ ತಾಲೂಕಿನ ಜನರ ಪ್ರೀತಿಗೆ ಪಾತ್ರರಾದವರು, ಸರ್ಕಾರಿ ಕೆಲಸ ದೇವರ ಕೆಲಸವೆಂದು ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿದವರು, ರೈತರ ಹಾಗೂ ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಎನ್ನದೆ ಶ್ರಮಿಸಿದವರು, ಇಂದು ಸಾರ್ವಜನಿಕರ ಸೇವೆಗೆಂದೆ ತಮ್ಮ ಸರ್ಕಾರಿ ಹುದ್ದೆಯನ್ನು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದವರು. ಕೊರೊನಾದ ಮೋದಲನೆ ಅಲೇಯಲ್ಲಿ ಸಾರ್ವಜನಿಕರ, ಕಡು ಬಡವರಿಗಾಗಿ, ನಿರ್ಗತಿಕರಿಗಾಗಿ ತಮಗೆ ಬರುವ ಒಂದು ವರ್ಷದ ಆಧಾಯವನ್ನು ಅಂದರೆ ಸುಮಾರು 5 ಲಕ್ಷ ರೂ/ ಹಣವನ್ನು ಸರಕಾರದ ಖಜಾನೆಗೆ ನೀಡಿದವರು. ಸರ್ಕಾರಿ ಹುದ್ದೆಯಲ್ಲಿ ಇದ್ದರೆ ಸಮಾಜೀಕ ಸೇವೆಯಲ್ಲಿ ಇರಲು ಕಷ್ಟಕರದ ಸಂಗತಿಯಾಗಿರುವುದರಿಂದ ತಮ್ಮ ಸ್ವ ಇಚ್ಛೆಯಿಂದ ಸರ್ಕಾರಿ ಹುದ್ದಗೆ ರಾಜೀನಾಮೆ ನೀಡಿದರು, ಧಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯನ್ನು ಇಂದು ಯಲಬುರ್ಗಾ ತಾಲೂಕಿನ ಜನರು ಕಳೆದುಕೊಂಡಂತಾಯಿತು, ಪ್ರಜ್ಞವಂತರ ಮನದಲ್ಲಿ, ಬುದ್ದಿಜೀವಿಗಳ ಹೃದಯದಲ್ಲಿ ಇಂದು ಶರಣಪ್ಪ ಗುಂಗಾಡಿಯವರ ವಿಷಯದ ಬಗ್ಗೆ ಚರ್ಚೆ ನಡಿಯುತ್ತಿದೆ. ಒಟ್ಟಿನಲ್ಲಿ ಈ ಕೊರೊನಾದ ಎರಡನೆ ಅಲೆಯಲ್ಲಿ ನಿರ್ಗತಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು. ಸದ್ಯದ ದಿನಮಾನಗಳಲ್ಲಿ ಕೋಟಿಗಟ್ಟಲೆ ಮನೆಯಲ್ಲಿ ಹಣ ಇಟ್ಟುಕೊಂಡವರು ಇಂತಹ ಸಮಾಜಮೂಖಿ ಸೇವೆಗೆ ಬರಲಿಲ್ಲ. ಇದ್ದಿದ್ದರಲ್ಲೆ ತಾವು ತಮ್ಮ ಕುಟುಂಬ ಜೀವಿಸಿ, ಉಳಿದ ಹಣವನ್ನು ಸಮಾಜದೆ ಸೇವೆಗಾಗಿ ಮುಡುಪಾಗಿಟ್ಟವರು. ಸದ್ಯ ಸೋನು ಸೂದ್ ಕಳ ನಟ ಹಾಗೂ ಉತ್ತಮ ಗಾಯಕರಾದವರು ಪ್ರತಿ ಕ್ಷಣ ಕ್ಷಣಕ್ಕೂ ಸಮಾಜ ಸೇವೆಗಾಗಿ ಶ್ರಮಿಸುತ್ತಿರುವ ಈ ನಟನೀಗೂ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು, ಸೋನು ಸೋದ್ ರವರ ಮಾರ್ಗದಲ್ಲಿ ನಡೆಯುತ್ತಿರುವ ಶ್ರೀ ಶರಣಪ್ಪ ಗುಂಗಾಡಿಯವರಿಗೆ ಆ ಭಗವಂತ ಇನ್ನೂ ಹೆಚ್ಚಿನ ಶಕ್ತಿ ನೀಡಲಿ, ಬಡವರ ಸೇವೆಗಾಗಿ ಶ್ರಮಿಸಲಿ, ಮುಂದಿನ ರಾಜಕೀಯ ಜೀವನದ ಹೆಜ್ಜೆ ಹೆಜ್ಜೆಯು ಯಶಸ್ವಿ ಸಿಗಲೆಂದು ಆರೈಸುವೇವು. ಒಟ್ಟಿನಲ್ಲಿ ಈ ತಾಲೂಕಿಗೆ ಮಾದರಿಯಾದ ಶ್ರೀ ಶರಣಪ್ಪ ಗುಂಗಾಡಿಯವರು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದು ರೈತ ಸಮೂಧಾಯಕ್ಕೆ ನುಂಗಲಾರದ ತುತ್ತಾಗಿರುವುದಂತ್ತು ಸತ್ಯ. ಇಂತಹ ಪ್ರಮಾಣಿ, ಧಕ್ಷ, ನಿಷ್ಠೆಯುಳ್ಳ ಅಧಿಕಾರಿಗಳು ನಮಗೆ ಮುದೆಂದು ಸಿಗುವುದಿಲ್ಲ ಎನ್ನುವ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ.
ವರದಿ – ಸಂಪಾದಕೀಯ.