ಪಶ್ಚಿಮ ಬಂಗಾಳ: ಐತಿಹಾಸಿಕ ರೈತ ಚಳುವಳಿಯ ಪ್ರದೇಶವಾದ ಭಾಂಗರದಲ್ಲಿ ಇಂದು (ಡಿಸೆಂಬರ್ -19,20-2024) ಅಖಿಲ ಭಾರತ ರೈತ ಸಂಘಟನೆಯ ಐಕ್ಯತಾ ಸಭೆ ಪ್ರಾರಂಭವಾಗಿದೆ.
ಬೆಳಿಗ್ಗೆ 11 ಗಂಟೆಗೆ, ಚಳುವಳಿಯಲ್ಲಿ (ಸರ್ಕಾರ ಮತ್ತು ಕಂಪನಿ ಗೂಂಡಗಳ ದಾಳಿಯಿಂದ) ಮರಣ ಹೊಂದಿದ ಮೂರು ಜನ ಸಂಗಾತಿಗಳ ಸ್ಥೂಪಕ್ಕೆ ಪುಷ್ಪರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಪವರ್ ಗ್ರಿಡ್ ಸ್ಥಾಪನೆ ಇತರೆ ಅಭಿವೃದ್ಧಿ ಹೆಸರಿನಲ್ಲಿ ಭಾಂಗರ್ ಹೊಬಳಿಯ 8 ಹಳ್ಳಿಗಳ ಸಾವಿರಾರು ಎಕರೆ ಭೂಮಿಯನ್ನು ಬಹು ರಾಷ್ಟ್ರೀಯ ಕಂಪನಿಗಳು ಸ್ವಾಧೀನಪಡೆಸಿಕೊಳ್ಳಲು (ಮಮತಾ ಬ್ಯಾನರ್ಜಿ ಸರ್ಕಾರದ ಬೆಂಬಲದೊಂದಿಗೆ) ಮುಂದಾಗಿದ್ದವು. 2017 ರಿಂದ ಸತತ ಎರಡು ವರ್ಷಗಳವರಿಗೆ ನಿರಂತರ ಚಳುವಳಿ ನಡೆದಿತ್ತು. CPIML ಮಾಸ್ ಲೈನ್ ಪ್ರಧಾನ ಕಾರ್ಯದರ್ಶಿ ಕಾಂ.ಪ್ರದೀಪ ಸಿಂಗ್ ಠಾಕೂರ್ ಇತರ ಪ್ರಮುಖ ಸಂಗಾತಿಗಳು 6 ತಿಂಗಳು ಜೈಲಿನಲ್ಲಿದ್ದರು. ತ್ಯಾಗ ಬಲಿದಾನ ಮತ್ತು ರೈತರ ತೀವ್ರ ಸ್ವರೂಪದ ಚಳುವಳಿಗೆ ಮಣಿದ ಕೇಂದ್ರ-ರಾಜ್ಯ ಸರ್ಕಾರ ಉದ್ದೇಶ ಯೋಜನೆಯನ್ನು ಕೈ ಬಿಟ್ಟಿತು. ಸಂಪೂರ್ಣ ನೀರಾವರಿ ಸೌಲಭ್ಯದಿಂದ ಕೂಡಿದ ಈ ಜಮೀನಿನಲ್ಲಿ ರೈತರು ಎರಡು ಬೆಳೆ ಭತ್ತ ಬೆಳೆಯುತ್ತಿದ್ದಾರೆ. ಈ ಹೋರಾಟದ ಫಲದಿಂದ ಎರಡು ಗ್ರಾಮ ಪಂಚಾಯಿತಿಗಳಲ್ಲಿ CPIML ಮಾಸ್ ಲೈನ್ ಬೆಂಬಲಿತ ಚುನಾಯಿತ ಮಂಡಳಿಯ ಆಡಳಿತ ನಡೆದಿದೆ. ಚಳುವಳಿಯಲ್ಲಿ ಮಿಂದೆದ್ದ ರೈತರೊಂದಿಗೆ ಉಳಿದುಕೊಂಡಿರುವುದು ಅತ್ಯಂತ ಖಷಿಯಾಗಿದೆ. ಈ ಹೋರಾಟ ಕರ್ನಾಟಕದ ರೈತರಿಗೆ ಸ್ಪೂರ್ತಿಯಾಗಲಿ