ಅಮಿತ್ ಶಾ ರವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಇಲ್ಲ ಉಗ್ರವಾದ ಹೋರಾಟ ಮಾಡ್ತೀವಿ ರಾಯಣ್ಣ ಅಭಿಮಾನಿ ಗಣೇಶ್ ಕೆ ದಾವಣಗೆರೆ.

Spread the love

ಅಮಿತ್ ಶಾ ರವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಇಲ್ಲ ಉಗ್ರವಾದ ಹೋರಾಟ ಮಾಡ್ತೀವಿ ರಾಯಣ್ಣ ಅಭಿಮಾನಿ ಗಣೇಶ್ ಕೆ ದಾವಣಗೆರೆ.


17ನೇ ಡಿಸೆಂಬರ್ 2024 ರಂದು ಗೃಹ ಸಚಿವ ಅಮಿತ್ ಶಾ ಅವರು ಪಾರ್ಲಿಮೆಂಟಿನ ಸಭೆಯಲ್ಲಿ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು `ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್. ಅಂಬೇಡ್ಕರ್ ಎಂದು ಹೇಳುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಕಾಂಗ್ರೆಸ್ ಪಕ್ಷದ ನಾಯಕರು ಅಂಬೇಡ್ಕರ್ ಬದಲಿಗೆ ದೇವರ ಹೆಸರನ್ನು ತೆಗೆದುಕೊಂಡಿದ್ದರೆ ಅವರಿಗೆ ಏಳು ಜನ್ಮದಲ್ಲೂ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು ಎಂಬ ಹೇಳಿಕೆಯು ಬಹಳ ಖಂಡನೀಯವಾಗಿದ್ದು.
ಕೇಂದ್ರ ಸರ್ಕಾರದ ಗೃಹ ಸಚಿವರಿಂದ ಬಾಬಾಸಾಹೇಬ್ ಅಂಬೇಡ್ಕರ್ ವಿರುದ್ಧ ಇಂತಹ ಹೇಳಿಕೆ ನೀಡಿರುವುದು ಬಾಬಾಸಾಹೇಬ್ ಅಂಬೇಡ್ಕರರ ಬಗ್ಗೆ ಅತ್ಯುನ್ನತ ಗೌರವ ಹೊಂದಿರುವ ಬಹುಜನ ಸಮುದಾಯಕ್ಕೆ ಮಾಡಿದ ಅವಮಾನ ಮಾತ್ರವಲ್ಲ ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನವೂ ಹೌದು. ಸಂವಿಧಾನದ ಬಗ್ಗೆ ಮಾತನಾಡುವ ತಾವು ಅದೇ ಸಂವಿಧಾನದ ಅಡಿಯಲ್ಲಿಯೇ ತಾವು ಸಚಿವರ ಸ್ಥಾನದಲ್ಲಿರುವುದು ಎಂದು ಮರೆಯಬಾರದು ದೇಶದ ಅಸಹಾಯಕ ಜನರಿಗೆ ಆಶಾದಾಯಕರಾಗಿ ಇದ್ದಂತವರು ನಮ್ಮ ಬಾಬಾಸಾಹೇಬ್ ಅಂಬೇಡ್ಕರ್ ರವರು ಅವರ ಬಗ್ಗೆ ಅವಹೇಳನಕಾರಿ ಮಾತು ಆಡಿರುವ ಗೃಹ ಸಚಿವ ಅಮಿತ್ ಶಾ ರವರು ಹೇಳಿರುವ ಇಂತಹ ಮಾತು ಖಂಡನೀಯವಾಗಿದ್ದು ಇವರು ಗೌರವಾನ್ವಿತ ಗೃಹ ಮಂತ್ರಿಯ ಸ್ಥಾನದಲ್ಲಿ ಇರಲು ಯೋಗ್ಯರಲ್ಲದ ಕಾರಣ ಆ ಸ್ಥಾನದಿಂದ ತಕ್ಷಣ ವಜಾಗೊಳಿಸಿಬೇಕು. ಹಾಗೂ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಮಾನ್ಯ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಒತ್ತಾಯಿಸುತ್ತೇವೆ.
ಗಣೇಶ್ ಕೆ ದಾವಣಗೆರೆ ಕ್ರಾಂತಿ ವೀರ ಸಂಗೋಳಿ ರಾಯಣ್ಣ ಅಭಿಮಾನಿ ದಾವಣಗೆರೆ

Leave a Reply

Your email address will not be published. Required fields are marked *