ನಿಮಗಾಗಿ ನಾವು ಸಂಸ್ಥೆಯ ಹೊದಿಕೆ ಜೀವಕೆ ಯೋಜನೆ,,,,,

Spread the love

ದಿನಾಂಕ : 21.12.2024 &22.12.2024 ಹೊತ್ತು : ರಾತ್ರಿ 09.30 ರಿಂದ 12.30 ರವರೆಗೆ  ಜಾಗ : ಬಳ್ಳಾರಿ ನಗರದ  ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮುಖ್ಯ ರಸ್ತೆಗಳು ಮತ್ತು ವೃತ್ತಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಆವರಣಗಳು ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಬಳ್ಳಾರಿ ನಗರದಲ್ಲಿ ಸೂರಿಲ್ಲದ ಎಷ್ಟೋ ಮಂದಿ ಚಳಿಯ ರಾತ್ರಿಗಳನ್ನು ಬಹಳ ಕಷ್ಟಗಳಲ್ಲಿ ಕಳೆಯುತ್ತಿರುವುದನ್ನು ಗಮನಿಸಿ ಅಂತಹವರಿಗೆ ಹೊದ್ದುಕೊಳ್ಳಲು ಹೊದಿಕೆಯನ್ನು ನೀಡುವ ‘ಹೊದಿಕೆ ಜೀವಕೆ’ ಯೋಜನೆ ಸತತ ನಾಲ್ಕನೇ ವರ್ಷ ರೂಪಿಸಿಕೊಂಡು ರಾತ್ರಿ ಇಡೀ ನಗರದಲ್ಲಿ ಸಂಚರಿಸಿ ಅವಶ್ಯಕತೆ ಇರುವವರಿಗೆ ಹೊದಿಕೆ ನೀಡಿ ಆಸರೆಯಾದರು.  ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀ ವಿನಯ್ ರವರು ಮಾತಾಡಿ ಹೊದಿಕೆ ಜೀವಕೆ ಯೋಜನೆಯು ಡಿಸೆಂಬರ್ ತಿಂಗಳು ಪೂರ್ತಿ ನಡೆಯಲ್ಲಿದ್ದು ಹಂತಹಂತವಾಗಿ ವಿತರಣೆ ಮಾಡಲಿದ್ದು, ಮುಂದಿನ ವಾರದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ತಾಲೂಕುಗಳಲ್ಲಿ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು, ಕಾರ್ಯನಿರ್ವಾಹಕರಾದ ಗೋಡೆ ಶಿವಾರಾಜ್ ರವರು ಮಾತಾಡಿ ನಿಮ್ಮ ಸುತ್ತಮುತ್ತ ಹೊದಿಕೆಗಳ ಅವಶ್ಯಕತೆ ಇರೊರ ಮಾಹಿತಿ ನೀಡಿದರೆ ಅವರಿಗೆ ಹೊದಿಕೆಗಳನ್ನು ವಿತರಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಉಪಾಧ್ಯಕ್ಷರಾದ ಸುದರ್ಶನ್ ರವರು ಮಾತಾಡಿ ಈ ಯೋಜನೆಗೆ ನೆರವಾಗ ಬಯಸುವವರು ತಪ್ಪದೇ ಸಂಸ್ಥೆಯನ್ನು ಸಂಪರ್ಕಿಸಿ ಎಂದು ತಿಳಿಸಿದರು ಸಂಸ್ಥೆಯ ಕಾರ್ಯದರ್ಶಿಯಾದ ಮಾರುತಿ, ಮಹಿಳಾ ಕಾರ್ಯದರ್ಶಿ ಶ್ರೀಮತಿ ವನಿತಾ, ಶ್ರೀ ಅನಿಲ್, ಮೆಹಬೂಬ್ ಭಾಷ, ಸಂದೀಪ್,ಬಾಲಸುಬ್ರಹ್ಮಣ್ಯ, ರಾಜು, ಮೇಘನಾಥ್, ಪ್ರವೀಣ್,ಮಹಾಂತೇಶ್, ಶಿವರಾಜ್, ಕೀರ್ತನ್, ಅವಿನಾಶ್, ಹರೀಶ್,ಅನಿಲ್, ರುದ್ರೇಶ್ ಹರ್ಷವರ್ಧನ್ ಮತ್ತು ಇತರರು ಪಾಲ್ಗೊಂಡಿದ್ದರು. ಇಂತಿ, ಶ್ರೀ ವಿನಯ್ ಕುಮಾರ್ ಅಧ್ಯಕ್ಷರು, ನಿಮಗಾಗಿ ನಾವು ಸಂಸ್ಥೆ ಬಳ್ಳಾರಿ 9448584400. ವಿಶೇಷ ವರದಿಗಾರರು :- ಮಹೇಶ ಶರ್ಮ:

Leave a Reply

Your email address will not be published. Required fields are marked *