ಹಬ್ಬಗಳು ಸಂಭ್ರಮದಿಂದ ಆಚರಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ,

Spread the love

ಹಬ್ಬಗಳು ಸಂಭ್ರಮದಿಂದ ಆಚರಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ,

ಕೊಪ್ಪಳ : ಎಲ್ಲಾ ಹಬ್ಬಗಳು ಸಂಭ್ರಮದಿಂದ ಆಚರಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ ಎಂದು ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್ ಹೇಳಿದರು,

ಭಾಗ್ಯನಗರದ ನವನಗರದಲ್ಲಿ ಬುಧವಾರ ಇರುವಾತನು ಚರ್ಚ್, ಜಿಲ್ಲಾ ಭ್ರಾತೃತ್ವ ಸಮಿತಿ ಹಾಗೂ ವಿಮುಕ್ತಿ ವಿದ್ಯಾ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ಸೌಹಾರ್ದ ಕ್ರಿಸ್ ಮಸ್ ಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಂದುವರೆದು ಮಾತನಾಡಿ ಈ ಕ್ರಿಶ್ಚಿಯನ್ ಹಬ್ಬಗಳು, ಹಿಂದೂ ಹಬ್ಬಗಳು,ಮುಸ್ಲಿಮರ ಹಬ್ಬಗಳೂ ಸೌಹಾರ್ದದಿಂದ ಆಚರಿಸಬೇಕು, ಜಾತಿಗಳ ಮಧ್ಯೆ ಕಲಹ ಉಂಟಾದರೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ,ಒಂದು ಧರ್ಮದ ಹಬ್ಬಗಳಿಗೆ ಅನ್ಯ ಧರ್ಮದವರು ಗೌರವಿಸಬೇಕು, ಎಲ್ಲಾ ಜನಾಂಗದ ಹಬ್ಬಗಳು ಪರಸ್ಪರ ಕೂಡಿ ಆಚರಿಸುವ ಮೂಲಕ ಸೌಹಾರ್ದತೆ, ಸಾಮರಸ್ಯ,ಸಹಬಾಳ್ವೆ ಕಾಪಾಡಿಕೊಳ್ಳಬೇಕು, ಭಾಗ್ಯನಗರದ ನವನಗರದಲ್ಲಿಯ ಇರುವಾತನು ಚರ್ಚ್ ದಿಂದ ರಾಜ್ಯ,ರಾಷ್ಟ್ರಕ್ಕೆ ಸೌಹಾರ್ದತೆಯ ಸಂದೇಶ ಸಾರುವ ಕಾರ್ಯಕ್ರಮಗಳನ್ನು ಎಲ್ಲಾ ಜಾತಿಯವರಿಗೂ ಪ್ರತಿಯೊಬ್ಬರೂ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಭಾಗ್ಯನಗರ ಪಟ್ಟಣ ಪಂಚಾಯತಿಯ ಅಧ್ಯಕ್ಷ ತುಕಾರಾಮಪ್ಪ ಗಡಾದ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಭಾಗ್ಯನಗರ ಪಟ್ಟಣ ಪಂಚಾಯಿತ್ ಉಪಾಧ್ಯಕ್ಷ ಹೊನ್ನೂರ್ ಸಾಬ್ ಬೈರಾಪುರ ಮಾತನಾಡಿ ಜಗತ್ತಿನಲ್ಲಿ 750 ಕೋಟಿ ಹೆಚ್ಚು ಜನಸಂಖ್ಯೆ ಇದೆ, ಈ ಜನರಿಗಾಗಿ ಒಂದು ಬೈಬಲ್ ಇನ್ನೊಂದು ಖುರ್ ಆನ್ ಮತ್ತೊಂದು ಭಗವದ್ಗೀತೆ ಈ ಗ್ರಂಥಗಳು ಇನ್ನೊಂದು ಧರ್ಮಗಳಿಗೆ ಗೌರವಿಸುವುದನ್ನು ಕಲಿಸಿಕೊಡುತ್ತದೆ,ನಾವೆಲ್ಲ ಎಲ್ಲಾ ಧರ್ಮದವರ ಸಮಸ್ಯೆಗಳಿಗೆ ಪರಿಹರಿಸಿ ಒಂದಾಗಿ ಬಾಳಬೇಕು ಎಂದು ಹೇಳಿದರು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ ಯೇಸು ಸ್ವಾಮಿಯವರು ಪ್ರೀತಿ ಸ್ವರೂಪಿಯಾಗಿ ಭೂಮಿಗೆ ಮಾನವನಾಗಿ ಬಂದು, ಬೆಟ್ಟದ ಪ್ರಸಂಗಗಳಲ್ಲಿ ಮಾತನಾಡುತ್ತಾ ಸಮಾಧಾನ ಪಡಿಸುವವರು ಧನ್ಯರು, ಅವರು ದೇವರ ಮಕ್ಕಳು ಅನಿಸಿಕೊಳ್ಳುವರು, ದೀನರು ಧನ್ಯರು ಅವರು ದೇವರ ದಯೆಯನ್ನು ಮತ್ತು ಕರುಣೆಯನ್ನು ಹೊಂದುವರು, ದೇವರ ಕೃಪೆಗೆ ಪಾತ್ರರಾಗುವರು, ನಿನ್ನ ನೆರೆಯವರು ಹಸಿದಿರುವಾಗ ನೀನು ನಿನ್ನ ಕೈಯಿಂದ ಸಾಧ್ಯವಾದದನ್ನು ಅವರಿಗೆ ಕೊಡುವುದರ ಮೂಲಕ ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬುದಾಗಿ ಹೇಳಿ ಪ್ರೀತಿಯ ಶ್ರೇಷ್ಠತೆಯನ್ನು ಹೇಳಿದರು, ಪ್ರೀತಿ ಹೊಟ್ಟೆಕಿಚ್ಚು ಪಡೆಯುವುದಿಲ್ಲ, ಹೊಗಳಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ, ಪ್ರೀತಿಯು ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಿಸುವಂತದ್ದಾಗಿದೆ, ಈ ಪ್ರೀತಿಯೇ ಯೇಸು ಸ್ವಾಮಿ, ಆತನ ಅನುಯಾಯಿಗಳಾದ ನಾವು ಅವರ ಜನ್ಮದಿನವನ್ನು  ಕ್ರಿಸ್ ಮಸ್ ಹಬ್ಬವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು. ಖಾದಿ ಗ್ರಾಮೋದ್ಯೋಗ ಇಲಾಖೆಯ ಜಿಲ್ಲಾ ಅಧಿಕಾರಿ ಕೆ,ವೀರೇಶ್ ಮಾತನಾಡಿ ಕ್ರೈಸ್ತ ಸಮುದಾಯವು ಬಡವರ ಪರವಾಗಿ ಕೆಲಸವನ್ನು ಮಾಡುತ್ತಿದೆ,

ಉತ್ತಮವಾದ ಸಮಾಜವನ್ನು ರೂಪಿಸುವುದಕ್ಕಾಗಿ ಈ ಸಮುದಾಯವು ಪ್ರಮುಖ ಸ್ಥಾನದಲ್ಲಿ ಇದೆ,ಸಮಾಜ ಸೇವೆಯನ್ನು ಇನ್ನೂ ಮುಂದುವರೆಸಲಿ ಎಂದು ಹಾರೈಸಿದರು.

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ,ಪಾತ್ರೋಟಿ, ಪಟ್ಟಣ ಪಂಚಾಯಿತಿ ಸದಸ್ಯ ಗಸಿದ್ದಯ್ಯ ಕೆಂಭಾವಿ ಮಠ,ಮೌಲಾ ಹುಸೇನ್ ಹಣಗಿ ಮುಂತಾದವರು ಮಾತನಾಡಿದರು.ಗೀತಾ ಮದಕಟ್ಟಿ ಸ್ವಾಗತಿಸಿದರು,ರಾಘವೇಂದ್ರ ಮದಕಟ್ಟಿ ನಿರೂಪಿಸಿದರು, ವಿಮುಕ್ತಿ ವಿದ್ಯಾ ಸಂಸ್ಥೆ ಕೊಪ್ಪಳ ಕಾರ್ಯಕರ್ತ ವೀರೇಶ್ ತೆಗ್ಗಿನಮನಿ ವಂದಿಸಿದರು, ಮಂಜುನಾಥ್ ಗುಳೆದಗುಡ್ಡ, ಬೀರಪ್ಪ, ಪ್ರವೀಣ್, ಅನು, ರೇಷ್ಮಾ, ಪ್ರಕಾಶ್, ನಿರೀಕ್ಷಾ, ಸಾವಿತ್ರಿ, ವಿಶ್ವಾಸ್ಮಿತ್, ಮಂಜುನಾಥ್, ಆನಂದ್, ಭೀಮೇಶ್, ಮಂಜುನಾಥ್ ಚಿತ್ರಗಾರ, ವೆಂಕಟೇಶ್, ಅನ್ನಪೂರ್ಣ, ವಿಜಯಲಕ್ಷ್ಮಿ  ಮುಂತಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *