ಡಿಸೆಂಬರ್ 29ಕ್ಕೆ ಖಿದ್ಮಾ 5ನೇ ವಾರ್ಷಿಕೋತ್ಸವ.

Spread the love

ಡಿಸೆಂಬರ್ 29ಕ್ಕೆ ಖಿದ್ಮಾ 5ನೇ ವಾರ್ಷಿಕೋತ್ಸವ.

ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಡಿಸೆಂಬರ್ 29 ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಕುವೆಂಪು ಸಭಾಂಗಣದಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ದಿನಾಚರಣೆ ಹಾಗೂ ಸಾಹಿತ್ಯ, ಸಂಸ್ಕೃತಿ ಹಾಗೂ ಸೌಹಾರ್ದ ಸಮ್ಮಿಲನವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಹಿರಿಯ ಸಾಹಿತಿ, ದೂರದರ್ಶನ ವಿಶ್ರಾಂತ ಅಧಿಕಾರಿ ರಾ ಸು ವೆಂಕಟೇಶ ಅವರು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಯೂಸಫ್. ಹೆಚ್ .ಬಿ, ಡಾ ಸುರೇಶ್ ಬಾಬು ಬಿ.ನ್, ಡಾ. ಎಂ.ಎಂ ಭಾಷಾ ನಂದಿ, ಸಿನಾನ್ ಇಂದಬೆಟ್ಟು, ಡಾ. ಕೆ.ಜಿ ಗೋಪಾಲಕೃಷ್ಣ,‌ ಡಾ. ಕಾವ್ಯ ಎಸ್.ಟಿ ಚಂದ್ರಪ್ಪ, ಕುಮಾರಿ ಗೌತಮಿ ಜೈನ್, ಶಾಂತ ಜಯಾನಂದ್ ಹಾಗೂ ಯೂಸುಫ್ ರೆಂಜಲಾಡಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಮತ್ತು ಸಾಂಸ್ಕೃತಿಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಯೋಜಕ ಆಮಿರ್ ಅಶ್ಅರೀ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *