ಸಮಾಜ ಸೇವೆಯ ಈಶ ಸೇವೆ ಎಂದು ಮುಂದಾದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮಸಂಸ್ಥೆ.
ಇಡಿ ದೇಶವೇ ಕೋರೊನ ಎಂಬ ಮಹಾಮಾರಿ ಯಿಂದ ಸಂಕಷ್ಟಕ್ಕೆ ಹಿಡಾಗಿರುವ ಸಂಧರ್ಭದಲ್ಲಿ ಬಡಸೊಂಕಿತರಿಗೆ ಕಷ್ಟ ಕಾಲದಲ್ಲಿ ಅದೆಷ್ಟು ಜನರಿಗೆ ಆರ್ಥಿಕ ಸಹಾಯ ನೀಡಿ, ಆ ಬಡ ಸೊಂಕಿತರ ಪಾಲಿಗೆ ಮುಂದಾದ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮಸಂಸ್ಥೆ. ಈ ಕೋರೋನಾ ಮಹಾಮಾರಿ ರೋಗವು ಅತ್ಯಂತ ಅತೀ ವೇಗದಲ್ಲಿ ಹರಡುವ ದರಿಂದ ಜನರು ಹೆಚ್ಚೆತ್ತು ಕೊಂಡು ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು ಯಾರು ಈ ರೋಗ ಬಂದಿದೆ ಎಂದು ಆತಂಕ ಪಟ್ಟು ದೃತಿಗೆಡದೆ ಧೈರ್ಯದಿಂದ ಆರೋಗ್ಯ ಇಲಾಖೆಯ ನಿಯದಂತೆ ಎಲ್ಲರೂ ಪಾಲನೆ ಮಾಡಬೇಕು. ಮೊದಲು ಜೀವ ತದನಂತರ ಜೀವನ ಅನ್ನುವುದು ಎಲ್ಲರೂ ಅರಿತು ಕೊಳ್ಳಬೇಕು. 25/05/2021 ರ ಮಂಗಳವಾರ ಇವತ್ತು ಬೆಳಿಗ್ಗೆ ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲ್ಲೂಕಿನ H.ಕಡದಕಟ್ಟೆ ಎಂಬ ಹಳ್ಳಿಯಲ್ಲಿ ವಾಸವಿರುವ ಅಂಧ ವಿಶೇಷಚೇತನರ ಕುಟುಂಬವೊಂದು ಈ ಲಾಕ್ಡೌನ್ ವಿದಿಸಿದ್ದ ಪರಿಣಾಮದಿಂದ ಜೀವನವನ್ನು ನಡೆಸುವುದಕ್ಕೆ ಆಗದ ಪರಿಸ್ಥಿತಿಯಲ್ಲಿ ಇರುವುದು ನಮ್ಮ ಗಮನಕ್ಕೆ ಕಂಡು ಬಂದಾಗ ನಮ್ಮ ಸಕ್ಷಮ ಸಂಸ್ಥೆ ಶಿವಮೊಗ್ಗ ದ ವತಿಯಿಂದ ಆ ವಿಶೇಷಚೇತನರಿಗೆ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನು ಮತ್ತು ವಿಶೇಷಚೇತನರ ಮಾಸಾಶನದ ವೈದ್ಯಕೀಯ ಪ್ರಮಾಣ ಪತ್ರ (UDID) ಕಾರ್ಡ್ ನ್ನೂ ಮಾಡಿಸಿಕೊಡಲಾಯಿತು. ಒಟ್ಟಿನಲ್ಲಿ ನಿಜಕ್ಕೂ ನಿಜವಾದ ಬಡ ಹಾಗೂ ನಿಗರ್ತಿಕ ಕುಟುಂಬಗಳು ಈ ಕೋವಿಡ್ 19 ರ ಲಾಕ್ ಡೌನ್ ಒಡೆತಕ್ಕೆ ನಲುಗಿದ್ದು, ಈ ಕುಟುಂಬಗಳಿಗೆ ಒಣಗಿದ ಸಸ್ಸಿಗಳಿಗೆ ನೀರು ಬಿಟ್ಟಂತ್ತಾಗಿದೆ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮಸಂಸ್ಥೆಯು ಹಿಗೇ ಬಡವರ ಸೇವೆಗಾಗಿ ಸದಾ ಮುಂದಾಗಲಿ, ಈ ಸಂಸ್ಥೆಗೆ ಇನ್ನೂ ಹೆಚ್ಛಿನ ಶಕ್ತಿ ನೀಡಲೆಂದು ಆರೈಸುವೆವು.
ವರದಿ – ಮಂಜುನಾಥ.ಎಸ್.ಕೆ.
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರತೆ ಶಿವು 😊🙏 ನೀವು ನಿಜವಾಗಿಯೂ ಮಾದರಿ. ಈ ರಾಜಕೀಯ ಪಕ್ಷದವರಿಗೆ.ನನ್ನ ತಮ್ಮ ಅಂತ ಹೇಳಿಕೊಳ್ಳೋಕೆ ಗೌರವ ಕೂಡ. 😊🙏🇮🇳💛❤️
ಧನ್ಯವಾದಗಳು ಮೇಡಂ, ಅವರ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಕೈ ಜೋಡಿಸಿ ಮೇಡಂ.