Highways are the nerves of the country ಅನ್ನುವ ಮಾತನ್ನು ಅಕ್ಷರಶಃ ನಿಜ ಮಾಡಿದವರು ನಮ್ ಅಟಲ್ ಜೀ.
ಇಂದು ನಾವು ಎಕ್ಸ್ಪ್ರೆಸ್ ಹೆದ್ದಾರಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ದೇಶವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅರುಣಾಚಲದವರೆಗೆ ಭಾವನಾತ್ಮಕವಾಗಿ ಬಂದಿಯಾಗಿದ್ದ ಭಾರತಮಾತೆಯನ್ನು ಹೆದ್ದಾರಿಗಳ ಮೂಲಕ ಸಂಪರ್ಕಿಸಿದವರು ಅಟಲ್ ಜಿ ಇಂದಿನ ಕೀಳುಮಟ್ಟದ ದ್ವೇಷವೇ ತುಂಬಿರುವ ರಾಜಕಾರಣದಲ್ಲಿ ಅಟಲ್ ಜಿ ಅವರಿಂದ ಇಂದಿನ ರಾಜಕಾರಣಿಗಳು ಕಲಿಯುವುದು ಬಹಳಷ್ಟು ಇದೆ ಅವರಲ್ಲಿನ ಕೆಲವೊಂದಿಷ್ಟು ಅಂಶಗಳನ್ನಾದರೂ ಇಂದಿನವರು ಕಲಿತರೆ, ರಾಜಕಾರಣ ಅಲ್ಪಸಲ್ಪವಾದರೂ ತಿಳಿಯದೆನೋ. ಲೋಕಸಭೆಯ ಟಿಕೆಟ್ ನಿಂದ ಹಿಡಿದು ಗ್ರಾಮ ಪಂಚಾಯತಿಯ ಟಿಕೆಟ್ ನವರೆಗೆ ಎಲ್ಲಾ ಟಿಕೆಟ್ ಗಳು ನನಗೆ ನನ್ನ ಕುಟುಂಬಕ್ಕೆ ಇರಲಿ ಎನ್ನುವ ಇಂದಿನ ರಾಜಕಾರಣಿಗಳಲ್ಲಿ ಸಾಮಾನ್ಯ ಕಾರ್ಯಕರ್ತರು ಅಧಿಕಾರದ ಗದ್ದುಗೆಯನ್ನು ಹಿಡಿಯಬೇಕು ಎನ್ನುತ್ತಿದ್ದ ಆ ಮೇರು ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ ಎಲ್ಲಿ ಒಂದಕ್ಕೊಂದು ಹೋಲಿಸುವುದು ಅಸಾಧ್ಯವೇ ಸರಿ ತಂತ್ರ ಕುತಂತ್ರಗಳ ಮೂಲಕ ಅಧಿಕಾರವನ್ನು ಹಿಡಿಯುವುದೇ ಮುಖ್ಯವಾಗಿ ಪ್ರಸ್ತುತ ರಾಜಕಾರಣದಲ್ಲಿ ಕೇವಲ ಒಂದು ಮತದಿಂದ ಸರ್ಕಾರವೇ ಪತನಗೊಂಡರು ಹಸನ್ಮುಖಿಯಾಗಿ ದೇಶದ ಎದುರು ನಿಂತವರು ಅಟಲ್ ಜಿ ಬಹುಶಃ ಈಗಿನ ಯುವಕರಾದ ನಾವು ಅಟಲ್ ಜಿ ಅವರ ಆಳ್ವಿಕೆಯನ್ನು ನೋಡಿಲ್ಲ ಆದರೆ ಅವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಈ ದೇಶದ ಮುಂದಿನ ಮೂರ್ನಾಲ್ಕು ಪೀಳಿಗೆಗಳು ಕೂಡ ನೆನಪಿಡುತ್ತವೆ ಇದೆ ಅಲ್ಲವೇ ಒಬ್ಬ ಜನನಾಯಕ ತನ್ನ ದೇಶಕ್ಕೆ ಮಾಡ ಬಹುದಾದ ಉತ್ಕೃಷ್ಟ ಸೇವೆ ಎಂದರೆ ಅಟಲ್ ಜಿ ಅವರಿಗೆ ಇನ್ನೊಂದು ಅವಧಿಗೆ ಪ್ರಧಾನಿಯಾಗುವ ಅವಕಾಶವನ್ನು ಈ ದೇಶದ ಜನತೆ ಕೊಟ್ಟಿದ್ದರೆ ಬಹುಷ್ಯ ಭಾರತ ಇನ್ನೂ ಹತ್ತು ವರ್ಷ ಮುಂದೆ ಇರುತ್ತಿದ್ದೇನೆ ಆದರೆ ವಿಧಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ಸ್ವತಂತ್ರ ನಂತರ ಮೊದಲ ಪ್ರಧಾನಿ ಜವಾಲಾಲ್ ನೆಹರು ಭಾರತದ ನಿರ್ಮಾಪಕರು ಎನಿಸಿಕೊಂಡರೆ 1991ರ ಆರ್ಥಿಕ ಸುಧಾರಣೆಗಳ ನಂತರದ ಭಾರತದ ನಿರ್ಮಾಪಕರು ಎನಿಸಿಕೊಂಡವರು ಅಟಲ್ ಜೀ ಅವರೆಂದೂ ಪಕ್ಷ ಬೇದ ಮಾಡಿದವರಲ್ಲ ವಿರೋಧಿಗಳನ್ನು ವೈಯಕ್ತಿಕವಾಗಿ ನಿಂದಿಸಿದವರಲ್ಲ ರಾಗ ದ್ವೇಷಗಳನ್ನು ಮಾಡಿದವರಲ್ಲ ಇಂತಹ ಗುಣದಿಂದಲೇ ಅವರು ನರಸಿಂಹರಾವ್ ಪ್ರಧಾನಿಯಾಗಿದ್ದಾಗ ವಿಪಕ್ಷ ನಾಯಕರಾಗಿದ್ದ ವಾಜಪೇಯಿ ಅವರು ಜಯವಾದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡರು. ಅಟಲ್ ಜಿ ಅವರ ಮಾತುಗಳು ಭಾಷಣಗಳು ಈ ದೇಶದ ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರಿಗೆ ಜನಸಾಮಾನ್ಯರಿಗೆ ಇಂದಿಗೂ ಕೂಡ ಸ್ಪೂರ್ತಿಯ ಸೆಲೆಯಾಗಿವೆ. ಮೇ 28 1996ರ ಸಂಸತ್ ಭಾಷಣವು ನೆಹರು ಅವರ ಸ್ವತಂತ್ರ ದಿನದ ಭಾಷಣದ ನಂತರದ ಒಂದು ಶ್ರೇಷ್ಠಭಾಷಣವಾಗಿದೆ ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ಉಳಿಯುವುದು ಈ ದೇಶ ಮಾತ್ರ ನಮ್ಮ ಬೆನ್ನೆಲುಬುಗಳ ಮೇಲೆ ಮೂಡಲಿ ಭಾರತ ಎನ್ನುತ್ತಿದ್ದವರು ಅಟಲ್ ಬಿಹಾರಿ ವಾಜಪೇಯಿ ಅವರು ಅವರು ಹಾಕಿಕೊಟ್ಟ ಪರಂಪರೆಯಲ್ಲಿ ನಾಳಿನ ಭಾರತವನ್ನು ನಾವೆಲ್ಲ ಕಟ್ಟೋಣ ಏನಂತೀರಾ…..
ಇಂತಿ ನಿಮ್ಮ ಚೇತನ್ ಗೌಡ