ಕೊಪ್ಪಳ ನ ಗರದಲ್ಲಿ ಜ, 6 ರಂದು ಇಡೀ ದಿನ ಬೃಹತ್ ಮುಷ್ಕರ.
ಕೊಪ್ಪಳ : ನಗರದಲ್ಲಿ ಜನವರಿ 6 ರಂದು ಸೋಮವಾರ ಇಡೀ ದಿನ ಬೃಹತ್ ಮುಷ್ಕರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹನುಮೇಶ್ ಕಡೆಮನಿ ಸಭೆಯಲ್ಲಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಡಾ: ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬೃಹತ್ ಮುಷ್ಕರದ ಅಂತಿಮ ಪೂರ್ವಭಾವಿ ಸಭೆಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹನುಮೇಶ್ ಕಡೆಮನಿ ಮಾತನಾಡಿ ಬೃಹತ್ ಮುಷ್ಕರಕ್ಕೆ ಊಟಕ್ಕೆ ಮತ್ತು ಪ್ರತಿಭಟನಾ ಬೃಹತ್ ಮೆರವಣಿಗೆ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಗಿದೆ,ಮಾದಿಗ ಸಮಾಜ,ಚಲವಾದಿ ಸಮಾಜ, ಮುಸ್ಲಿಮ್ ಸಮಾಜ, ಕ್ರಿಶ್ಚಿಯನ್ ಸಮಾಜ,ಮ್ಯಾದರ್ ಸಮಾಜ,ಲಂಬಾಣಿ ಸಮಾಜ, ಲಿಂಗಾಯತ ಸಮಾಜ, ಹಾಲುಮತ ಸಮಾಜ, ವಾಲ್ಮೀಕಿ ಸಮಾಜ,ಭೋವಿ ಸಮಾಜ, ಭಜಂತ್ರಿ ಸಮಾಜ, ಮಡಿವಾಳ ಸಮಾಜ, ಶ್ರೀ ಗುರುಬಸವ ಸಮಾಜ, ಮೋಚಿ ಸಮಾಜ, ಹಡಪದ ಸಮಾಜ, ಪಂಚಮಸಾಲಿ ಸಮಾಜ, ಸುಡುಗಾಡು ಸಿದ್ದರ ಸಮಾಜ, ಚನ್ನ ದಾಸರ ಸಮಾಜ, ಶಿಳ್ಳೆಕ್ಯಾತರ ಸಮಾಜ, ಕುರುಬ ಸಮಾಜ,ಸವಿತಾ ಸಮಾಜ, ಹಡಪದ ಅಪ್ಪಣ್ಣ ಯುವಕರು ಸಂಘ, ದಲಿತ ಸಂಘಟನೆಗಳು, ಅಲ್ಪಸಂಖ್ಯಾತರ ಹಿಂದುಳಿದ ವರ್ಗದವರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಮಹಿಳಾ ಸಂಘಟನೆ,ಕರ್ನಾಟಕ ರಕ್ಷಣಾ ವೇದಿಕೆಗಳ ಬಣಗಳು,ಮಾನವ ಹಕ್ಕುಗಳ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು,ಜಿಲ್ಲಾ ವಕೀಲರ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕ, ಗ್ರಾಮ ಘಟಕಗಳು,ನೌಕರರ ಸಂಘ, ಮುಸ್ಲಿಮ್ ಪಂಚ್ ಕಮಿಟಿಗಳು, ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್,ಕಾರ್ ಟ್ಯಾಕ್ಸಿಗಳ ಸಂಘಟನೆ, ಆಟೋ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳ ಸಂಘ, ಬ್ಯಾಂಕ್ ನೌಕರರ ಸಂಘ,ಹೋಟೆಲ್ ಮಾಲೀಕರ ಸಂಘ, ವರ್ತಕರ ಸಂಘ,ಬಂಗಾರದ ಅಂಗಡಿಗಳ ಸಂಘ, ಬಟ್ಟೆ ವ್ಯಾಪಾರಿಗಳ ಅಂಗಡಿಗಳೂ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಸಂಪೂರ್ಣ ಬೆಂಬಲಿಸಿದ್ದು, ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದು ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ,ಅಕಸ್ಮಾತ್ ಯಾವುದಾದರೂ ಅಂಗಡಿಗಳು ಮುಚದಿದ್ದರೆ ಅವರಿಗೆ ನಮ್ಮ ಸಂಘಟನೆಗಳ ಯುವಕರು ಬೈಕುಗಳನ್ನು ತೆಗೆದುಕೊಂಡು ಹೋಗಿ ಗುಲಾಬಿ ಹೂ ಕೊಡುವ ಮೂಲಕ ಮನವಿ ಮಾಡಿಕೊಳ್ಳುತ್ತಾರೆ, ದ್ವಿಚಕ್ರ ವಾಹನಗಳಿಂದ ಶಬ್ದ ಮಾಡುತ್ತಾ ಓಡಾಡುವುದನ್ನು ನಿರ್ಬಂಧಿಸಲಾಗಿದೆ, 30ಕ್ಕೂ ಹೆಚ್ಚು ಸಂಘಟನೆಗಳ ನಾಯಕರು ಇರುವುದರಿಂದ ಸ್ವಯಂ ಪ್ರೇರಣೆಯಿಂದ ಎಲ್ಲರೂ ಶಿಸ್ತನ್ನು ಕಾಪಾಡಿಕೊಳ್ಳುತ್ತಾರೆ, ನಗರದ ತಾಲೂಕಾ ಕ್ರೀಡಾಂಗಣದಿಂದ ಜನವರಿ 6 ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಪಟನಾ ಮೆರವಣಿಗೆ ಪ್ರಾರಂಭಗೊಂಡು ಸಾಲಾರ್ ಜಂಗ್ ರಸ್ತೆ ಮೂಲಕ ಡಾ : ಬಿ.ಆರ.ಅಂಬೇಡ್ಕರ್ ವೃತ್ತಕ್ಕೆ ತಲುಪಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮುಂದುವರೆದು ಶಾರದಾ ಟಾಕೀಸ್ ತಿರುವಿನಿಂದ ಗಡಿಯಾರ ಕಂಬ ಸುತ್ತಿ ಜವಾಹರ್ ರಸ್ತೆ ಮೂಲಕ ಅಶೋಕ ವೃತ್ತದಲ್ಲಿ ಸಂಜೆ ಐದರವರಿಗೆ ಬೃಹತ್ ಬಹಿರಂಗ ಸಭೆ ನಡೆಯಲಿದ್ದು,
ರಾಜ್ಯಕ್ಕೆ ಮಾದರಿಯಾಗುವ ಹೋರಾಟ ಇದಾಗಲಿದೆ ಎಂದು ಹೇಳಿದರು,
ಸಂವಿಧಾನ ಸಂರಕ್ಷಣಾ ಸಮಿತಿಯ ಹಿರಿಯ ಮುಖಂಡ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು,
ಸಭೆಯಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ರಾಮಣ್ಣ ಚೌಡಕಿ, ಮಂಜುನಾಥ್ ಗೊಂಡಬಾಳ, ಪರಶುರಾಮ್ ಕೆರೆಹಳ್ಳಿ, ಕೌಸರ್ ಕೋಲ್ಕಾರ್,ಕೆ,ಬಿ,ಗೋನಾಳ್,ಬಸವರಾಜ್ ಪೂಜಾರ್, ಸಲೀಮ್ ಖಾದ್ರಿ, ಆದಿಲ್ ಪಟೇಲ್,ರಮೇಶ್ ಗಿಣಿಗೇರಿ, ಕಾಶಪ್ಪ ಚಲವಾದಿ, ಈಶಣ್ಣ ಕೊರ್ಲಳ್ಳಿ ಮುಂತಾದ ಅನೇಕರು ಸಲಹೆ ಸೂಚನೆ ನೀಡಿದರು,