ಶಿವನ,,,,,,,,,
ಶಿವನ ಮನದೊಳಗಿನ
ಭಾವನೆಗಳೆಲ್ಲ ಬತ್ತಿಹೋಗಿ
ಕಾವ್ಯ ಕುಸುಮಗಳು ಬಾಡಿವೆ.
ಶಿವನ ಮಸ್ತಕದೊಳಗಿನ
ಪದಪುಂಜಗಳು ಕೃಶವಾಗಿ
ಹದವರಿತ ಕವಿತೆಗಳು ನಲುಗಿವೆ.
ಶಿವನ ಅನುಭವದೊಳಗಿನ
ಜೀವನಾಮೃತಗಳು ಬೆಂಡಾಗಿ
ತತ್ತ್ವ ವಚನಗಳು ಕಾಣದಾಗಿವೆ.
ಶಿವನ ಬದುಕಿನೊಳಗಿನ
ಅನುಭವ ಪಾಠಗಳು ನಿರಸವಾಗಿ
ಕಥೆ ಲೇಖನಗಳು ಕಣ್ಮರೆಯಾಗಿವೆ.
ಶಿವನ ಕವಿಸಮಯದೊಳಗಿನ
ಕಲ್ಪನಾ ಲಹರಿಗಳು ಮರೀಚಿಕೆಯಾಗಿ
ಬರಹಗಳು ಚಿರನಿದ್ರೆಗೆ ಜಾರಿವೆ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಮವಮಂಟಪ, ದಾವಣಗೆರೆ.
ದೂ.ಸಂ.9591417815.