ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಶ್ರೀ ಇಂಧುಧರ್ ರವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯುತು.
ಶಿವಮೊಗ್ಗದ 220/110/11 ಕೆವಿ ಎಂ. ಆರ್. ಎಸ್. ನಲ್ಲಿ ಶ್ರೀ ಯುತ ಇಂಧುಧರ್ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ರವರ ಸಾರಥ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸುರಕ್ಷತಾ ಜಾಗೃತಿ ಕಾರ್ಯಾಗಾರ ಹಮ್ಮಿಕೊಂಡು ನೌಕರರು ಹಾಗೂ ಅಧಿಕಾರಿ ವೃಂದದವರಿಗೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಶ್ರೀ ಇಂಧುಧರ್ ಸರ್ ರವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಈ ಬಾರಿ ಅತಿಥಿಯಾಗಿ ಆಗಮಿಸಿದ ಡಾ. ಮೋಹನ್ ಚಂದ್ರಗುತ್ತಿ ರವರು ಮಾತನಾಡಿ ನೌಕರರ ಜೀವ ಅಮೂಲ್ಯವಾದದ್ದು ಸುರಕ್ಷತಾ ಕ್ರಮ ಹಾಗೂ ಸುರಕ್ಷತಾ ಸಾಮಗ್ರಿಗಳನ್ನು ಉಪಯೋಗಿಸಿ ಶಿಸ್ತು ಮತ್ತು ಸಂಯಮದಿಂದ ಕಾರ್ಯ ನಿರ್ವಹಿಸುವುದರಿಂದ ಅಪಘಾತ ತಡೆಯಬಹುದು ಎಂದು ಮಾತನಾಡಿದರು ಈ ವೇಳೆ ನೌಕರರ ಮೇಲಿನ ಕಾಳಜಿ ಹಾಗೂ ಅಪಘಾತ ರಹಿತವಾಗಿ ಕಾರ್ಯನಿರ್ವಹಿಸಲು ಕಾರ್ಯಾಗಾರಗಳನ್ನ ಮಾಡುತ್ತಿರುವ ಕಾರ್ಯನಿರ್ವಾಹಕ ಇಂಜಿನಿಯರ್ ಇಂಧುಧರ್ ರವರ ಕಾರ್ಯಕ್ಕೆ ನೌಕರರು ಹಾಗೂ ಅಧಿಕಾರಿಗಳು ಅಭಿನಂದಿಸಿದರು.