ಕೂಡ್ಲಿಗಿ:ಕ.ರಾ.ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ಸೂಲದಹಳ್ಳಿ ಬಸವರಾಜ.
ವಿಜಯನಗರ ಜಿಲ್ಲೆ ಕೂಡ್ಲಿಗಿ:ಕರ್ನಾಟ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಉ.ಮಂಜುನಾಥ ಬಣ), ಕೂಡ್ಲಿಗಿ ತಾಲೂಕು ಅಧ್ಯಕ್ಷರನ್ನಾಗಿ ಸೂಲದಹಳ್ಳಿ ಎಸ್.ಬಸವರಾಜರನ್ನು ನೇಮಿಸಲಾಗಿದೆ. ಈ ಕುರಿತು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ, ಕೆಕೆ.ಹಟ್ಟಿ ದೇವರಮನೆ ಮಹೇಶ ಪ್ರಕಟಣೆ ನೀಡಿದ್ದಾರೆ. ಜ1ರಂದು ಪ್ರವಾಸಿ ಮಂದಿರದಲ್ಲಿ ಜರುಗಿದ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ, ಸಭೆಯಲ್ಲಿ ಸರ್ವಾನುಮತದಿಂದ ವಿವಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪ್ರಕಟಣೆ ನೀಡಿದ್ದಾರೆ. ಪದಾಧಿಕಾರಿಗಳ ಅಯ್ಕೆ ವಿವರ ಹೀಗಿದೆ:- ಕೂಡ್ಲಿಗಿ ತಾಲೂಕು ಅಧ್ಯಕ್ಷರಾಗಿ ಸೂಲದಹಳ್ಳಿಯವಾಸಿಗಳು, ಹಾಗೂ ವಕೀಲರಾದ ಎಸ್.ಬಸವರಾಜ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಬೆಳ್ಳಗಟ್ಟೆ ಜಿ.ಹುಲಿಕುಂಟೆಪ್ಪ, ಕಾರ್ಯದ್ಯಕ್ಷರಾಗಿ ಕೂಡ್ಲಿಗಿ ಕಾಟೇರ ಶೇಷಪ್ಪ, ಬೆಳ್ಳಗಟ್ಟೆ ಗ್ರಾಮ ಘಟಕ ಅಧ್ಯಕ್ಷರಾಗಿ ಹೊನ್ನೂರಪ್ಪ, ಕೆಕೆ ಹಟ್ಟಿ ಗ್ರಾಮ ಘಟಕ ಅಧ್ಯಕ್ಷರಾಗಿ ಅಂಜಿನಪ್ಪ, ತಾಲೂಕು ಕಾರ್ಯದರ್ಶಿಯಾಗಿ ಗೋವಿಂದಪ್ಪ, ಸಂಡೂರು ತಾಲೂಕು ಸಹಕಾರ್ಯದರ್ಶಿಯಾಗಿ ಕಾಳಿಂಗೇರಿ ಹೆಚ್.ಬಿ.ಚಂದ್ರಶೇಖರ, ಸಂಡೂರು ತಾಲೂಕು ಸಂಚಾಲಕರಾಗಿ ತುಮುಟಿ ಕಾಶಿನಾಥರವರನ್ನು ಆಯ್ಕೆ ಮಾಡಲಾಯಿತು. ಕೂಡ್ಲಿಗಿ ತಾಲೂಕು ಸೇರಿದಂತೆ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ವಿವಿದ ಘಟಕಗಳಲ್ಲಿ. ವಿವಿದ ಕಾರಣಗಳಿಂದಾಗಿ ತೆರವಾಗಿದ್ದ, ಸ್ಥಾನಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತದನಂತರ ದೇವರ ಮನೆ ಮಹೇಶರವರು ಮಾತನಾಡಿ, ಸಾಗುವಳಿ ರೈತರಿಗೆ ಸರ್ಕಾರ ಶೀಘ್ರ ಪಟ್ಟ ಕೊಡಬೇಕು, ಹಾಗೂ ರೈತರ ವಿವಿದ ಹಕ್ಕೊತ್ತಾಯಗಳನ್ನು ತುರ್ತಾಗಿ ಈಡೇರಿಸಬೇಕು. ನಿರ್ಲಕ್ಷ್ಯ ಧೋರಣೆ ತಾಳಿದಲ್ಲಿ, ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದರು. ನೂತನ ಅಧ್ಯಕ್ಷರಾದ ಸೂಲದಹಳ್ಳಿ ಬಸವರಾಜ ಸೇರಿದಂತೆ, ಅನೇಕ ಮುಖಂಡರು ಪತ್ರಕರ್ತರನ್ನುದ್ಧೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಹಕಾರ್ಯದರ್ಶಿ ತುಂಬರಗುದ್ದಿ ಓಬಳೇಶ, ಬಳ್ಳಾರಿ ಜಿಲ್ಲಾಧ್ಯಕ್ಷ ಕೆ.ದೇವೇಂದ್ರಪ್ಪ, ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ, ಸಂಡೂರು ತಾಲೂಕಾಧ್ಯಕ್ಷ ಕೆ.ಶಾಂತಕುಮಾರ, ಬಳ್ಳಾರಿ ಜಿಲ್ಲಾಕಾರ್ಯಧ್ಯಕ್ಷ ಎ.ಜಂಬಣ್ಣ, ರಾಜ್ಯ ಕಾರ್ಯದರ್ಶಿ ವಿ.ಎಸ್.ಶಂಕರ್, ಸಂಡೂರು ತಾಲೂಕು ಗೌರವಾಧ್ಯಕ್ಷ ಜಿ.ಮಲ್ಲಯ್ಯ, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಹೆಚ.ಚಂದ್ರಶೇಖರ, ಸಂಡೂರು ಪ್ರಧಾನ ಕಾರ್ಯದರ್ಶಿ ಎನ್.ಓಂಕಾರಪ್ಪ, ಸಂಡೂರು ತಾಲೂಕು ಉಪಾಧ್ಯಕ್ಷ ಶರಣಯ್ಯ ಸ್ವಾಮಿ, ಸಂಡೂರು ತಾಲೂಕು ಕಾರ್ಯಧ್ಯಕ್ಷ ರಫಿಕ್, ಕೆ.ಕೆ.ಹಟ್ಟಿ ಮಲಿಯಪ್ಪ, ಸಂಡೂರು ತಾಲೂಕು ಸಂಘಟನಾ ಕಾರ್ಯದರ್ಶಿ ಟಿ.ಒ.ನರಸಿಂಹಪ್ಪ, ಹೊಸಪೇಟೆ ತಾಲೂಕಾಧ್ಯಕ್ಷ ಶೇಖರಪ್ಪ, ಕಾಳಿಂಗೇರಿ ಗ್ರಾಮ ಘಟಕ ಅಧ್ಯಕ್ಷ ವಿ.ಬಿ.ಮಂಜುನಾಥ ಸೇರಿದಂತೆ. ರೈತ ಸಂಘದ ವಿವಿದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428