ಕಾ. ನಿ. ಪ. ಧ್ವನಿ. ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಅವರ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ : ಶ್ರೀಕಾಂತಗೌಡ  ಖಂಡನೆ.

Spread the love

ಕಾ. ನಿ. ಪ. ಧ್ವನಿ. ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಅವರ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ : ಶ್ರೀಕಾಂತಗೌಡ  ಖಂಡನೆ.

ಯಲಬುರ್ಗಾ: ಕರ್ನಾಟಕ ಕಾರ್ಯನಿರತ  ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡುರಗೆ  ಪತ್ರಿಕೋಧ್ಯಮಕ್ಕೂ ನಿವೃತ್ತಿ ಘೋಷಿಸಿ ಸನ್ಯಾಸತ್ವ ಸ್ವೀಕರಿಸುತ್ತೇನೆಂಬ  ಬಂಗ್ಲೆ ಮಲ್ಲೀಕಾರ್ಜುನ ಸವಾಲಿಗೆ ಉತ್ತರಿಸದೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆ ದಿಕ್ಕು ತಪ್ಪಿಸುವ ಕಾರ್ಯಕ್ಕೆ ಇಳಿದಿರುವುದು ವಿಷಾದಕರ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತಾಲೂಕ ಅಧ್ಯಕ್ಷ ಶ್ರೀಕಾಂತಗೌಡ ಮಾಲಿ ಪಾಟೀಲ್ ಹೇಳಿದರು.

ಪಟ್ಟಣದ ತಹಶೀಲ್ದಾರ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಮಾತನಾಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಕಳೆದ ಮೂರು ವರ್ಷಗಳಿಂದ ಪತ್ರಕರ್ತರ ಉಚಿತ ಬಸ್ ಪಾಸ್,ರಕ್ಷಣಾ ಕಾಯ್ದೆ, ಜೀವ ವಿಮೆ ಹಾಗೂ ಮಾಸಾಶನ ಕುರಿತಂತೆ ಸುವರ್ಣ ಸೌಧದ ಮುಂಭಾಗ ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಹೋರಾಟಗಳನ್ನು ಮಾಡಿದಂತ ಕೀರ್ತಿ ಕಾನಿಪ ಧ್ವನಿ ಸಂಘಟನೆಗಿದೆ.

ಬಂಗ್ಲೆ ಮಲ್ಲಿಕಾರ್ಜುನ ಎಲ್ಲೂ ಯಾರಿಗೂ ಅವಾಚ್ಛ ಶಬ್ದಗಳನ್ನಾಗಲಿ ತೇಜೋವಧೆ ಮಾಡುವದಾಗಲಿ ಮಾಡಿಲ್ಲ ಸುಮ್ಮನೆ ನಮ್ಮ ಸಂಘಟನೆಯ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆ ಯಾವಾಗಲೂ ಮೊಸರು ಗಡಿಗೆಯಲ್ಲಿ ಕಲ್ಲುಗಳನ್ನು ಹುಡುಕುವ ಕೆಲಸ ಮಾಡುತಿದೆ ಅದನ್ನ ಬಿಟ್ಟು ಪತ್ರಕರ್ತರ ಸೌಲಭ್ಯಗಳ ಸಲುವಾಗಿ ಬೀದಿಗಳಿದು ಹೋರಾಟ ಮಾಡಲಿ, ಮಲ್ಲಿಕಾರ್ಜುನ ಬಂಗ್ಲೆ ಹಾಕಿರುವ ಸವಾಲಿಗೆ ಧೈರ್ಯವಾಗಿ ಉತ್ತರಿಸಲಿ ಪತ್ರಕರ್ತರಿಗೆ ನೇಮಮಕಾತಿ ಆದೇಶ ಪತ್ರ ಕೊಡಿಸುವುದಕ್ಕೆ ಆಗುತ್ತೋ‌ ಇಲ್ಲವೋ ಎಂಬ ಸ್ಪಷ್ಟತೆ ಹಾಗೂ ವಾಸ್ತವಾಂಶ ರಾಜ್ಯದ ಸಮಸ್ತ ಪತ್ರಕರ್ತರಿಗೆ ಗೊತ್ತಾಗಬೇಕಿದೆ.ಸುಖಾ ಸುಮ್ಮನೆ ನಮ್ಮ ಸಂಘಟನೆಯ ಬಗ್ಗೆ ಮಾತ ನಾಡುವ ದಾಗಲಿ ತೇಜೋವಧೆ ಮಾಡುವುದಾಗಲಿ ಒಳ್ಳೆಯ ಬೆಳವಣಿಗೆ ಅಲ್ಲವೆಂದು ಹೇಳಿದರು.

ಇದೆ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಅವರು ಗ್ರೇಡ್ ಟು ತಹಶೀಲ್ದಾರ ವಿರುಪಾಕ್ಷಪ್ಪ ಹೋರಪೇಟಿ  ರವರಿಗೆ ಮನವಿ ಪತ್ರ ಸಲ್ಲಿಸಿದರು.

ಹೋರಾಟದಲ್ಲಿ ಭಾಗಿಯಾಗಿದ್ದ ಉಪಾಧ್ಯಕ್ಷರಾದ ಹುಸೇನ ಸಾಬ ಮೊತೇಖಾನ, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ಅಂಗಡಿ,ಸಹ ಕಾರ್ಯದರ್ಶಿ , ಬಸವರಾಜ ಮುಂಡರಗಿ, ಖಜಾಂಚಿ ಸಿ.ಎ.ಆದಿ ಸಂಘಟನೆ ಕಾರ್ಯದರ್ಶಿ ಮೌನೇಶ ಮದ್ಲೂರು , ನೀಲಪ್ಪ ಖಾನಾವಳಿ, ಶ್ಯಾಮೀದ ಸಾಬ ತಾಳಕೇರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  ವರದಿ : ಹುಸೇನ್ ಮೊತೇಖಾನ್

Leave a Reply

Your email address will not be published. Required fields are marked *