ಹೊಸತನದ ಸಂಕ್ರಮಣ
ಬಂದಿತು ಸುಗ್ಗಿಯ ಹಬ್ಬ
ತಂದಿತು ನವ ನಗುವ
ರೈತನ ಎದೆಯಲಿ ಗರ್ವ
ಬೆಂಕಿಯ ಹಾದು
ಬಣ್ಣವ ಹಚ್ಚಿ
ಹೊಸತನದಲ್ಲಿ ನಗುವ
ಭೀಷ್ಮನು ಮರಣಿಸಿದ
ಬ್ರಹ್ಮನು ಬ್ರಹ್ಮಾಂಡ ಸೃಷ್ಟಿಸಿದ
ಪಾರ್ವತಿಯು ಶಿವನ ವರಿಸಿದ
ಸಂಕ್ರಮಣದ ದಿನವಿದು
ಧನಸ್ಸನ್ನು ಧ್ಯಾನಿಸಿ
ಮಕರವ ಪ್ರವೇಶಿಸಿ
ಉತ್ತರಾಯಣದಲ್ಲಿ ಮೆರೆಯುವನು
ಸೂರ್ಯನು ಹೊಸತನದ ಸಂಕ್ರಮಣದಲ್ಲಿ
ಸುಮಾಶಿವಕುಮಾರ್ (ದಾವಣಗೆರೆ )
ಸಹ ಶಿಕ್ಷಕರು 6363071585