ನಾನೆಂದಿಗೂ..
ನನ್ನದಲ್ಲದ ಸ್ವತ್ತಿನ ಮೇಲೆ
ನಾನೆಂದಿಗೂ ಆಸೆ ಪಡಲಾರೆ.
ಸನಿಹ ಬೇಕೆಂಬ ಹಂಬಲವು
ನಾನೆಂದಿಗೂ ಹೊಂದಿರಲಾರೆ.
ಆಕರ್ಷಣೆಗೆ ಮರುಳಾಗಿ
ನಾನೆಂದಿಗೂ ಸೋಲಲಾರೆ.
ಪರರ ಸ್ವತ್ತು ನನಗೆ ಬೇಕೆಂದು
ನಾನೆಂದಿಗೂ ಬೆನ್ನಟ್ಟಲಾರೆ.
ನನಗಾಗಿ ದೇವ್ರು ಕೊಟ್ಟಿರುವುದನು
ನಾನೆಂದಿಗೂ ಬಿಟ್ಟುಕೊಡಲಾರೆ.
ನನ್ನ ಭಾವನೆಗಳಿಗೆ ಸ್ಪಂದಿಸುವರನು
ನಾನೆಂದಿಗೂ ಮರೆಯಲಾರೆ.
ಚೇತನ.ಎಂ.ಕೆ. (ಶಿವಪ್ರಿಯೆ).
ಚಿಕ್ಕಮಗಳೂರು